Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

‘ನಸೀಮ್ ಅಲ್ ಬಹರ್’: ಭಾರತ-ಓಮನ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಮಸ್ಕತ್ ತಲುಪಿದ ಐಎನ್‌ಎಸ್ ಸೂರತ್

By ANU News
November 10, 2026 1 Min Read
Comments Off on ‘ನಸೀಮ್ ಅಲ್ ಬಹರ್’: ಭಾರತ-ಓಮನ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಮಸ್ಕತ್ ತಲುಪಿದ ಐಎನ್‌ಎಸ್ ಸೂರತ್

ನವದೆಹಲಿ: ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಕಡಲ ಸಮರಾಭ್ಯಾಸದ 15ನೇ ಆವೃತ್ತಿಯಾದ ‘ನಸೀಮ್ ಅಲ್ ಬಹರ್’ನಲ್ಲಿ ಪಾಲ್ಗೊಳ್ಳಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸೂರತ್ ನವೆಂಬರ್ 8ರಂದು ಮಸ್ಕತ್ ತಲುಪಿದೆ. ಸಮರಾಭ್ಯಾಸದ ಬಳಿಕ ಓಮನ್ ರಾಯಲ್ ನೇವಿ ಜತೆ ಸಂಯೋಜಿತ ಗಸ್ತು (CORPAT) ಕಾರ್ಯಾಚರಣೆ ನಡೆಯಲಿದೆ ಎಂದು ನೌಕಾಪಡೆ ತಿಳಿಸಿದೆ.

ಸಮರಾಭ್ಯಾಸದಲ್ಲಿ ಬಂದರು ಮತ್ತು ಸಮುದ್ರ ಹಂತದ ಚಟುವಟಿಕೆಗಳು ನಡೆಯಲಿವೆ. ಕ್ರಾಸ್-ಡೆಕ್ ಭೇಟಿಗಳು, ಕಾರ್ಯಾಚರಣೆಗೆ ಸಂಬಂಧಿಸಿದ ಸಂವಾದಗಳು ಹಾಗೂ ಕ್ರೀಡಾಕೂಟಗಳು ಇದರ ಭಾಗವಾಗಿವೆ. ಉಭಯ ನೌಕಾಪಡೆಗಳ ನಡುವಿನ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯ ಹೆಚ್ಚಿಸುವುದು, ಅನುಭವ ಹಂಚಿಕೊಳ್ಳುವುದು ಮತ್ತು ಸಹಕಾರ ಬಲಪಡಿಸುವುದು ಇದರ ಉದ್ದೇಶವಾಗಿದೆ.

ಐಎನ್‌ಎಸ್ ಸೂರತ್‌ನ ಭೇಟಿ ಭಾರತ ಮತ್ತು ಓಮನ್ ನಡುವಿನ ದೀರ್ಘಕಾಲದ ಕಡಲ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ‘ಮಹಾಸಾಗರ್’ ದೃಷ್ಟಿಕೋನಕ್ಕೂ ಅನುಗುಣವಾಗಿದೆ. ಪ್ರಾದೇಶಿಕ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಸಹಕಾರ ಹಾಗೂ ಸಮಗ್ರ ಪ್ರಗತಿಗೆ ಈ ದೃಷ್ಟಿಕೋನ ಒತ್ತು ನೀಡುತ್ತದೆ.

2025ರ ನವೆಂಬರ್ 24ರಂದು ನಡೆದ 13ನೇ ಜಂಟಿ ಮಿಲಿಟರಿ ಸಹಕಾರ ಸಮಿತಿ ಸಭೆಯ ಫಲಿತಾಂಶಗಳ ಆಧಾರದಲ್ಲೂ ಈ ಭೇಟಿ ಮಹತ್ವ ಪಡೆದಿದೆ ಎಂದು ನೌಕಾಪಡೆ ತಿಳಿಸಿದೆ.

Author

ANU News

Follow Me
Other Articles
Previous

ಅತಿದೊಡ್ಡ ಬ್ಯಾಚ್; ನ.13ರಂದು ಐಎನ್‌ಎಸ್ ಚಿಲ್ಕಾದಲ್ಲಿ 3,300ಕ್ಕೂ ಹೆಚ್ಚು ಅಗ್ನಿವೀರ್‌ಗಳ ಪಾಸಿಂಗ್ ಔಟ್ ಪೆರೇಡ್

Next

INS Surat Reaches Oman for 15th Edition of India-Oman Naval Exercise

Recent Posts

  • Kolkata-Sairang Express Derails Near Guwahati; Several Passengers Injured
  • ಹಳಿತಪ್ಪಿದ ಕೋಲ್ಕತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು; ಅಸ್ಸಾಂನ ದಿಗಾರು ನಿಲ್ದಾಣದ ಬಳಿ ಅವಘಡ
  • India Clinches Women’s 25m Pistol Team Gold at ISSF World Championship
  • ISSF ವಿಶ್ವ ಚಾಂಪಿಯನ್‌ಶಿಪ್: ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ
  • Rohit Pathak’s First Look as SI Nagre in ‘Bhogi’ Released
Copyright 2026 — ANU News. All rights reserved. Blogsy WordPress Theme