Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಶಿಕಾರಿಪುರದಲ್ಲಿ ಹೋರಿ ಹಬ್ಬದ ವೇಳೆ ದುರಂತ: ಮೂವರು ಸಾವು

By ANU News
November 16, 2026 1 Min Read
Comments Off on ಶಿಕಾರಿಪುರದಲ್ಲಿ ಹೋರಿ ಹಬ್ಬದ ವೇಳೆ ದುರಂತ: ಮೂವರು ಸಾವು

ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ದೀಪಾವಳಿ ನಂತರ ನಡೆಯುವ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ವೇಳೆ ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ತಾಲೂಕಿನ ಕಲ್ಮನೆ ಗ್ರಾಮದಲ್ಲಿ ಹೋರಿ ಸ್ಪರ್ಧೆಯನ್ನು ಮನೆ ಬಾಗಿಲಲ್ಲಿ ವೀಕ್ಷಿಸುತ್ತಿದ್ದ ಈರಪ್ಪ (84) ಮತ್ತು ಚುರ್ಚುಗುಂಡಿ ಗ್ರಾಮದ ಅರುಣ್ (48) ಅವರಿಗೆ ಓಡುತ್ತಿದ್ದ ಹೋರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.

ಇನ್ನೊಂದು ಘಟನೆಯಲ್ಲಿ, ಕೆರೆಗೆ ಬಿದ್ದ ಹೋರಿಯನ್ನು ರಕ್ಷಿಸಲು ತೆರಳಿದ್ದ ಅಶ್ರಫ್ (22) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬುಧವಾರ ಹಿತ್ತಲ ಗ್ರಾಮದಲ್ಲಿ ನಡೆದ ಹೋರಿ ಹಬ್ಬಕ್ಕೆ ಆಗಮಿಸಿದ್ದ ಅಶ್ರಫ್, ಹೋರಿ ಕೆರೆಗೆ ಬಿದ್ದು ಹೊರಬರಲಾಗದೆ ಒದ್ದಾಡುತ್ತಿದ್ದುದನ್ನು ಕಂಡು ರಕ್ಷಿಸಲು ಮುಂದಾಗಿದ್ದರು. ಈ ಘಟನೆ ಗುರುವಾರ ಹುಣಸೇಕೊಪ್ಪ ಗ್ರಾಮದ ಸಮೀಪ ನಡೆದಿದೆ.

Author

ANU News

Follow Me
Other Articles
Previous

FBI Sounds Alert Over Hackers Using AI Tools to Target Organisations Worldwide

Next

ಕೇರಳದ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಮಮ್ಮೂಟ್ಟಿ ಬ್ರಾಂಡ್ ಅಂಬಾಸಿಡರ್

Recent Posts

  • ಕರ್ನಾಟಕದ ಜಲಸಂಕಷ್ಟ ಪರಿಹಾರಕ್ಕೆ ಪ್ರಧಾನಿಗೆ ದೇವೇಗೌಡರ ಪತ್ರ: ಐದು ಪ್ರಮುಖ ಬೇಡಿಕೆಗಳ ಪ್ರಸ್ತಾಪ
  • ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ರಣತಂತ್ರ: ಸ್ಕ್ರೀನಿಂಗ್ ಸಮಿತಿ ಮುಖ್ಯಸ್ಥರ ನೇಮಕ
  • Congress names screening panel chiefs for assembly polls in five states
  • Karnataka Farmers Seek 70% Share in Profits from Sugar By-products
  • ಬೆಂಗಳೂರಿನ ಭಾರತಿನಗರದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಉದ್ಘಾಟನೆ
Copyright 2026 — ANU News. All rights reserved. Blogsy WordPress Theme