Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಾವೇರಿ ಸಮಸ್ಯೆಯಿಂದ ಸದ್ಯಕ್ಕೆ ಮುಕ್ತಿ: ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಎಂದ ಸಚಿವ ಚಲುವರಾಯಸ್ವಾಮಿ

By ANU News
November 21, 2026 1 Min Read
Comments Off on ಕಾವೇರಿ ಸಮಸ್ಯೆಯಿಂದ ಸದ್ಯಕ್ಕೆ ಮುಕ್ತಿ: ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ ಎಂದ ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಾವೇರಿ ಜಲವಿವಾದದಲ್ಲಿ ಸದ್ಯದ ಮಟ್ಟಿಗೆ ರಾಜ್ಯಕ್ಕೆ ಸಮಾಧಾನಕರ ಬೆಳವಣಿಗೆ ಕಂಡುಬಂದಿದೆ. ರೈತರು ಮತ್ತು ವಿವಿಧ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ತಮಿಳುನಾಡಿಗೆ ಹೆಚ್ಚುವರಿಯಾಗಿ 11 ಟಿಎಂಸಿ ನೀರು ಹರಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇದು ತಮಿಳುನಾಡಿನ ಹಿನ್ನಡೆಯಲ್ಲ; ಬದಲಿಗೆ ರಾಜ್ಯಕ್ಕೆ ನ್ಯಾಯ ಸಿಕ್ಕಿರುವ ಬೆಳವಣಿಗೆ ಎಂದರು.

“ನಮ್ಮ ರಾಜ್ಯದಲ್ಲಿಯೇ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದು ಹೇಗೆ ಸಾಧ್ಯ? ನಾನು ಜಲಸಂಪನ್ಮೂಲ ಖಾತೆ ವಹಿಸಿಕೊಂಡ ದಿನದಿಂದಲೇ ಕಾವೇರಿ ವಿವಾದ ಎದುರಾಗಿತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ಮತ್ತು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದೇವೆ. ಸದ್ಯದ ಮಟ್ಟಿಗೆ ಕಾವೇರಿ ಸಮಸ್ಯೆಗಳಿಂದ ಪಾರಾಗಿದ್ದೇವೆ ಎಂಬ ಸಮಾಧಾನವಿದೆ” ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಡಬ್ಲ್ಯೂಆರ್‌ಸಿ (CWRC) ಮತ್ತು ಸಿಡಬ್ಲ್ಯೂಎಂಎ (CWMA) ಎರಡೂ ರಾಜ್ಯಗಳ ನಡುವೆ ಸಮತೋಲನ ಕಾಯ್ದುಕೊಂಡು ನೀರು ಹಂಚಿಕೆ ಮಾಡುತ್ತಿವೆ. ಈ ಹಿಂದೆ ಎರಡ್ಮೂರು ಬಾರಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದ್ದು ನೋವು ತಂದಿತ್ತು. ಇದೀಗ 2,000 ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಆದೇಶಿಸಿದೆ ಎಂದು ಹೇಳಿದರು.

ಅಂತರರಾಜ್ಯ ಜಲವಿವಾದಗಳ ನಿವಾರಣೆಗಾಗಿ ಮುಖ್ಯಮಂತ್ರಿ ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಹಿಂದೆ ಅನ್ಯರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದಾಗುತ್ತಿರಲಿಲ್ಲ. ಇದೀಗ ಚರ್ಚೆಗೆ ಸಿದ್ಧರಾಗಿರುವುದು ವಿಶೇಷ. ಈ ಮಾತುಕತೆಗಳಿಂದ ಜಲವಿವಾದಗಳು ಬಗೆಹರಿಯುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

Author

ANU News

Follow Me
Other Articles
Previous

Yettinahole Water to Reach Tumakuru in a Week, Kolar by June

Next

Karnataka Gets Temporary Relief as SC Rejects TN Plea for Additional Cauvery Water

Recent Posts

  • China occupation, poverty, Hindu growth rate: Rijiju’s four questions to Congress
  • ರಿಜಿಜು ಕಾಂಗ್ರೆಸ್‌ಗೆ ನಾಲ್ಕು ಪ್ರಶ್ನೆ: 1962ರ ಚೀನಾ ಆಕ್ರಮಣಕ್ಕೆ ಕ್ಷಮೆ ಕೇಳುತ್ತೀರಾ? ರಾಹುಲ್ ಗಾಂಧಿ ಟೀಕೆಗೆ ತಿರುಗೇಟು
  • Hiriyur Bypoll: Voters Will Teach Congress a Lesson for Anti-People Policies, Says K’taka BJP MLC Ravi
  • ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಗೆ ಹಿರಿಯೂರು ಉಪಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ: ಡಾ. ರವಿ ಸಿ.ಟಿ.
  • Congress President Padmaraj Poojary Backs Taxi Associations’ Protest at Mangaluru Airport
Copyright 2026 — ANU News. All rights reserved. Blogsy WordPress Theme