Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ವಿಕ್ರಾಂತ್ ರೋಣ’ ಚಿತ್ರದ ಯಶಸ್ಸಿನ ಬಳಿಕ ‘ಬಿಲ್ಲ ರಂಗ ಬಾಷಾ’: ಕಿಚ್ಚನ ಫಸ್ಟ್ ಲುಕ್ ರಿಲೀಸ್ 

By ANU News
September 2, 2026 1 Min Read
0

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಜನ್ಮದಿನದ ಪ್ರಯುಕ್ತ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಸುದೀಪ್ ಕಾಂಬಿನೇಷನ್‌ನ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಪೋಸ್ಟರ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹಿಮಾಚ್ಛಾದಿತ ಪ್ರದೇಶ, ಬೈಕ್ ಹಾಗೂ ಮೇಲ್ಭಾಗದಲ್ಲಿ ಹಾರುತ್ತಿರುವ ಹೆಲಿಕಾಪ್ಟರ್ ನಡುವೆ ಸುದೀಪ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಪೋಸ್ಟರ್‌ನ ಪ್ರಮುಖ ಆಕರ್ಷಣೆಯಾಗಿದೆ. ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

‘ವಿಕ್ರಾಂತ್ ರೋಣ’ ಚಿತ್ರದ ಯಶಸ್ಸಿನ ಬಳಿಕ ಸುದೀಪ್ ಮತ್ತು ಅನೂಪ್ ಭಂಡಾರಿ ಜೋಡಿ ಮತ್ತೆ ಒಂದಾಗಿರುವ ಸಿನಿಮಾ ಇದಾಗಿದೆ. ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಅನೂಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಫಸ್ಟ್ ಲುಕ್ ಹಂಚಿಕೊಂಡು, “ಬಿಲ್ಲಾ ಅನ್ಲೀಶ್ಡ್! ಹ್ಯಾಪಿ ಬರ್ತ್‌ಡೇ ಕಿಚ್ಚ ಸುದೀಪ್ ಸರ್. ಈ ಪೋಸ್ಟರ್ ಬಿಗ್ ಸ್ಕ್ರೀನ್‌ನಲ್ಲಿ ಜೀವಂತವಾಗುವುದನ್ನು ನೋಡಲು ಕಾಯಲು ಸಾಧ್ಯವಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

Billa unleashed! Happy birthday @KicchaSudeep sir. Can’t wait for the world to witness this poster come alive on the big screen. #BRBFirstBlood #BillaRangaBaasha @brbmovie @Niran_Reddy @Chaitanyaniran @Primeshowtweets pic.twitter.com/HwSatB6RdW

— Anup Bhandari (@anupsbhandari) September 2, 2026

ಬಿಗ್ ಬಜೆಟ್, ವಿಭಿನ್ನ ಕಥಾಹಂದರ ಹಾಗೂ ಸುದೀಪ್ ಅವರ ರಗಡ್ ಲುಕ್‌ನಿಂದ ‘ಬಿಲ್ಲ ರಂಗ ಬಾಷಾ’ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

Author

ANU News

Follow Me
Other Articles
Previous

‘Toxic’ crosses ₹300 crore mark in first week, eyes ₹400 crore

Next

After ‘Vikrant Rona’, Kiccha Sudeep and Anup Bhandari reunite for ‘Billa Ranga Baasha’

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • SC rejects Abu Salem’s plea for early release, says 25 years complete in 2030
    • ಅಬು ಸಲೇಂಗೆ ಸುಪ್ರೀಂ ಕೋರ್ಟ್‌ ಶಾಕ್: 25 ವರ್ಷಗಳ ಶಿಕ್ಷೆ 2030ರಲ್ಲೇ ಪೂರ್ಣ
    • ಮೈಸೂರು ದಸರಾಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳ ಮೆರುಗು: ಜಂಬೂಸವಾರಿಯಲ್ಲಿ 30 ತಾರೆಯರು!
    • Yash, Rishab Shetty, Rakshit Shetty among Sandalwood stars set to add glamour to Mysuru Dasara
    • Karnataka to move SC over Centre withholding ₹2,186 crore in panchayat grants
    Copyright 2026 — ANU News. All rights reserved. Blogsy WordPress Theme