Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

21 ವರ್ಷಗಳ ಬಳಿಕ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ; ಪಕ್ಷಭೇದ ಮರೆತು ಒಂದಾದ ಸದಸ್ಯರು

By Anu News
October 1, 2026 1 Min Read
0

ಬೆಳಗಾವಿ: ಗಡಿ ವಿವಾದದ ಹಿನ್ನೆಲೆಯಲ್ಲಿ ಸದಾ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 21 ವರ್ಷಗಳ ಬಳಿಕ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಹಾಗೂ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂಬ ನಿರ್ಣಯವನ್ನು ಬಹುಮತದಿಂದ ಅಂಗೀಕರಿಸಲಾಗಿದೆ.

ಕನ್ನಡಪರ ಸಂಘಟನೆಗಳ ನಿರಂತರ ಹೋರಾಟ ಹಾಗೂ ರಾಜ್ಯ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಿರ್ಣಯ ಮಂಡನೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪಕ್ಷಭೇದ ಮರೆತು ಬೆಂಬಲ ಸೂಚಿಸಿದ್ದು, ಮೇಜು ತಟ್ಟಿ ನಿರ್ಣಯವನ್ನು ಸ್ವಾಗತಿಸಿದರು.

ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 29ರಂದು ಬೆಳಗಾವಿ ಪಾಲಿಕೆಗೆ ಪತ್ರ ಬರೆದು, 1988ರ ವಿಧಾನಸಭೆ ನಿರ್ಣಯದಂತೆ ಕರ್ನಾಟಕ ಪರ ಗೊತ್ತುವಳಿ ಅಂಗೀಕರಿಸುವಂತೆ ಸೂಚಿಸಿತ್ತು. ಸರ್ಕಾರದ ನಿರ್ದೇಶನ ಪಾಲಿಸದಿದ್ದರೆ ಪಾಲಿಕೆಯನ್ನು ಸೂಪರ್‌ಸೀಡ್ ಮಾಡುವ ಸಾಧ್ಯತೆಯನ್ನೂ ತಿಳಿಸಲಾಗಿತ್ತು.

ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಸರ್ಕಾರದ ಪತ್ರವನ್ನು ಸಭೆಯ ಗಮನಕ್ಕೆ ತಂದ ಬಳಿಕ ಮೇಯರ್ ಪ್ರೀತಿ ಕಾಮಕರ್ ಅವರು ಕರ್ನಾಟಕ ಪರ ನಿರ್ಣಯಕ್ಕೆ ಅನುಮೋದನೆ ದೊರೆತಿರುವುದಾಗಿ ರೂಲಿಂಗ್ ನೀಡಿದರು.

ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಸದಸ್ಯರು ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಿರ್ಣಯವನ್ನು ವಿರೋಧಿಸಿ ಸಭಾ ಕಲಾಪವನ್ನು ಬಹಿಷ್ಕರಿಸಿ ಹೊರನಡೆದರು.

ಕನ್ನಡಪರ ಸಂಘಟನೆಗಳಿಂದ ವಿಜಯೋತ್ಸವ

ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರವಾಗುತ್ತಿದ್ದಂತೆಯೇ ಕನ್ನಡಪರ ಸಂಘಟನೆಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಭ್ರಮಿಸಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

2005ರ ನಿರ್ಣಯಕ್ಕೆ ತಿರುಗೇಟು

2005ರಲ್ಲಿ ಎಂಇಎಸ್ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಬೆಳಗಾವಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ ಅಂಗೀಕರಿಸಲಾಗಿತ್ತು. ಆ ನಿರ್ಣಯವನ್ನು ಮಹಾರಾಷ್ಟ್ರ ಸರ್ಕಾರವು ಗಡಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ತನ್ನ ವಾದಕ್ಕೆ ಬಳಸಿಕೊಂಡಿತ್ತು.

ಇದೀಗ ಎರಡು ದಶಕಗಳ ಬಳಿಕ ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ನಿರ್ಣಯ ಅಂಗೀಕಾರವಾಗಿರುವುದು ಗಡಿ ವಿವಾದದ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

Author

Anu News

Follow Me
Other Articles
Previous

Karnataka: New e-KYC app to simplify ration card verification, says Rizwan Arshad

Next

Belagavi civic body passes Karnataka integration resolution after 21 years

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • DK Shivakumar alleges bid to delete voters through Form 7 during SIR
    • SIR ಹೆಸರಲ್ಲಿ ಮತದಾರರ ಹೆಸರು ಅಳಿಸಲು ಸಂಚು: ಡಿಕೆಶಿ ಆರೋಪ
    • Bharavase Foundation takes cancer prevention message to Bengaluru workplace
    • Jog Falls may flow year-round under tourism department plan
    • ಮಳೆಗಾಲಕ್ಕಷ್ಟೇ ಜೋಗ ಸೀಮಿತವಲ್ಲ; ವರ್ಷವಿಡೀ ಜಲಧಾರೆಗೆ ಮಾಸ್ಟರ್ ಪ್ಲಾನ್
    Copyright 2026 — ANU News. All rights reserved. Blogsy WordPress Theme