Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಾಮಲಿಂಗಾ ರೆಡ್ಡಿ ಚಾಲನೆ

By ANU News
November 10, 2026 1 Min Read
Comments Off on ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ರಾಮಲಿಂಗಾ ರೆಡ್ಡಿ ಚಾಲನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ಉದ್ಘಾಟಿಸಿದರು.

ವನ್ಯಜೀವಿ ಸಂರಕ್ಷಣೆ, ಪ್ರಾಣಿಗಳ ಕಲ್ಯಾಣ ಮತ್ತು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನೂತನ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆ ನೀಡಿದರು. ನೂತನ ಆಡಳಿತ ಕಚೇರಿ ‘ಅಡವಿ’, ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ, ಕ್ಯಾರಂಟೈನ್ ಬ್ಲಾಕ್, ನವೀಕೃತ ಮುಖ್ಯ ಪ್ರವೇಶ ದ್ವಾರ ಹಾಗೂ ಝೂ ಶಾಪ್ ಮತ್ತು ಸುವರ್ಣಮುಖಿ ಕೆಫೆಯನ್ನು ಉದ್ಘಾಟಿಸಿದರು.

ಅರಣ್ಯ ಸಿಬ್ಬಂದಿಯ ವಸತಿಗೃಹಗಳು ಹಾಗೂ ತೋಳ, ಚೀತಾ, ಎಮು, ರಿಯಾ ಮತ್ತು ಫೆಸೆಂಟ್ ಪಕ್ಷಿಗಳ ನೂತನ ಆವರಣಗಳಿಗೂ ಚಾಲನೆ ನೀಡಿದರು.

ಹಿಪ್ಪೋಪೊಟಮಸ್ ಚಿಕಿತ್ಸೆಯ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಮೃತಪಟ್ಟ ಪಶುವೈದ್ಯಾಧಿಕಾರಿ ಡಾ. ಸಮೀಕ್ಷ ಅವರ ಸ್ಮರಣಾರ್ಥ ಹಿಪ್ಪೋಪೊಟಮಸ್ ಬ್ಲಾಕ್ ಮತ್ತು ಮರಿಹಿಪ್ಪೋಪೊಟಮಸ್‌ಗೆ ‘ಸಮೀಕ್ಷ’ ಎಂದು ನಾಮಕರಣ ಮಾಡುವಂತೆ ಸಚಿವರು ಸೂಚಿಸಿದರು.

ಇದೇ ವೇಳೆ ಸಫಾರಿ ಪ್ರದೇಶದಲ್ಲಿ ಆನೆಗಳ ಆರೋಗ್ಯ, ಆರೈಕೆ ಮತ್ತು ಕಲ್ಯಾಣಕ್ಕಾಗಿ ನಿರ್ಮಿಸಿರುವ ‘ಸುವರ್ಣ ಆನೆ ಆರೈಕೆ ಕೇಂದ್ರ’ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. ಸಫಾರಿ ಮೂಲಕ ಉದ್ಯಾನವನದ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣಾ ಚಟುವಟಿಕೆಗಳನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ರವಿ ಬಿ.ಪಿ. ಸೇರಿದಂತೆ ಹಲವು ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಕ್ಲೌಡ್ ನೈನ್ ಆಸ್ಪತ್ರೆ ವೈದ್ಯರ ನೀರಲಕ್ಷ್ಯ ಆರೋಪ: ಕೋಮಾದಲ್ಲಿರುವ ಒಂದು ವರ್ಷದ ಮಗುವೀಣೆ ಆರೋಗ್ಯ ವಿಚಾರಿಸಿದ HDK

Next

ಮನೆಗಳ ಸಕ್ರಮ, ನಿವೇಶನ ಹಂಚಿಕೆ: ಬಿಡಿಎಯಿಂದ ನಾಲ್ಕು ಮಹತ್ವದ ನಿರ್ಧಾರಗಳು

Recent Posts

  • From fax machines to Instagram reels: PM Modi recalls 25 years of media transformation
  • ಫ್ಯಾಕ್ಸ್ ಯಂತ್ರದಿಂದ ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ: 25 ವರ್ಷಗಳಲ್ಲಿ ಮಾಧ್ಯಮ ಬದಲಾವಣೆಯ ಬಗ್ಗೆ ಮೋದಿ ಮಾತು
  • Two SPOs found dead in J&K’s Kishtwar; service weapons missing, terror angle suspected
  • ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ; ಶಸ್ತ್ರಾಸ್ತ್ರಗಳು ನಾಪತ್ತೆ, ಉಗ್ರರ ಕೈವಾಡ ಶಂಕೆ
  • ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗೆ ಸಾರ್ವಜನಿಕ ನಂಬಿಕೆ, ತಂತ್ರಜ್ಞಾನ ಅಗತ್ಯ: ಓಂ ಬಿರ್ಲಾ
Copyright 2026 — ANU News. All rights reserved. Blogsy WordPress Theme