Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

‘ಮಹಾಭಾರತ’ದ ಅಶ್ವತ್ಥಾಮ, ಬಹುಭಾಷಾ ನಟ ಪ್ರದೀಪ್ ರಾವತ್ ನಿಧನಕ್ಕೆ ಕಂಬನಿಯ ಮಹಾಪೂರ

By ANU News
August 5, 2026 1 Min Read
0

ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ಖ್ಯಾತ ಖಳನಟ ಪ್ರದೀಪ್ ರಾವತ್ ಅವರು ಆಗಸ್ಟ್ 4ರ ಸಂಜೆ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯನ್ನು ಸಹನಟ ಯಶ್‌ಪಾಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ವಿವಿಧ ಚಿತ್ರರಂಗಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

1988ರಲ್ಲಿ ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಧಾರಾವಾಹಿಯಲ್ಲಿ ಅಶ್ವತ್ಥಾಮ ಪಾತ್ರದ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಪ್ರದೀಪ್ ರಾವತ್, 1990ರಲ್ಲಿ ಸಲ್ಮಾನ್ ಖಾನ್ ಅಭಿನಯದ ‘ಬಾಘಿ’ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ಬಳಿಕ ‘ಲಗಾನ್’ ಚಿತ್ರದಲ್ಲಿ ದೇವ್ ಪಾತ್ರ ಹಾಗೂ ‘ಘಜಿನಿ’ ಚಿತ್ರದಲ್ಲಿ ಘಜಿನಿ ಧರ್ಮಾತ್ಮ ಪಾತ್ರದ ಮೂಲಕ ಭಾರತೀಯ ಚಿತ್ರರಂಗದ ಪ್ರಮುಖ ಖಳನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

ತೆಲುಗಿನ ‘ಸೈ’ ಚಿತ್ರದ ಭಿಕ್ಷು ಯಾದವ್ ಪಾತ್ರಕ್ಕೆ ಫಿಲ್ಮ್‌ಫೇರ್ ಮತ್ತು ನಂದಿ ಪ್ರಶಸ್ತಿಗಳನ್ನು ಪಡೆದಿದ್ದರು. ‘ಛತ್ರಪತಿ’, ‘ದೇಶಮುದುರು’, ‘ರಾಜಣ್ಣ’ ಸೇರಿದಂತೆ ಹಲವು ತೆಲುಗು ಚಿತ್ರಗಳಲ್ಲೂ ಅವರು ಮೆರೆದಿದ್ದರು.

ಕನ್ನಡದಲ್ಲಿ ಉಪೇಂದ್ರ ಅಭಿನಯದ ‘ಪರೋಡಿ’ ಚಿತ್ರದ ಮೂಲಕ ಪ್ರವೇಶಿಸಿದ ಅವರು, ದರ್ಶನ್ ಅಭಿನಯದ ‘ಗಜ’, ‘ಅಭಯ್’, ಕಿಚ್ಚ ಸುದೀಪ್ ಅಭಿನಯದ ‘ಬಚ್ಚನ್’, ‘ಶಿವಲಿಂಗ’, ‘ಲಕ್ಷ್ಮಣ’, ‘ಚಾಂಪಿಯನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ಅಭಿನಯಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು.

ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ ಪ್ರದೀಪ್ ರಾವತ್ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

Author

ANU News

Follow Me
Other Articles
Previous

ಅಸಮಾಧಾನಿತ ಶಾಸಕರ ಮನವೊಲಿಕೆ: ಎಂ. ಕೃಷ್ಣಪ್ಪ, ಟಿ.ಬಿ. ಜಯಚಂದ್ರ ನಿವಾಸಕ್ಕೆ ಸಚಿವ ಚಲುವರಾಯಸ್ವಾಮಿ ಭೇಟಿ

Next

Pradeep Rawat’s death leaves Indian cinema in mourning

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • SC stays inquiry against medical education ACS in Ashwin Hebbar case
    • ವೈದ್ಯಕೀಯ ಶಿಕ್ಷಣ ಇಲಾಖೆ ACS ವಿರುದ್ಧದ ಇಲಾಖಾ ವಿಚಾರಣೆಗೆ ತಡೆ; ಪ್ರಾಧ್ಯಾಪಕರ ಅಮಾನತು ಆದೇಶ ಮುಂದುವರಿಸಿದ ಸುಪ್ರೀಂ ಕೋರ್ಟ್‌
    • UKP site allotment row: Chaluvarayaswamy orders FIRs, strict action against guilty
    • ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಿ – ಸಚಿವ ಎನ್. ಚಲುವರಾಯಸ್ವಾಮಿ ಖಡಕ್ ಸೂಚನೆ
    • Don’t call bribery ‘dharma’: C.T. Ravi targets Karnataka govt over minister’s remarks
    Copyright 2026 — ANU News. All rights reserved. Blogsy WordPress Theme