Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಬೆಳಗಾವಿ ಅಧಿವೇಶನ ವೇಳೆ ಶಾಸಕರು, ಅಧಿಕಾರಿಗಳು ಹೊಟೇಲುಗಳ ಬದಲು ಅನ್ನದಾತರ ಮನೆಗಳಲ್ಲಿ ವಾಸ್ತವ್ಯ ಹೂಡಿ ಸರ್ಕಾರದ ಹೊರೆ ತಗ್ಗಿಸಿ’ ಸ್ಪೀಕರ್, ಸಿಎಂಗೆ ರೈತರ ಮನವಿ

By ANU News
November 26, 2026 1 Min Read
Comments Off on ‘ಬೆಳಗಾವಿ ಅಧಿವೇಶನ ವೇಳೆ ಶಾಸಕರು, ಅಧಿಕಾರಿಗಳು ಹೊಟೇಲುಗಳ ಬದಲು ಅನ್ನದಾತರ ಮನೆಗಳಲ್ಲಿ ವಾಸ್ತವ್ಯ ಹೂಡಿ ಸರ್ಕಾರದ ಹೊರೆ ತಗ್ಗಿಸಿ’ ಸ್ಪೀಕರ್, ಸಿಎಂಗೆ ರೈತರ ಮನವಿ

ಬೆಂಗಳೂರು: ರಾಜ್ಯ ಸರ್ಕಾರದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದ ವೇಳೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೋಟೆಲ್‌ಗಳಲ್ಲಿ ತಂಗುವ ಬದಲು ರೈತರ ಮನೆಗಳಲ್ಲಿ ವಾಸ್ತವ್ಯ ಹೂಡುವಂತೆ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

ವಿಧಾನಸಭಾಧ್ಯಕ್ಷರು, ವಿಧಾನಪರಿಷತ್ ಸಭಾಪತಿ, ಮುಖ್ಯಮಂತ್ರಿ ಹಾಗೂ ರಾಜಕೀಯ ಪಕ್ಷಗಳ ಶಾಸಕಾಂಗ ನಾಯಕರಿಗೆ ಪತ್ರ ಬರೆದಿರುವ ಅವರು, ರೈತ ಕುಟುಂಬಗಳ ಆತಿಥ್ಯ ಸ್ವೀಕರಿಸುವಂತೆ ಆಹ್ವಾನ ನೀಡಿದ್ದಾರೆ. ನೂರಾರು ರೈತ ಕುಟುಂಬಗಳು ವಾಸ್ತವ್ಯ, ಊಟೋಪಚಾರದ ವ್ಯವಸ್ಥೆ ಮಾಡಲು ಸಿದ್ಧವಿದ್ದು, ಇದರಿಂದ ಹೋಟೆಲ್ ವೆಚ್ಚವನ್ನು ಉಳಿಸಿ ಸರ್ಕಾರಿ ಖಜಾನೆಗೆ ಹೊರೆಯಾಗುವುದನ್ನು ತಪ್ಪಿಸಬಹುದು ಎಂದಿದ್ದಾರೆ.

ಬರ ಪರಿಸ್ಥಿತಿ, ಬೆಲೆ ಏರಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯಿಂದ ಸರ್ಕಾರ ಸಂಕಷ್ಟದಲ್ಲಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ವಿಚಾರದಲ್ಲಿ ರೈತರು ಸರ್ಕಾರದ ತೀರ್ಮಾನ ಒಪ್ಪಿಕೊಂಡಿದ್ದಾರೆ. ಕನಿಷ್ಠ ವೇತನಕ್ಕಾಗಿ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರೂ ಗೌರವಧನ ಹೆಚ್ಚಳವಾಗಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಆರ್ಥಿಕ ನೆರವು ನೀಡಲು ಸಾಧ್ಯವಾಗದಿದ್ದರೂ ನೈತಿಕ ಬೆಂಬಲ ನೀಡಲು ರೈತರು ಸಿದ್ಧರಿದ್ದಾರೆ ಎಂದು ತಿಳಿಸಿದ್ದಾರೆ.

ಅಧಿವೇಶನದ ವೆಚ್ಚ ಕಡಿಮೆ ಮಾಡಲು ವಾರಾಂತ್ಯದಲ್ಲೂ ಕಲಾಪ ನಡೆಸಬೇಕು. ಪ್ರತಿದಿನ ಎರಡು ಗಂಟೆ ಹೆಚ್ಚುವರಿ ಕಲಾಪ ನಡೆಸುವ ಮೂಲಕ ಅಧಿವೇಶನದ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

Author

ANU News

Follow Me
Other Articles
Previous

Former Awami League Leader Shot Dead as Violence Escalates in Bangladesh

Next

Stay in Farmers’ Homes Instead of Hotels During Belagavi legislature Session: Kuruburu Shantakumar

Recent Posts

  • Marbu Beat Hanan CC to Win Karnataka Rajyotsava Cup 2026 in Doha
  • US Proposes Tariffs of Up to 25% on Indian Goods
  • ಭಾರತದ ಸರಕುಗಳ ಮೇಲೆ ಶೇ.25ರವರೆಗೆ ಸುಂಕ ಸೀಮಿತಗೊಳಿಸಲು ಅಮೆರಿಕ ಪ್ರಸ್ತಾವ
  • US Court Blocks Trump’s Fresh Bid to Restrict Birthright Citizenship
  • ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಜನ್ಮಸಿದ್ಧ ಪೌರತ್ವ ನಿರ್ಬಂಧಕ್ಕೆ ಕೋರ್ಟ್ ತಡೆ
Copyright 2026 — ANU News. All rights reserved. Blogsy WordPress Theme