Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; ಅಂತಿಮ ಪಂದ್ಯ 2-2 ಡ್ರಾ

By ANU News
November 24, 2026 1 Min Read
Comments Off on ನ್ಯೂಜಿಲೆಂಡ್ ವಿರುದ್ಧ ಹಾಕಿ ಸರಣಿ ಗೆದ್ದ ಭಾರತ; ಅಂತಿಮ ಪಂದ್ಯ 2-2 ಡ್ರಾ

ಆಕ್ಲೆಂಡ್: ಪುರುಷರ ಹಾಕಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ‘ಸೆಂಚುರಿ ಆಫ್ ಸ್ಪೋರ್ಟಿಂಗ್ ಯೂನಿಟಿ’ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿದೆ. ಆಕ್ಲೆಂಡ್‌ನ ಲಾಯ್ಡ್ ಎಲ್ಸ್‌ಮೋರ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಪಂದ್ಯ 2-2 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು.

ನ್ಯೂಜಿಲೆಂಡ್ ಪರ ಡೈಲನ್ ಥಾಮಸ್ 9ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಭಾರತದ ಪರ 16ನೇ ನಿಮಿಷದಲ್ಲಿ ಸಂಜಯ್ ಪೆನಾಲ್ಟಿ ಕಾರ್ನರ್ ಮೂಲಕ ಸಮಬಲ ಸಾಧಿಸಿದರೆ, 18ನೇ ನಿಮಿಷದಲ್ಲಿ ಕಾರ್ತಿ ಸೆಲ್ವಂ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬೆಂಜಿ ಕಲ್ಹೇನ್ ಗೋಲು ಗಳಿಸಿ ನ್ಯೂಜಿಲೆಂಡ್‌ಗೆ ಸಮಬಲ ತಂದುಕೊಟ್ಟರು.

ಮೊದಲ ಪಂದ್ಯವನ್ನು ಭಾರತ 3-2ರಿಂದ ಗೆದ್ದಿದ್ದರೆ, ಎರಡನೇ ಪಂದ್ಯ 2-2ರಿಂದ ಡ್ರಾ ಆಗಿತ್ತು. ಹೀಗಾಗಿ ಸರಣಿ ಭಾರತದ ಪಾಲಾಯಿತು.

1926ರಲ್ಲಿ ಮೇಜರ್ ಧ್ಯಾನ್ ಚಂದ್ ನೇತೃತ್ವದ ಭಾರತೀಯ ಸೇನೆಯ ಹಾಕಿ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದರ ಶತಮಾನೋತ್ಸವದ ಅಂಗವಾಗಿ ಈ ಸರಣಿ ಆಯೋಜಿಸಲಾಗಿತ್ತು.

Author

ANU News

Follow Me
Other Articles
Previous

Mandya to Host National Men’s Kabaddi Championship from January 7

Next

India Clinch Hockey Series Against New Zealand After 2-2 Draw

Recent Posts

  • ಐಎನ್ಎಸ್ ಸಹ್ಯಾದ್ರಿ ವಿಯೆಟ್ನಾಂ ಬಂದರು ಭೇಟಿ ಪೂರ್ಣ; ಕಡಲ ಸಹಕಾರ ಬಲವರ್ಧನೆ
  • INS Sahyadri Completes Port Visit to Vietnam, Strengthens Naval Ties
  • 1 ಕೋಟಿ ಡೋಸ್‌ಗಳ ಗಡಿ ದಾಟಿದ HPV ಲಸಿಕೆ ಅಭಿಯಾನ; ಪ್ರಧಾನಿ ಮೋದಿ ಶ್ಲಾಘನೆ
  • PM Modi Hails HPV Vaccination Drive for Crossing 1 Crore Doses
  • IMD Forecasts Heavy Rain in South India Over Next Four Days
Copyright 2026 — ANU News. All rights reserved. Blogsy WordPress Theme