Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ವಾರದೊಳಗೆ ತುಮಕೂರಿಗೆ, ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ

By ANU News
November 21, 2026 1 Min Read
Comments Off on ವಾರದೊಳಗೆ ತುಮಕೂರಿಗೆ, ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ವಾರದೊಳಗೆ ತುಮಕೂರಿಗೆ ಮತ್ತು ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ಎತ್ತಿನಹೊಳೆ ಯೋಜನೆಯ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಟ್ರಯಲ್ ರನ್‌ಗೆ ಅನುಮತಿ ನೀಡಿದರೆ ವಾರದೊಳಗೆ ತುಮಕೂರಿಗೆ ನೀರು ಹರಿಸಲಾಗುವುದು. ಡಿಸೆಂಬರ್ 15ರಿಂದ 25ರೊಳಗೆ ಟ್ರಯಲ್ ರನ್ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಈಗಾಗಲೇ ಹಾಸನ, ಚಿಕ್ಕಮಗಳೂರು ಮತ್ತು ಕಡೂರಿಗೆ ಎತ್ತಿನಹೊಳೆ ನೀರು ಹರಿಯುತ್ತಿದೆ. ತಿಪಟೂರು, ಗುಬ್ಬಿವರೆಗಿನ ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ಜೂನ್‌ನೊಳಗೆ ಕೋಲಾರಕ್ಕೆ ನೀರು ತಲುಪಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಯೋಜನೆಗೆ ಈವರೆಗೆ ₹19 ಸಾವಿರ ಕೋಟಿ ವೆಚ್ಚವಾಗಿದ್ದು, ಒಟ್ಟು 252.61 ಕಿ.ಮೀ. ಕಾಮಗಾರಿಯಲ್ಲಿ 232 ಕಿ.ಮೀ. ಪೂರ್ಣಗೊಂಡಿದೆ. ಫೀಡರ್ ಕಾಲುವೆ ನಿರ್ಮಾಣಕ್ಕೆ ಐದು ಕಿ.ಮೀ. ಕಾಮಗಾರಿ ಬಾಕಿಯಿದೆ. ಯೋಜನೆಯಡಿ 527 ಕೆರೆಗಳನ್ನು ತುಂಬಿಸುವ ಗುರಿಯಿದೆ.

ಜೂನ್‌ನಿಂದ ಅಕ್ಟೋಬರ್‌ವರೆಗೆ 24 ಟಿಎಂಸಿ ನೀರು ಲಿಫ್ಟ್ ಮಾಡಲು ಅನುಮತಿಯಿದ್ದು, ನೀರನ್ನು ಸಂಗ್ರಹಿಸಿ ವರ್ಷಪೂರ್ತಿ ಬಳಸಿಕೊಳ್ಳಲಾಗುವುದು. ಕಾಮಗಾರಿ ಪೂರ್ಣಗೊಳಿಸಲು ಫೆಬ್ರವರಿಯೊಳಗೆ ₹2,000 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

Author

ANU News

Follow Me
Other Articles
Previous

ಪ್ರಧಾನಿ ಮೋದಿ ಆಹ್ವಾನಕ್ಕೆ ಭಾರತಕ್ಕೆ ಬರಲಿರುವ ನೇಪಾಳ ಪ್ರಧಾನಿ ಬಾಲೆನ್ ಶಾ; ನ.22ರಿಂದ ಎರಡು ದಿನಗಳ ಭೇಟಿ

Next

Yettinahole Water to Reach Tumakuru in a Week, Kolar by June

Recent Posts

  • Trump warns China could match US nuclear strength within a decade
  • ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿ: ನ.22ರಂದು ಭಾರತ Vs ಪಾಕಿಸ್ತಾನ
  • ಟ್ರಂಪ್ ಎಚ್ಚರಿಕೆ: 10 ವರ್ಷಗಳಲ್ಲಿ ಅಮೆರಿಕಕ್ಕೆ ಸರಿಸಮನಾಗಲಿದೆ ಚೀನಾ ಪರಮಾಣು ಶಕ್ತಿ!
  • India ‘A’ Crush Nepal by 306 Runs After Bowling Them Out for 26
  • ನೇಪಾಳವನ್ನು 26 ರನ್‌ಗಳಿಗೆ ಆಲೌಟ್ ಮಾಡಿ ಭಾರತ ಎ ತಂಡದಿಂದ ವಿಶ್ವ ದಾಖಲೆ!
Copyright 2026 — ANU News. All rights reserved. Blogsy WordPress Theme