Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಗಳಿಗೆ ಏಕರೂಪ ವಿನ್ಯಾಸ ಮಾರ್ಗಸೂಚಿ

By ANU News
September 22, 2026 1 Min Read
0

ನವದೆಹಲಿ: ತಾಂತ್ರಿಕ ಮಾನದಂಡಗಳಲ್ಲಿ ಏಕರೂಪತೆ, ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಒತ್ತು ನೀಡುವ ಉದ್ದೇಶದಿಂದ, ಎಕ್ಸ್‌ಪ್ರೆಸ್‌ವೇಗಳನ್ನು ಹೊರತುಪಡಿಸಿ ಪ್ರವೇಶ-ನಿಯಂತ್ರಿತ ಅತಿ ವೇಗದ ರಾಷ್ಟ್ರೀಯ ಹೆದ್ದಾರಿಗಳ ಯೋಜನೆ ಮತ್ತು ವಿನ್ಯಾಸಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಮಗ್ರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಮುಂಬರುವ ನಾಲ್ಕು ಮತ್ತು ಆರು ಪಥದ ಗ್ರೀನ್‌ಫೀಲ್ಡ್ ಹಾಗೂ ಬ್ರೌನ್‌ಫೀಲ್ಡ್ ಪ್ರವೇಶ-ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಗಳಿಗೆ ಈ ಮಾರ್ಗಸೂಚಿಗಳು ಅನ್ವಯಿಸಲಿವೆ. ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವಾಗ ಏಕರೂಪದ ತಾಂತ್ರಿಕ ಮಾನದಂಡಗಳನ್ನು ಅನುಸರಿಸುವುದು ಇದರ ಉದ್ದೇಶವಾಗಿದೆ.

ಸಂಚಾರ ದಟ್ಟಣೆಗೆ ಅನುಗುಣವಾಗಿ ಪಥ ವಿನ್ಯಾಸ

ಹೊಸ ಚೌಕಟ್ಟಿನಲ್ಲಿ ನಿರೀಕ್ಷಿತ ಸಂಚಾರ ಪ್ರಮಾಣದ ಆಧಾರದ ಮೇಲೆ ಪಥಗಳ ಸಂಖ್ಯೆ ಮತ್ತು ಕಾರಿಡಾರ್ ಅಗಲವನ್ನು ನಿಗದಿಪಡಿಸಲಾಗಿದೆ.

  • 15,000 ವಾಹನಗಳವರೆಗೆ: 4 ಪಥದ ಹೆದ್ದಾರಿ, 4 ಪಥದ ರಚನೆಗಳು ಮತ್ತು 60 ಮೀಟರ್ ಕಾರಿಡಾರ್ ಅಗಲ.
  • 15,000–25,000 ವಾಹನಗಳು: 4 ಪಥದ ಹೆದ್ದಾರಿ, 6 ಪಥದ ರಚನೆಗಳು ಮತ್ತು 70 ಮೀಟರ್ ಅಗಲ.
  • 25,000–40,000 ವಾಹನಗಳು: 6 ಪಥದ ಹೆದ್ದಾರಿ, 6 ಪಥದ ರಚನೆಗಳು ಮತ್ತು 70 ಮೀಟರ್ ಅಗಲ.

ಪ್ರಮುಖ ಸ್ಥಳಗಳಿಗೆ ಇಂಟರ್‌ಚೇಂಜ್

ಎಕ್ಸ್‌ಪ್ರೆಸ್‌ವೇ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಸ್ಥಳಗಳಲ್ಲಿ ರಾಂಪ್ ಆಧಾರಿತ ಇಂಟರ್‌ಚೇಂಜ್‌ಗಳನ್ನು ನಿರ್ಮಿಸಲು ಮಾರ್ಗಸೂಚಿಗಳು ಅವಕಾಶ ನೀಡಿವೆ.

ಬಂದರು, ವಿಮಾನ ನಿಲ್ದಾಣ, ಮಲ್ಟಿ-ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು (MMLP), ಕೈಗಾರಿಕಾ ಪ್ರದೇಶಗಳು ಮತ್ತು ಪ್ರಮುಖ ಪ್ರವಾಸಿ ತಾಣಗಳಿಗೆ ಸುಗಮ ಸಂಪರ್ಕ ಕಲ್ಪಿಸುವುದಕ್ಕೂ ಆದ್ಯತೆ ನೀಡಲಾಗಿದೆ. ವಾಹನ ಸವಾರರಿಗೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳ ಕುರಿತು ಮುಂಚಿತ ಮಾಹಿತಿ ನೀಡುವ ಸುರಕ್ಷತಾ ವ್ಯವಸ್ಥೆಗಳನ್ನೂ ಅಳವಡಿಸಲಾಗುತ್ತದೆ.

ಒತ್ತುವರಿ ತಡೆಯಲು ಗಡಿ ಗೋಡೆ

ಪ್ರವೇಶ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸಲು ಕಾರಿಡಾರ್‌ನ ಹೊರ ಅಂಚಿನಲ್ಲಿ ಒಂದು ಮೀಟರ್ ಎತ್ತರದ ಗಡಿ ಗೋಡೆ ನಿರ್ಮಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಇದರಿಂದ ಒತ್ತುವರಿ, ಅನಧಿಕೃತ ಪ್ರವೇಶ ಹಾಗೂ ಅಲೆದಾಡುವ ಜಾನುವಾರುಗಳು ಹೆದ್ದಾರಿ ಪ್ರವೇಶಿಸುವುದನ್ನು ತಡೆಯುವ ಉದ್ದೇಶವಿದೆ.

‘ವಿಕಸಿತ ಭಾರತ 2047’ರ ದೀರ್ಘಕಾಲೀನ ಯೋಜನೆಯ ಭಾಗವಾಗಿ 50,000 ಕಿ.ಮೀ. ಪ್ರವೇಶ-ನಿಯಂತ್ರಿತ ಅತಿ ವೇಗದ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ. ಸಂಪರ್ಕ ವ್ಯವಸ್ಥೆ ಸುಧಾರಣೆ ಹಾಗೂ ಸರಕು ಸಾಗಣೆ ವೆಚ್ಚ ಕಡಿತಕ್ಕೆ ಈ ಕಾರಿಡಾರ್‌ಗಳು ನೆರವಾಗಲಿವೆ ಎಂದು NHAI ತಿಳಿಸಿದೆ.

Author

ANU News

Follow Me
Other Articles
Previous

Bengaluru investors in focus as Scindia, Mohan Yadav pitch Gwalior telecom zone

Next

India-Mongolia joint military exercise Nomadic Elephant begins in Pithoragarh

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸೆ 28ರಿಂದ 30ರವರೆಗೆ ಮುಷ್ಕರಕ್ಕೆ ಬ್ಯಾಂಕ್ ಸಂಘಟನೆಗಳ ಕರೆ; ಸತತ ಐದು ದಿನ ಸೇವೆಗೆ ಅಡ್ಡಿ ಸಾಧ್ಯತೆ
    • Govt urges bank employees to call off strikes, ensure uninterrupted banking services
    • India-Mongolia joint military exercise Nomadic Elephant begins in Pithoragarh
    • ಪ್ರವೇಶ ನಿಯಂತ್ರಿತ ರಾಷ್ಟ್ರೀಯ ಹೆದ್ದಾರಿಗಳಿಗೆ ಏಕರೂಪ ವಿನ್ಯಾಸ ಮಾರ್ಗಸೂಚಿ
    • Bengaluru investors in focus as Scindia, Mohan Yadav pitch Gwalior telecom zone
    Copyright 2026 — ANU News. All rights reserved. Blogsy WordPress Theme