Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

₹7 ಕೋಟಿ ವೆಚ್ಚದ ‘ತುಮಕೂರು ಸ್ಕ್ವೇರ್’ ಡಿಜಿಟಲ್ ಡಿಸ್ಪ್ಲೇ ಲೋಕಾರ್ಪಣೆ

By ANU News
November 15, 2026 1 Min Read
Comments Off on ₹7 ಕೋಟಿ ವೆಚ್ಚದ ‘ತುಮಕೂರು ಸ್ಕ್ವೇರ್’ ಡಿಜಿಟಲ್ ಡಿಸ್ಪ್ಲೇ ಲೋಕಾರ್ಪಣೆ

ತುಮಕೂರು: ನಗರದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ಅಂದಾಜು ₹7 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಬೃಹತ್ ಎಲ್‌ಇಡಿ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ‘ತುಮಕೂರು ಸ್ಕ್ವೇರ್’ ಅನ್ನು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರು ಇನ್ನು ಮುಂದೆ ಸಣ್ಣ ನಗರ ಎಂಬ ಭಾವನೆ ಯಾರಲ್ಲಿಯೂ ಇರಬಾರದು. ಬೆಂಗಳೂರು ಮತ್ತು ತುಮಕೂರು ರಸ್ತೆ ಸಂಪರ್ಕದ ಮೂಲಕ ಹತ್ತಿರವಾಗಿದ್ದು, ಮುಂದಿನ ದಿನಗಳಲ್ಲಿ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಜಿಲ್ಲೆಯ ಯುವಜನರಿಗೆ ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದರು.

ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ಇಲ್ಲ ಎಂಬುದು ಗಮನಾರ್ಹ. ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರ ಸಲಹೆಯಂತೆ ಯೋಜನೆ ರೂಪಿಸಲಾಗಿದ್ದು, ಅಧಿಕಾರಿಗಳು ರಾತ್ರಿ ಹಗಲೆನ್ನದೆ ಶ್ರಮಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅಭಿನಂದಿಸಿದರು.

ಕನ್ನಡ ರಾಜ್ಯೋತ್ಸವದಂದು ಉದ್ಘಾಟಿಸಲು ಉದ್ದೇಶಿಸಿದ್ದ ಯೋಜನೆಗೆ ಡಿಜಿಟಲ್ ಬೋರ್ಡ್‌ಗಳ ಪೂರೈಕೆ, ತಾಂತ್ರಿಕ ಪ್ರಕ್ರಿಯೆ ಮತ್ತು ಸಂಚಾರ ನಿರ್ವಹಣೆಯ ಕಾರಣದಿಂದ ವಿಳಂಬವಾಯಿತು. ತಾಂತ್ರಿಕ ದೋಷಗಳನ್ನು ಸರಿಪಡಿಸಿ ನವೆಂಬರ್ 14ರಂದು ಮಕ್ಕಳಿಗೆ ಸಮರ್ಪಿಸುವ ಉದ್ದೇಶದೊಂದಿಗೆ ಈಗ ಸಾರ್ವಜನಿಕರಿಗೆ ಅರ್ಪಿಸಲಾಗಿದೆ ಎಂದರು.

ಕಳೆದ ಮೂರು ವರ್ಷಗಳಿಂದ ತುಮಕೂರು ದಸರಾವನ್ನು ವಿಸ್ತೃತವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಒಂಬತ್ತು-ಹತ್ತು ದಿನಗಳ ಮಹೋತ್ಸವವನ್ನು ಸುಮಾರು 20 ಲಕ್ಷ ಜನರು ವೀಕ್ಷಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಾರ್ವಜನಿಕರು ಮತ್ತು ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಸಿದ್ಧಗಂಗಾ ಮಠದೊಂದಿಗಿನ ತಮ್ಮ ಕುಟುಂಬದ ದೀರ್ಘಕಾಲದ ಗೌರವಯುತ ಸಂಬಂಧವನ್ನು ಸ್ಮರಿಸಿದ ಅವರು, ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಹೆಸರಿನ ವೃತ್ತದಲ್ಲಿ ಈ ವ್ಯವಸ್ಥೆ ನಿರ್ಮಿಸಿರುವುದು ಅವರಿಗೆ ಸಲ್ಲಿಸಿದ ಗೌರವ ಎಂದರು.

ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಭೂಮಿಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಕೈಗಾರಿಕೆಗಳು ಬಂದಿವೆ. ಗ್ರೀನ್ ಹೈಡ್ರೋಜನ್ ಘಟಕ ಮತ್ತು ಡೇಟಾ ಸೆಂಟರ್ ಸ್ಥಾಪನೆಗೆ ಸುಮಾರು ₹80 ಸಾವಿರ ಕೋಟಿ ಹೂಡಿಕೆ ಪ್ರಸ್ತಾವನೆ ಬಂದಿದೆ. ಒಂದು ಸಾವಿರ ಎಕರೆ ಭೂಮಿ ಒದಗಿಸಿದರೆ 30 ಸಾವಿರ ಉದ್ಯೋಗ ಸೃಷ್ಟಿಸುವ ಉದ್ದೇಶ ಹೂಡಿಕೆದಾರರಿಗಿದೆ ಎಂದು ತಿಳಿಸಿದರು.

Author

ANU News

Follow Me
Other Articles
Previous

ಪಾಕಿಸ್ತಾನಕ್ಕೆ ಸೋಲುಣಿಸಿ ಅಂಡರ್-19 ಏಷ್ಯಾಕಪ್ ಗೆದ್ದ ಭಾರತ; ಕೊನೆಯ ಎಸೆತದಲ್ಲಿ ರೋಚಕ ಜಯ!

Next

LED Digital Display ‘Tumakuru Square’ Unveiled

Recent Posts

  • Bengaluru’s Koramangala Ward Wins National Award in Clean Air Survey
  • ಜನರ ಸಂಕಷ್ಟಕ್ಕಿಂತ ಕಾಂಗ್ರೆಸ್ ಸರ್ಕಾರಕ್ಕೆ ಪ್ರಚಾರವೇ ಮುಖ್ಯ: ಡಾ. ಸಿ.ಟಿ. ರವಿ
  • ನವೆಂಬರ್ 17ರಿಂದ ಬೆಂಗಳೂರಿನಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸಮ್ಮೇಳನ
  • Karnataka Mulls Annual Month-Long Sports Festival: Priyank Kharge
  • ಪ್ರತಿ ವರ್ಷ ಒಂದು ತಿಂಗಳು ಕ್ರೀಡಾ ಹಬ್ಬ ಆಯೋಜನೆಗೆ ಚಿಂತನೆ: ಪ್ರಿಯಾಂಕ್ ಖರ್ಗೆ
Copyright 2026 — ANU News. All rights reserved. Blogsy WordPress Theme