Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮುಡಾ 50:50 ಹಗರಣಕ್ಕೆ ಬಿಗ್ ಟ್ವಿಸ್ಟ್; 1,100 ನಿವೇಶನಗಳ ಹಂಚಿಕೆ ರದ್ದು

By ANU News
August 20, 2026 1 Min Read
0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವಿವಾದಾತ್ಮಕ ನಿಯಮದಡಿ ಅಕ್ರಮವಾಗಿ ಹಂಚಿಕೆಯಾಗಿದ್ದ 1,100 ಬದಲಿ ನಿವೇಶನಗಳ ಹಂಚಿಕೆಯನ್ನು ತಕ್ಷಣದಿಂದಲೇ ರದ್ದುಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆದೇಶಿಸಿದ್ದಾರೆ.

2020ರಲ್ಲಿ ಭೂಸ್ವಾಧೀನಕ್ಕೆ ಒಳಗಾದ ಮಾಲೀಕರಿಗೆ ಪರಿಹಾರದ ಬದಲಾಗಿ ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಶೇ.50ರಷ್ಟು ನಿವೇಶನ ನೀಡುವ 50:50 ನಿಯಮ ಜಾರಿಗೆ ಬಂದಿತ್ತು. ಆದರೆ ಮುಡಾ ಮಂಡಳಿಯ ಗಮನಕ್ಕೆ ತರದೆ ನಕಲಿ ದಾಖಲೆಗಳ ಮೂಲಕ ಅನರ್ಹರಿಗೆ ದುಬಾರಿ ಪ್ರದೇಶಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಇದೀಗ ಈ ಕ್ರಮದಿಂದ ಸುಮಾರು ₹2,000 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿ ಸರ್ಕಾರಕ್ಕೆ ಉಳಿದಂತಾಗಿದೆ.

ನೋಂದಾಯಿತ ನಿವೇಶನಗಳಿಗೂ ಕ್ರಮ

2023ರ ಮಾರ್ಚ್‌ನಲ್ಲೇ 50:50 ಅನುಪಾತದಡಿ ನಿವೇಶನ ಹಂಚಿಕೆ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದ್ದರೂ, ನಿಯಮ ಉಲ್ಲಂಘಿಸಿ ಹಂಚಿಕೆ ಮುಂದುವರಿಸಲಾಗಿದೆ ಎಂಬ ಆರೋಪವಿದೆ.

ಈ ಕುರಿತು ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ಮತ್ತು ತಾಂತ್ರಿಕ ಸಮಿತಿ ತನಿಖೆ ನಡೆಸಿದ್ದು, ನಿಯಮ ಉಲ್ಲಂಘನೆ ದೃಢಪಟ್ಟ ಹಿನ್ನೆಲೆಯಲ್ಲಿ ಹಂಚಿಕೆ ರದ್ದುಗೊಳಿಸಲಾಗಿದೆ.

ಈಗಾಗಲೇ ನೋಂದಣಿಯಾಗಿರುವ ನಿವೇಶನಗಳನ್ನು ಕಾನೂನುಬದ್ಧವಾಗಿ ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಮುಡಾಗೆ ಸೂಚಿಸಲಾಗಿದೆ. ಅಂತಹ ನಿವೇಶನಗಳಿಗೆ ಹೊಸ ಖಾತಾ ಮಾಡದಂತೆ ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಲಾಗಿದ್ದು, ಈಗಾಗಲೇ ಮಾಡಿರುವ ಖಾತಾಗಳನ್ನೂ ರದ್ದುಪಡಿಸಲು ಸೂಚಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಮುಡಾದಿಂದ ಹೊಸ ಕ್ರಯಪತ್ರ ನೀಡುವುದಕ್ಕೂ ನಿರ್ಬಂಧ ಹೇರಲಾಗಿದೆ.

Author

ANU News

Follow Me
Other Articles
Previous

Spurious liquor tragedy in Gujarat: 4 dead, 18 hospitalised

Next

MUDA 50:50 scam: 1,100 replacement plots cancelled

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Air India flight diverted to Jaipur after hijack alert; 250 passengers safe
    • ಹೈಜಾಕ್ ಎಚ್ಚರಿಕೆ: ಏರ್ ಇಂಡಿಯಾ ವಿಮಾನ ಜೈಪುರಕ್ಕೆ ಡೈವರ್ಟ್
    • India Post, IndiGo Take Digital Detox Campaign to the Skies
    • President Appoints Two Additional Judges to Madras High Court
    • 13 Dead After Boat Carrying 30 Capsizes in Bihar’s Ganga; PM Modi Announces Compensation
    Copyright 2026 — ANU News. All rights reserved. Blogsy WordPress Theme