Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಇರಾನ್ ಬೆದರಿಕೆ ಎದುರಿಸಲು ಒಗ್ಗಟ್ಟಿನ ಮಂತ್ರ; ಇಸ್ರೇಲ್‌ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರಕ್ಕೆ ನೆತನ್ಯಾಹು ಕರೆ

By ANU News
November 11, 2026 1 Min Read
Comments Off on ಇರಾನ್ ಬೆದರಿಕೆ ಎದುರಿಸಲು ಒಗ್ಗಟ್ಟಿನ ಮಂತ್ರ; ಇಸ್ರೇಲ್‌ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರಕ್ಕೆ ನೆತನ್ಯಾಹು ಕರೆ

ಜೆರುಸಲೇಂ: ಇರಾನ್‌ನಿಂದ ಹೆಚ್ಚುತ್ತಿರುವ ಬೆದರಿಕೆ ಎದುರಿಸಲು ಇಸ್ರೇಲ್‌ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರ ರಚನೆಯಾಗಬೇಕು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದಾರೆ. ಇರಾನ್‌ನ ಆಡಳಿತ ಇಸ್ರೇಲ್ ಅಸ್ತಿತ್ವಕ್ಕೆ ಬೆದರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದರೆ, ನೆತನ್ಯಾಹು ಭಾಷಣವನ್ನು ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್‌ಕೋಟ್ ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮವನ್ನು ರಾಜಕೀಯ ಹಿತಾಸಕ್ತಿಗೆ ಬಳಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.

ಇಸ್ರೇಲ್‌ನ 120 ಸದಸ್ಯರ ನೆಸೆಟ್‌ನಲ್ಲಿ ಸರ್ಕಾರ ರಚಿಸಲು 61 ಸಂಸದರ ಬೆಂಬಲ ಅಗತ್ಯವಿದೆ. ಆದರೆ, ನೆತನ್ಯಾಹು ಮತ್ತು ಐಸೆನ್‌ಕೋಟ್ ಬಣಗಳಿಗೆ ಇನ್ನೂ ಬಹುಮತ ದೊರೆತಿಲ್ಲ.

2023ರ ಅಕ್ಟೋಬರ್ 7ರ ಹಮಾಸ್ ದಾಳಿಗೂ ಮುನ್ನ ನಡೆದ ಭದ್ರತಾ ವೈಫಲ್ಯಗಳ ತನಿಖೆಗೆ ಸ್ವತಂತ್ರ ಆಯೋಗ ರಚಿಸಬೇಕು ಎಂದು ಐಸೆನ್‌ಕೋಟ್ ಆಗ್ರಹಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ನೆತನ್ಯಾಹು, ಆಯೋಗದ ಸದಸ್ಯರನ್ನು ರಾಜಕೀಯ ಪ್ರಕ್ರಿಯೆ ಮೂಲಕ ಆಯ್ಕೆ ಮಾಡುವಂತೆ ಪ್ರಸ್ತಾಪಿಸಿದ್ದಾರೆ. ಈ ನಡುವೆ ಸರ್ಕಾರ ರಚನೆಗೆ ರಾಜಕೀಯ ಬಣಗಳ ಬೆಂಬಲ ಕ್ರೋಡೀಕರಣದ ಪ್ರಯತ್ನಗಳು ನಡೆಯುತ್ತಿವೆ.

Author

ANU News

Follow Me
Other Articles
Previous

India, US Agree to Joint Action Against International Drug Networks

Next

Netanyahu Seeks National Unity Government Amid Iran Threat

Recent Posts

  • India Clinches Women’s 25m Pistol Team Gold at ISSF World Championship
  • ISSF ವಿಶ್ವ ಚಾಂಪಿಯನ್‌ಶಿಪ್: ಮಹಿಳೆಯರ 25 ಮೀ. ಪಿಸ್ತೂಲ್ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ
  • Rohit Pathak’s First Look as SI Nagre in ‘Bhogi’ Released
  • ‘ಭೋಗಿ’ ಚಿತ್ರದಲ್ಲಿ ಎಸ್‌ಐ ನಾಗ್ರೆ ಪಾತ್ರದಲ್ಲಿ ರೋಹಿತ್ ಪಾಠಕ್
  • ‘Itlu Arjun’ Gets U/A Certificate, to Release on November 13
Copyright 2026 — ANU News. All rights reserved. Blogsy WordPress Theme