Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಒತ್ತು ನೀಡಿ’ ನೂತನ ಸಚಿವರಿಗೆ ಸುರ್ಜೆವಾಲಾ ಸಲಹೆ

By ANU News
August 4, 2026 1 Min Read
Comments Off on ‘ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಒತ್ತು ನೀಡಿ’ ನೂತನ ಸಚಿವರಿಗೆ ಸುರ್ಜೆವಾಲಾ ಸಲಹೆ

ಬೆಂಗಳೂರು: ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಭಿನಂದನೆ ಸಲ್ಲಿಸಿದ್ದಾರೆ. ಸಚಿವರ ಅಧಿಕಾರಾವಧಿ ಜನಪರ ಹಾಗೂ ಯಶಸ್ವಿಯಾಗಲಿ ಎಂದು ಅವರು ಹಾರೈಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಶುಭಾಶಯ ಕೋರಿರುವ ಸುರ್ಜೇವಾಲ, ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್‌ನ ಬದ್ಧತೆಯನ್ನು ಪ್ರತಿಬಿಂಬಿಸುವ ಸಚಿವ ಸಂಪುಟ ರಚನೆಯಾಗಿದ್ದು, ಯುವಶಕ್ತಿ ಮತ್ತು ಅನುಭವದ ಸಮನ್ವಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಹಾಗೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ಸಚಿವರು ಮತ್ತು ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿವೃದ್ಧಿಯ ಪಯಣವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಪ್ರತಿಯೊಬ್ಬ ಕನ್ನಡಿಗರ ಯಶಸ್ಸಿನಲ್ಲೇ ಕಾಂಗ್ರೆಸ್ ಸರ್ಕಾರದ ಯಶಸ್ಸಿದ್ದು, ಪ್ರತಿಯೊಬ್ಬರ ಕಲ್ಯಾಣವೇ ಸರ್ಕಾರದ ಧ್ಯೇಯ ಹಾಗೂ ಬದ್ಧತೆಯಾಗಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.

Author

ANU News

Follow Me
Other Articles
Previous

ರಾಜ್ಯ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ?; ಕೋಲಾರ ಸೇರಿ 8 ಜಿಲ್ಲೆಗಳು ಪ್ರಾತಿನಿಧ್ಯದಿಂದ ವಂಚಿತ

Next

ವಿಧಾನಪರಿಷತ್ ಸಭಾಪತಿ ರಾಜೀನಾಮೆಗೆ ಸಿಎಂ ಮನವಿ; ಕಾಂಗ್ರೆಸ್ ಹೊಸ ಸಂಪ್ರದಾಯಕ್ಕೆ ಹೊರಟ್ಟಿ ಆಕ್ಷೇಪ

Recent Posts

  • Jr NTR Unveils Trailer of Telugu Thriller ‘Itlu Arjuna’
  • ‘ಇಟ್ಲು ಅರ್ಜುನ’: ತೆಲುಗು ರೊಮ್ಯಾಂಟಿಕ್ ಥ್ರಿಲ್ಲರ್
  • ಕಾಂಗ್ರೆಸ್, ಬಿಜೆಪಿ, ಆರ್‌ಎಸ್‌ಎಸ್‌ಗೆ ವಿದೇಶಿ ಹಣ ಬರುತ್ತಿದೆಯೇ? ಬಹಿರಂಗ ಚರ್ಚೆಗೆ ಪ್ರಿಯಾಂಕ್ ಖರ್ಗೆ ಆಗ್ರಹ
  • Iran Allows Indian Ships to Transit Strait of Hormuz Amid Restrictions
  • ಹಾರ್ಮುಜ್ ಜಲಸಂಧಿ ನಿರ್ಬಂಧ: ಭಾರತ ಸೇರಿ ನಾಲ್ಕು ದೇಶಗಳಿಗೆ ಇರಾನ್ ವಿನಾಯಿತಿ
Copyright 2026 — ANU News. All rights reserved. Blogsy WordPress Theme