Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಜೈವಿಕ ಇಂಧನ, ಹಸಿರು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕ–ಬಲ್ಗೇರಿಯಾ ಸಹಕಾರಕ್ಕೆ ಒತ್ತು; KSBDB ಅಧ್ಯಕ್ಷ ಎಸ್.ಈ. ಸುಧೀಂದ್ರ

By ANU News
October 21, 2026 2 Min Read
0

ಬೆಂಗಳೂರು: ಜೈವಿಕ ಇಂಧನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಬಲ್ಗೇರಿಯಾ ನಡುವೆ ಸಹಕಾರ ವಿಸ್ತರಿಸುವ ಕುರಿತು ಮಹತ್ವದ ಚರ್ಚೆ ನಡೆದಿದೆ. ಭಾರತಕ್ಕೆ ನಿಯೋಜಿತರಾಗಿರುವ ಬಲ್ಗೇರಿಯಾ ಗಣರಾಜ್ಯದ ರಾಯಭಾರಿ ಡಾ. ನಿಕೋಲಾಯ್ ಯಾಂಕೋವ್ ಅವರು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (KSBDB) ಅಧ್ಯಕ್ಷ ಎಸ್.ಈ. ಸುಧೀಂದ್ರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಸಭೆಯಲ್ಲಿ ಜಂಟಿ ಉಪಕ್ರಮಗಳು, ತಂತ್ರಜ್ಞಾನ ವರ್ಗಾವಣೆ, ಸುಸ್ಥಿರ ಹೂಡಿಕೆ ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿನ ಸಂಶೋಧನೆಗೆ ಸಹಕಾರ ನೀಡುವ ಕುರಿತು ಚರ್ಚಿಸಲಾಯಿತು. ಮುಂಬರುವ ನವೆಂಬರ್‌ನಲ್ಲಿ ಬಲ್ಗೇರಿಯಾದ ಪ್ರಮುಖ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಬೆಂಗಳೂರಿಗೆ ಭೇಟಿ ನೀಡಲಿದೆ ಎಂದು ರಾಯಭಾರಿ ಯಾಂಕೋವ್ ತಿಳಿಸಿದ್ದಾರೆ. ಬೆಂಗಳೂರು ಟೆಕ್ ಸಮಿಟ್ ನಡೆಯುವ ಸಂದರ್ಭದಲ್ಲಿ ಈ ಭೇಟಿ ನಿಗದಿಯಾಗಿದ್ದು, ಕರ್ನಾಟಕದೊಂದಿಗೆ ತಾಂತ್ರಿಕ ಮತ್ತು ಹಸಿರು ಇಂಧನ ಪಾಲುದಾರಿಕೆಯನ್ನು ಬಲಪಡಿಸುವುದು ನಿಯೋಗದ ಉದ್ದೇಶವಾಗಿದೆ.

ಬಲ್ಗೇರಿಯಾದ ನಿಯೋಗದ ಭೇಟಿಯನ್ನು ಸ್ವಾಗತಿಸಿದ ಸುಧೀಂದ್ರ, ಹಸಿರು ಇಂಧನ ಪರಿವರ್ತನೆಯಲ್ಲಿ ಕರ್ನಾಟಕದ ಪಾತ್ರ ಹಾಗೂ ರಾಜ್ಯದ ಹೊಸ ಜೈವಿಕ ಇಂಧನ ನೀತಿಯ ಕುರಿತು ವಿವರಿಸಿದರು. ಸಂಕುಚಿತ ಜೈವಿಕ ಅನಿಲ (CBG), ಜೈವಿಕ ಡೀಸೆಲ್ ಸಂಸ್ಕರಣೆ ಮತ್ತು ಕೃಷಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಸಹಭಾಗಿತ್ವದೊಂದಿಗೆ ಸಂಶೋಧನೆ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಲು ಮಂಡಳಿ ಸಿದ್ಧವಿದೆ ಎಂದು ತಿಳಿಸಿದರು.

ಜರ್ಮನಿ ಮಾದರಿಯ ಸಹಕಾರಕ್ಕೆ ಒತ್ತು

ಕಳೆದ ವರ್ಷ ತಮ್ಮ ನೇತೃತ್ವದಲ್ಲಿ ಜರ್ಮನಿಗೆ ತೆರಳಿದ್ದ ಮಂಡಳಿಯ 11 ಸದಸ್ಯರ ನಿಯೋಗದ ಭೇಟಿಯ ಅನುಭವವನ್ನು ಸುಧೀಂದ್ರ ಹಂಚಿಕೊಂಡರು. ಈ ಸಂದರ್ಭದಲ್ಲಿ ಫ್ರಾಂಕ್‌ಫರ್ಟ್‌ನ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತು. ಜರ್ಮನಿಯ ಫಾಕ್‌ಹೋಕ್ಷುಲೆ ಡಾರ್ಟ್‌ಮಂಡ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದಾಗಿ ಅವರು ತಿಳಿಸಿದರು.

