ಅಂಡರ್-19 ಏಷ್ಯಾಕಪ್: ಭಾರತ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ,
ಅಲ್ ಅಮರತ್ (ಓಮನ್): ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದೆ. 209 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ, ಆರಂಭದಲ್ಲಿ 61 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಹಮ್ಜಾ ಜಹೂರ್ ಅವರ ಅಮೋಘ ಶತಕದ ನೆರವಿನಿಂದ ರೋಚಕ ಗೆಲುವು ದಾಖಲಿಸಿತು.

ಆರನೇ ವಿಕೆಟ್‌ಗೆ ಹಮ್ಜಾ ಮತ್ತು ಹಸ್ನೈನ್ ಅಬ್ಬಾಸ್ ದಾರ್ 107 ರನ್‌ಗಳ ಜೊತೆಯಾಟವಾಡಿದರು. ಹಸ್ನೈನ್ 67 ಎಸೆತಗಳಲ್ಲಿ 38 ರನ್ ಗಳಿಸಿದರೆ, ಹಮ್ಜಾ 107 ಎಸೆತಗಳಲ್ಲಿ ಅಜೇಯ 100 ರನ್ ಸಿಡಿಸಿದರು. ಕೊನೆಯ ಹಂತದಲ್ಲಿ ಬೌಂಡರಿಗಳ ಸುರಿಮಳೆಗೈದು ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಭಾರತ 46.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಅರ್ಜುನ್ ರಜಪೂತ್ 107 ರನ್ ಗಳಿಸಿ ಶತಕ ದಾಖಲಿಸಿದ್ದರು. ಅಲ್ ಅಮರತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅನ್ವಯ್ ದ್ರಾವಿಡ್ ಅವರ ಏಕಹಸ್ತ ಕ್ಯಾಚ್ ಕೂಡ ಗಮನ ಸೆಳೆಯಿತು.