Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ನೈಸ್ ಕಂಪನಿ ಮಾಲೀಕರಿಗೆ ಸರ್ಕಾರ ಶೂ ಪಾಲಿಶ್ ಮಾಡುತ್ತಿದೆಯೇ?’; ಕುಮಾರಸ್ವಾಮಿ ಕಿಡಿ

By ANU News
August 9, 2026 1 Min Read
0

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ಕುರಿತು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೈಸ್ ಕಂಪನಿ ಮಾಲೀಕರ ಪರ ಸರ್ಕಾರ ನಿಂತಿದೆ ಎಂದು ಆರೋಪಿಸಿದ ಅವರು, ರೈತರ ಹಿತ ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಅಕ್ರಮ ಎಸಗಿರುವ ನೈಸ್ ಕಂಪನಿ ಮಾಲೀಕರಿಗೆ ಸರ್ಕಾರ ಶೂ ಪಾಲಿಶ್ ಮಾಡುತ್ತಿದೆಯೇ?” ಎಂದು ಪ್ರಶ್ನಿಸಿದರು.

2018ರ ವರದಿಯಲ್ಲೇ ನೈಸ್ ಯೋಜನೆಯಲ್ಲಿ ಅಕ್ರಮ ಹಾಗೂ ಲೂಟಿ ನಡೆದಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದರೂ, ಕಾಂಗ್ರೆಸ್ ಸರ್ಕಾರ ಈವರೆಗೆ ಯಾವ ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು. 136 ಸ್ಥಾನಗಳನ್ನು ನೀಡಿ ಅಧಿಕಾರಕ್ಕೆ ತಂದ ಜನರಿಗೆ ಸರ್ಕಾರ ನೀಡುತ್ತಿರುವ ಉತ್ತರ ಇದೇನಾ ಎಂದು ವಾಗ್ದಾಳಿ ನಡೆಸಿದರು.

ಸಾವಿರಾರು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿ, ಸುಮಾರು 20 ಸಾವಿರ ಎಕರೆ ಭೂಮಿಯನ್ನು ಕಬಳಿಸಲಾಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಅಕ್ರಮವಾಗಿ ಟೋಲ್ ವಸೂಲಿ ಮಾಡುತ್ತಿರುವವರ ಪರ ಸರ್ಕಾರ ನಿಂತಿರುವುದು ಖಂಡನೀಯ ಎಂದರು.

ರೈತರ ಭೂಮಿಗೆ ಸೂಕ್ತ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲವೇ ಎಂದು ಪ್ರಶ್ನಿಸಿದ ಅವರು, ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.

“ರೈತರ ಪರ ನಿಲ್ಲುವ ಬದಲು ಲೂಟಿಕೋರರ ಪರ ನಿಂತಿರುವ ಈ ಸರ್ಕಾರಕ್ಕೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Author

ANU News

Follow Me
Other Articles
Previous

Chandipura virus cases rise in Gujarat; 39 test positive, toll reaches 23

Next

NICE row: Kumaraswamy accuses Karnataka govt of ignoring farmers’ interests

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • DK Shivakumar alleges bid to delete voters through Form 7 during SIR
    • SIR ಹೆಸರಲ್ಲಿ ಮತದಾರರ ಹೆಸರು ಅಳಿಸಲು ಸಂಚು: ಡಿಕೆಶಿ ಆರೋಪ
    • Bharavase Foundation takes cancer prevention message to Bengaluru workplace
    • Jog Falls may flow year-round under tourism department plan
    • ಮಳೆಗಾಲಕ್ಕಷ್ಟೇ ಜೋಗ ಸೀಮಿತವಲ್ಲ; ವರ್ಷವಿಡೀ ಜಲಧಾರೆಗೆ ಮಾಸ್ಟರ್ ಪ್ಲಾನ್
    Copyright 2026 — ANU News. All rights reserved. Blogsy WordPress Theme