Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರಿಗೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ’ ಪ್ರದಾನ

By ANU News
October 4, 2026 1 Min Read
0

ಬೆಂಗಳೂರು: ಕನ್ನಡದ ಕಾರ್ಯಕ್ರಮಗಳು ಹಾಗೂ ಮಹಾತ್ಮರ ಜಯಂತಿಗಳು ಕೇವಲ ಆಚರಣೆ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳಿಗೆ ಸೀಮಿತವಾಗಬಾರದು. ಕನ್ನಡವನ್ನು ದೈನಂದಿನ ಬದುಕಿನಲ್ಲಿ ಬಳಸುವುದರ ಜತೆಗೆ ಮಹಾತ್ಮರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಆಚರಣೆಗಳಿಗೆ ನೈಜ ಅರ್ಥ ಬರುತ್ತದೆ ಎಂದು ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹಾಗೂ ಮಹಾತ್ಮರ ಜಯಂತಿಗಳು ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗುತ್ತಿವೆ. ಇಂತಹ ಆಚರಣೆಗಳ ಸಾಮಾಜಿಕ ಮಹತ್ವ ಕ್ರಮೇಣ ಕ್ಷೀಣಿಸುತ್ತಿರುವುದು ನೋವಿನ ಸಂಗತಿ ಎಂದು ಅವರು ವಿಷಾದಿಸಿದರು.

ಕನ್ನಡದ ಬೆಳವಣಿಗೆಗೆ ಭಾಷೆಯ ನಿರಂತರ ಬಳಕೆ ಅಗತ್ಯ. ಅದೇ ರೀತಿ ಮಹಾತ್ಮರ ಆದರ್ಶಗಳನ್ನು ಕೇವಲ ಭಾಷಣಗಳಲ್ಲಿ ಸ್ಮರಿಸುವುದಕ್ಕಿಂತ, ಅವುಗಳನ್ನು ನಡೆನುಡಿಯಲ್ಲಿ ಪಾಲಿಸುವ ಮೂಲಕ ಸಮಾಜದಲ್ಲಿ ಸದ್ಭಾವನೆ ಮತ್ತು ಮೌಲ್ಯಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚಿತ್ರನಟಿ ಸ್ನೇಹ ಅವರು ಡಾ. ಸತ್ಯಮೂರ್ತಿ ಗೂಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಾ. ಮಂಜುಳಾ ಪಾವಗಡ, ರಕ್ತದಾನಿ ತ್ಯಾಗರಾಜು, ಗಾಯಕ ಶಶಿಧರ್ ಕೋಟೆ, ವೇಣು ಮಾಧವ್, ಕೆ.ಎಸ್. ರಾಜೇಗೌಡ, ಸುನೀಲ್ ಪವಾರ್ ಸೇರಿದಂತೆ ಹಲವು ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಇತರರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಕರ್ನಾಟಕಕ್ಕೆ ₹3,705 ಕೋಟಿ ತುರ್ತು ಬರ ಪರಿಹಾರ ಬಿಡುಗಡೆ ಮಾಡಿ; ಪ್ರಧಾನಿಗೆ ಖರ್ಗೆ ಪತ್ರ

Next

10 lecturers selected for KUPMA’s Bengaluru district Best Lecturer Awards

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಲಿ: ಡಾ. ರವಿ ಸಿ.ಟಿ.
    • 10 lecturers selected for KUPMA’s Bengaluru district Best Lecturer Awards
    • ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅವರಿಗೆ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ’ ಪ್ರದಾನ
    • ಕರ್ನಾಟಕಕ್ಕೆ ₹3,705 ಕೋಟಿ ತುರ್ತು ಬರ ಪರಿಹಾರ ಬಿಡುಗಡೆ ಮಾಡಿ; ಪ್ರಧಾನಿಗೆ ಖರ್ಗೆ ಪತ್ರ
    • Kharge seeks ₹3,705 crore central aid for Karnataka drought, urges urgent intervention by Modi
    Copyright 2026 — ANU News. All rights reserved. Blogsy WordPress Theme