Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಎಸ್‌ಐಆರ್‌ ವಿಚಾರದಲ್ಲಿ ರಾಹುಲ್ ಗಾಂಧಿ ಗೊಂದಲ ಸೃಷ್ಟಿಸುತ್ತಿದ್ದಾರೆ: ಕುಮಾರಸ್ವಾಮಿ

By ANU News
October 7, 2026 1 Min Read
0

ಮುಳಬಾಗಿಲಿನಲ್ಲಿ ಮಂಗಳವಾರ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್‌ ಪ್ರಕ್ರಿಯೆ ಆರಂಭವಾದ ನಂತರ ಈ ವಿಚಾರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸುಮಾರು 90 ಸಾವಿರ ಮತದಾರರ ಹೆಸರುಗಳನ್ನು ಅಳಿಸುವಂತೆ ಅರ್ಜಿಗಳು ಬಂದಿವೆ ಎಂದು ಹೇಳಲಾಗುತ್ತಿದೆ. ಆದರೆ, ಅವುಗಳ ಪರಿಶೀಲನೆ ಹಾಗೂ ಮುಂದಿನ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಹಾಗಿದ್ದರೆ ಮುಖ್ಯಮಂತ್ರಿ ಬಳಿ ಯಾವ ಮಾಹಿತಿ ಇದೆ? ಯಾವ ಆಧಾರದ ಮೇಲೆ ನವದೆಹಲಿಯ ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆ ಬಗ್ಗೆ ಟೀಕೆ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಹಾಸನ ಜಿಲ್ಲೆಯನ್ನು ದಾಟಿ ಮುಂದೆ ಸಾಗಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು. 10 ಟಿಎಂಸಿ ಅಡಿ ನೀರು ತರುವುದಾಗಿ ಭರವಸೆ ನೀಡಿದ್ದವರು ಇದೀಗ ಅದನ್ನು 2 ಟಿಎಂಸಿ ಅಡಿಗೆ ಇಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ‘ಮುಂದಿನ ವರ್ಷ’ ಎಂದು ಹೇಳುತ್ತಲೇ ಯೋಜನೆಯನ್ನು ಮುಂದೂಡಲಾಗುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ 100 ದಿನಗಳಲ್ಲಿ ಮಾಡಿರುವ ಸಾಧನೆಗಳೇನು ಎಂಬುದನ್ನು ಜನರ ಮುಂದೆ ಮಂಡಿಸಬೇಕು. ‘ಸಧೃಢ ಸಂಕಲ್ಪ’ ಸೇರಿದಂತೆ ಘೋಷಿಸಿರುವ ಯೋಜನೆಗಳಿಗೆ ಅಗತ್ಯ ಅನುದಾನ ಮೀಸಲಿಡಲಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಮುಳಬಾಗಿಲಿನಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಆಚರಿಸಲಾಯಿತು. ಶ್ರೀ ಗುರುಗುಂಡಾ ಬ್ರಹ್ಮೇಶ್ವರಸ್ವಾಮಿ ಮಠದ ಜಗದ್ಗುರು ಶ್ರೀಶ್ರೀಶ್ರೀ ನಂಜಾವಧೂತ ಮಹಾಸ್ವಾಮೀಜಿ, ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀಶ್ರೀಶ್ರೀ ನಿಶ್ಚಲಾನಂದ ಮಹಾಸ್ವಾಮೀಜಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀಶ್ರೀ ಮಂಗಳನಾಥ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿದ್ದರು.

ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರಾದ ಸಮೃದ್ಧಿ ಮಂಜುನಾಥ್, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಮಾಜಿ ಎಂಎಲ್‌ಸಿ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಹಾಗೂ ನಾಡಪ್ರಭು ಕೆಂಪೇಗೌಡರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author

ANU News

Follow Me
Other Articles
Previous

ಅಂಬರೀಶ್’ಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಪ್ರಸ್ತಾವನೆ

Next

Kumaraswamy questions K’taka CM’s claims on voter deletions, targets Yettinahole project

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Orijinal’: Unique title, time-travel plot fuel curiosity around Sreenath Bhasi film
    • ‘ಒರಿಜಿನಲ್’: ಶ್ರೀನಾಥ್ ಭಾಸಿ ಅಭಿನಯದ ಟೈಮ್-ಟ್ರಾವೆಲ್ ಥ್ರಿಲ್ಲರ್
    • ‘Drones’: Surrealist fantasy film to hit screens on October 16
    • ‘ಡ್ರೋನ್ಸ್’: ಸರ್ರಿಯಲಿಸ್ಟ್ ಫ್ಯಾಂಟಸಿ ಕಥೆ.. ಅಕ್ಟೋಬರ್ 16ರಂದು ತೆರೆಗೆ
    • Kumaraswamy questions K’taka CM’s claims on voter deletions, targets Yettinahole project
    Copyright 2026 — ANU News. All rights reserved. Blogsy WordPress Theme