Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ಬೆಳ್ಳೂರು ಬಳಿಯ ಅಳಿಸಂದ್ರದಲ್ಲಿ ನೂತನ ಕೋಡಿಕೆಂಪಮ್ಮ ದೇವಸ್ಥಾನದ ಉದ್ಘಾಟನೆ

By ANU News
November 18, 2026 1 Min Read
Comments Off on ಬೆಳ್ಳೂರು ಬಳಿಯ ಅಳಿಸಂದ್ರದಲ್ಲಿ ನೂತನ ಕೋಡಿಕೆಂಪಮ್ಮ ದೇವಸ್ಥಾನದ ಉದ್ಘಾಟನೆ

ಮಂಡ್ಯ: ಜಿಲ್ಲೆಯ ನಾಗಮಂಗಲ ಸಮೀಪದ ಬೆಳ್ಳೂರು ಬಳಿಯ ಅಳಿಸಂದ್ರ ಗ್ರಾಮದಲ್ಲಿ ನೂತನ ಕೋಡಿಕೆಂಪಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಗೂ ಮುನ್ನ ಸಚಿವ ಎನ್. ಚಲುವರಾಯಸ್ವಾಮಿ ಗ್ರಾಮದ ಹೈಮಾಸ್ಟ್ ಬೀದಿ ದೀಪಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ, ನಮ್ಮ ನಂಬಿಕೆ ಮತ್ತು ವಿಶ್ವಾಸದ ಮೇಲೆ ದೇವರು ನಮ್ಮನ್ನು ಸುರಕ್ಷಿತವಾಗಿ ಕಾಪಾಡುತ್ತಾನೆ ಎಂದರು.

“ಬರೀ ಮಾತನಾಡುವವರು ಕೆಲಸ ಮಾಡುವುದಿಲ್ಲ. ನಮ್ಮ ಕೆಲಸವೇ ಮಾತನಾಡಬೇಕು. ದೇವರೇ ನಮ್ಮ ಶ್ರಮಕ್ಕೆ ಪ್ರತಿಫಲ ನೀಡುತ್ತಾನೆ” ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ಪ್ರಕೃತಿಗೆ ವಿರುದ್ಧವಾಗಿ ಏನೂ ಮಾಡಲು ಸಾಧ್ಯವಿಲ್ಲ. ಜನರಿಗೆ ನಿರಂತರವಾಗಿ ಒಳ್ಳೆಯದಾಗುತ್ತಿರುವುದನ್ನು ಪರೀಕ್ಷಿಸಲು ದೇವರು ಬರಗಾಲದ ರೂಪದಲ್ಲಿ ಸವಾಲು ನೀಡಿದ್ದಾನೆ ಎಂದು ಅಭಿಪ್ರಾಯಪಟ್ಟರು.

ಈ ಸಂಕಷ್ಟವನ್ನು ಎದುರಿಸಲು ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಅವರು, ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ರಾಜ್ಯ ಸರ್ಕಾರ ಅನ್ನದಾತರ ಪರವಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.

Author

ANU News

Follow Me
Other Articles
Previous

Iran-linked assassination plot targeting Trump foiled; Pakistani man sentenced to 27 years

Next

ಸಿಆರ್‌ಪಿಎಫ್ ಮೇಲಿನ ದಾಳಿ ಬೆನ್ನಲ್ಲೇ ಎನ್‌ಕೌಂಟರ್: ಉಗ್ರನಿಗೆ 15 ಲಕ್ಷ ರೂ. ಬಹುಮಾನ

Recent Posts

  • Six arrested in Manipur; heroin, cash and vehicle seized
  • Odisha prepares to evacuate over 2 lakh people ahead of Cyclone Akwan
  • ‘ಅಕ್ವಾನ್’ ಚಂಡಮಾರುತ ಭೀತಿ: ಒಡಿಶಾದಲ್ಲಿ 2.04 ಲಕ್ಷ ಜನರ ಸ್ಥಳಾಂತರಕ್ಕೆ ಸಿದ್ಧತೆ
  • Fire damages over 50 shops at Pune timber market
  • ಪುಣೆಯ ಟಿಂಬರ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ; 60ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿ
Copyright 2026 — ANU News. All rights reserved. Blogsy WordPress Theme