Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

₹1,800 ಕೋಟಿಯತ್ತ ‘ರಾಮಾಯಣ’; ಹೊಸ ಇತಿಹಾಸಕ್ಕೆ ಇನ್ನಷ್ಟು ಹತ್ತಿರ

By ANU News
November 29, 2026 1 Min Read
Comments Off on ₹1,800 ಕೋಟಿಯತ್ತ ‘ರಾಮಾಯಣ’; ಹೊಸ ಇತಿಹಾಸಕ್ಕೆ ಇನ್ನಷ್ಟು ಹತ್ತಿರ

ಮುಂಬೈ: ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯ 23ನೇ ದಿನಕ್ಕೆ ₹1,790.10 ಕೋಟಿ ಗಳಿಸಿರುವ ಚಿತ್ರ, 2017ರಲ್ಲಿ ಬಿಡುಗಡೆಯಾಗಿ ₹1,788 ಕೋಟಿಗೂ ಅಧಿಕ ಗಳಿಸಿದ್ದ ‘ಬಾಹುಬಲಿ 2’ ದಾಖಲೆಯನ್ನು ಹಿಂದಿಕ್ಕಿದೆ.

ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ. ಈ ಹಿಂದೆ ‘ಪುಷ್ಪ 2’ ಚಿತ್ರದ ₹1,742 ಕೋಟಿ ಗಳಿಕೆಯ ದಾಖಲೆಯನ್ನೂ ಮುರಿದಿತ್ತು.

ಇದೀಗ ₹1,850 ಕೋಟಿ ಗಳಿಸಿರುವ ‘ಧುರಂಧರ್ 2’ ಚಿತ್ರದ ದಾಖಲೆಯೇ ಮುಂದಿನ ಗುರಿಯಾಗಿದೆ. ಬಳಿಕ ₹2,070 ಕೋಟಿ ಗಳಿಸಿರುವ ‘ದಂಗಲ್’ ದಾಖಲೆಯ ಮೇಲೆ ಚಿತ್ರತಂಡದ ಕಣ್ಣಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ‘ರಾಮಾಯಣ’ ಅಬ್ಬರ ಮುಂದುವರಿದಿದೆ. 23ನೇ ದಿನ ₹5 ಕೋಟಿ ಗಳಿಸಿದ್ದು, ಒಟ್ಟು ವಿದೇಶಿ ಆದಾಯ ₹595 ಕೋಟಿಗೆ ತಲುಪಿದೆ. 27 ದೇಶಗಳಲ್ಲಿ ನಂಬರ್ ಒನ್ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ವರದಿಯಾಗಿದೆ.

Author

ANU News

Follow Me
Other Articles
Previous

‘Hanuman Ansh’ Explores Neem Karoli Baba’s Spiritual Journey at 57th IFFI

Next

SC/ST Patients With Annual Income Up to ₹5 Lakh Can Get Medical Aid of Up to ₹3.5 Lakh

Recent Posts

  • ಮಹಾರಾಷ್ಟ್ರದಲ್ಲಿ ಬೃಹತ್ ವನ್ಯಜೀವಿ ಕಳ್ಳಸಾಗಣೆ ಜಾಲ ಭೇದಿಸಿದ DRI; 2 ಲೀಟರ್ ಶಂಕಿತ ಹಾವಿನ ವಿಷ, ಬೆಕ್ಕಿನ ಚರ್ಮ ವಶ
  • Goods Train Derailment Disrupts Rail Services in Assam; 17 Trains Affected
  • ‘Disruption to Sea Routes Can Hit Essential Supplies’: Murmu on Maritime Security
  • ಕ್ಷೇತ್ರ ವಿಂಗಡಣಾ ಮಸೂದೆಯಲ್ಲಿ ಎಸ್‌ಸಿ, ಎಸ್‌ಟಿ ಹಿತ ಕಡೆಗಣನೆ: ಖರ್ಗೆ ಆರೋಪ!
  • Kharge Accuses Centre of Ignoring SC/ST Interests in Delimitation Bill
Copyright 2026 — ANU News. All rights reserved. Blogsy WordPress Theme