Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಜಪಾನ್‌ನಿಂದ ಕರ್ನಾಟಕಕ್ಕೆ ₹800 ಕೋಟಿ ಹೂಡಿಕೆ ಒಪ್ಪಂದ! ಬೆಂಗಳೂರಿನಾಚೆಗೂ ಕೈಗಾರಿಕೆ ವಿಸ್ತರಣೆಗೆ ಆದ್ಯತೆ

By ANU News
November 28, 2026 1 Min Read
Comments Off on ಜಪಾನ್‌ನಿಂದ ಕರ್ನಾಟಕಕ್ಕೆ ₹800 ಕೋಟಿ ಹೂಡಿಕೆ ಒಪ್ಪಂದ! ಬೆಂಗಳೂರಿನಾಚೆಗೂ ಕೈಗಾರಿಕೆ ವಿಸ್ತರಣೆಗೆ ಆದ್ಯತೆ

ಬೆಂಗಳೂರು: ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸುವುದು ಹಾಗೂ ಬೆಂಗಳೂರಿನಾಚೆಗೂ ಕೈಗಾರಿಕೆಗಳನ್ನು ವಿಸ್ತರಿಸಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಜಪಾನ್ ಪ್ರವಾಸದ ಪ್ರಮುಖ ಉದ್ದೇಶವಾಗಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನವೆಂಬರ್ 23ರಿಂದ 25ರವರೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳ ನಿಯೋಗದೊಂದಿಗೆ ಕೈಗೊಂಡಿದ್ದ ಮೂರು ದಿನಗಳ ಜಪಾನ್ ಪ್ರವಾಸದ ಕುರಿತು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪ್ರವಾಸದ ವೇಳೆ ಕವಾಸಕಿ-ವಿಪ್ರೋ ಕವಾಸಕಿ ಸಂಸ್ಥೆಯು ಹಾರೋಹಳ್ಳಿ ಘಟಕ ವಿಸ್ತರಣೆಗೆ ಮುಂದಿನ 10 ವರ್ಷಗಳಲ್ಲಿ ₹800 ಕೋಟಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ.

ಟೊಯೊಟಾ, ಪ್ಯಾನಾಸೋನಿಕ್, ಜೆಎಫ್‌ಇ ಸ್ಟೀಲ್, ಜೆಎಕ್ಸ್ ಮೆಟಲ್ಸ್ ಮತ್ತು ಟಕೆಡಾ ಕಂಪನಿಗಳೊಂದಿಗೆ ಸ್ಥಳೀಕರಣ, ಹೈಬ್ರಿಡ್ ವಾಹನ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಉಕ್ಕು ಉತ್ಪಾದನೆ ಕುರಿತು ಚರ್ಚಿಸಲಾಗಿದೆ. ಸುಮಿಟೊಮೊ ಸಹಯೋಗದಲ್ಲಿ ಜಪಾನ್ ಕೈಗಾರಿಕಾ ಪಾರ್ಕ್ ಸ್ಥಾಪನೆ, ಜಪಾನಿ ಶಾಲೆ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾ ತರಬೇತಿ ನೀಡುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದರು.

ಜಪಾನ್‌ನ ಒಯಾಸಿಸ್ 21, ಅಜಬುದೈ ಹಿಲ್ಸ್ ಮತ್ತು ಶಿಬುಯಾ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಲಾಗಿದ್ದು, ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಪುನರಾಭಿವೃದ್ಧಿ, ವಾಣಿಜ್ಯ ಸ್ಥಳ ಹಾಗೂ ಸಿಗ್ನೇಚರ್ ಲ್ಯಾಂಡ್‌ಮಾರ್ಕ್ ಟವರ್ ನಿರ್ಮಾಣದ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಒಸಾಕಾದ ಮೈಶಿಮಾ ಘಟಕದ ಮಾದರಿಯಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ವ್ಯವಸ್ಥೆ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ 2027’ ಸಮಾವೇಶಕ್ಕೆ ಜಪಾನ್ ಸರ್ಕಾರ ಮತ್ತು ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಸಮಾವೇಶದಲ್ಲಿ ಪ್ರತ್ಯೇಕ ‘ಜಪಾನ್ ಕಂಟ್ರಿ ಪೆವಿಲಿಯನ್’ ಸ್ಥಾಪಿಸುವ ಪ್ರಸ್ತಾವನೆಯನ್ನೂ ಮುಂದಿಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

Author

ANU News

Follow Me
Other Articles
Previous

12ನೇ ದಿನವೂ ಆಶಾ ಕಾರ್ಯಕರ್ತೆಯರ ಹೋರಾಟ! ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ

Next

Kawasaki-Wipro JV to Invest ₹800 Crore in Karnataka, Generate 600 Jobs

Recent Posts

  • Political Opposition Cannot Stop Women’s Representation, Asserts PM Modi
  • ಸಂಸತ್ತು, ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಬದ್ಧ; ಪ್ರಧಾನಿ ಮೋದಿ
  • ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ಮೂವರು ಸಾವು!
  • Three Killed as SUV Rams Gravel-Laden Tipper on Bengaluru-Mysuru Highway
  • Sudeep-Prem Combo Creates Buzz With ‘DADA On Holiday’ Title Teaser
Copyright 2026 — ANU News. All rights reserved. Blogsy WordPress Theme