ಹ್ಯಾಂಬರ್ಗ್ ಇನ್ವೆಸ್ಟ್ ಮೂಲಕ ಕರ್ನಾಟಕಕ್ಕೆ ₹1,000 ಕೋಟಿ ಹೂಡಿಕೆ ಸಂಬಂಧಿತ ಒಪ್ಪಂದವನ್ನು ತರುವಲ್ಲಿ ಭಾರತೀಯ ಕಾನ್ಸುಲೇಟ್‌ನ ಸಹಕಾರ ಮಹತ್ವದ್ದಾಗಿತ್ತು ಎಂದು ಸುಧೀಂದ್ರ ಹೇಳಿದರು. ಜರ್ಮನಿಯ ಸಂಸ್ಥೆಗಳೊಂದಿಗೆ ರೂಪಿಸಿದ ಸಂಶೋಧನೆ ಮತ್ತು ರಾಜತಾಂತ್ರಿಕ ಸಹಕಾರದ ಮಾದರಿಯನ್ನು ಬಲ್ಗೇರಿಯಾದ ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕಾ ಸಂಶೋಧನಾ ಕೇಂದ್ರಗಳೊಂದಿಗೂ ವಿಸ್ತರಿಸುವ ಉದ್ದೇಶವಿದೆ ಎಂದರು.

ಜರ್ಮನಿಯ ಫಾಕ್ಹೋಚ್ಶುಲೆ ಡಾರ್ಟ್ಮಂಡ್ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್ ಅಂಡ್ ಆರ್ಟ್ಸ್ ಸೇರಿದಂತೆ ಹಲವು ಪ್ರಮುಖ ವಿಶ್ವವಿದ್ಯಾಲಯಗಳೊಂದಿಗೆ ಮಹತ್ವದ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ, ಜರ್ಮನಿಯ ಹಣಕಾಸು ಸಂಸ್ಥೆ ಹ್ಯಾಂಬರ್ಗ್ ಇನ್ವೆಸ್ಟ್ ಮೂಲಕ ಕರ್ನಾಟಕಕ್ಕೆ ₹1,000 ಕೋಟಿ ಹೂಡಿಕೆ ತರುವ ಒಪ್ಪಂದಕ್ಕೂ ಕಚೇರಿಯ ಸಹಕಾರ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಜೈವಿಕ ಇಂಧನ ಸಂಶೋಧನಾ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳ (BRIDC) ಜಾಲದೊಂದಿಗೆ ಬಲ್ಗೇರಿಯಾದ ಕೈಗಾರಿಕಾ ಜೈವಿಕ ತಂತ್ರಜ್ಞಾನ ಸಾಮರ್ಥ್ಯವನ್ನು ಸಂಯೋಜಿಸುವುದರಿಂದ ಕೃಷಿ ಆಧಾರಿತ ಇಂಧನ ಉತ್ಪಾದನೆಗೆ ಉತ್ತೇಜನ ಸಿಗಲಿದೆ ಎಂದು ರಾಯಭಾರಿ ಯಾಂಕೋವ್ ಅಭಿಪ್ರಾಯಪಟ್ಟರು. ನವೆಂಬರ್‌ನ ನಿಯೋಗದ ಭೇಟಿ ಎರಡೂ ಕಡೆಯ ಹಸಿರು ತಂತ್ರಜ್ಞಾನ ಸಹಕಾರಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂಬ ವಿಶ್ವಾಸವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

Author

ANU News

Follow Me
Other Articles
Previous

‘ಪ್ರಧಾನಿ ಮೋದಿ ಕಾನೂನು, ಸಂವಿಧಾನಕ್ಕಿಂತ ಮೇಲಿದ್ದಾರಾ?’: ಖರ್ಗೆ ಪ್ರಶ್ನೆ

Next

Bulgarian Delegation to Visit Bengaluru in November to Explore Clean Energy Partnerships

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Five Arrested in Gold Smuggling Network From Bangladesh to Hyderabad
    • UN Condemns Drone Attacks in Sudan, Calls for Civilian Protection
    • ಸುಡಾನ್‌ನಲ್ಲಿ ಡ್ರೋನ್ ದಾಳಿಗೆ ವಿಶ್ವಸಂಸ್ಥೆ ಖಂಡನೆ; ನಾಗರಿಕರ ರಕ್ಷಣೆಗೆ ಆಗ್ರಹ
    • Priyank Kharge Targets Bhagwat, Demands RSS Register as Political Organisation
    • ಭಾಗವತ್‌ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ; ಆರ್‌ಎಸ್‌ಎಸ್ ರಾಜಕೀಯ ಸಂಘಟನೆಯಾಗಿ ನೋಂದಾಯಿಸಿಕೊಳ್ಳಲಿ ಎಂದು ಆಗ್ರಹ
    Copyright 2026 — ANU News. All rights reserved. Blogsy WordPress Theme