Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಅಹಮದಾಬಾದ್‌ನಲ್ಲಿ ಬ್ರಿಕ್ಸ್ ಸಾಂಪ್ರದಾಯಿಕ ಕ್ರೀಡಾ ಹಬ್ಬ; ಹಲವು ದೇಶಗಳ ಕ್ರೀಡಾ ಪರಂಪರೆ ಅನಾವರಣ

By ANU News
October 10, 2026 1 Min Read
0

ಅಹಮದಾಬಾದ್: ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಭಾಗವಾಗಿ ಅಹಮದಾಬಾದ್‌ನಲ್ಲಿ ಬ್ರಿಕ್ಸ್ ಸಾಂಪ್ರದಾಯಿಕ ಮತ್ತು ಸ್ಥಳೀಯ ಕ್ರೀಡಾ ಪ್ರದರ್ಶನ ಕ್ರೀಡಾಕೂಟ–2026 ಆಯೋಜಿಸಲಾಗಿದೆ. ಅಕ್ಟೋಬರ್ 12ರಂದು ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಗುಜರಾತ್ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ. ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಘವಿ, ಕೇಂದ್ರ ಕ್ರೀಡಾ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಡ್ಸೆ ಹಾಗೂ ಗುಜರಾತ್ ಕ್ರೀಡಾ ರಾಜ್ಯ ಸಚಿವ ಜಯರಾಮ್ ಗಮಿತ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ ರಾಷ್ಟ್ರಗಳ ನಿಯೋಗಗಳು ತಮ್ಮ ದೇಶಗಳ ಸಾಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಈ ವೇದಿಕೆಯಲ್ಲಿ ಪ್ರದರ್ಶಿಸಲಿವೆ. ಸ್ಪರ್ಧೆಗಿಂತ ಪ್ರದರ್ಶನ, ದಾಖಲೀಕರಣ, ಅನುಭವ ವಿನಿಮಯ ಹಾಗೂ ಜ್ಞಾನ ಹಂಚಿಕೆಗೆ ಆದ್ಯತೆ ನೀಡಲಾಗಿದೆ.

ಭಾರತದ ಮಲ್ಲಖಂಬ್, ಯೋಗಾಸನ ಮತ್ತು ಕಲರಿಪಯಟ್ಟು ಪ್ರಮುಖ ಆಕರ್ಷಣೆಗಳಾಗಲಿವೆ. ಚೀನಾ ವುಶು, ಸಿಂಹ ನೃತ್ಯ ಹಾಗೂ ಆರೋಗ್ಯ ಕಿಗಾಂಗ್ ಪ್ರದರ್ಶಿಸಲಿದೆ. ಬ್ರೆಜಿಲ್‌ನಿಂದ ಸ್ಥಳೀಯ ಬ್ಲೋಪೈಪ್ ಪ್ರದರ್ಶನ, ಲಾಗ್ ರೇಸಿಂಗ್ ಮತ್ತು ಕಾಪೊಯೈರಾ ಪ್ರದರ್ಶನಗಳು ನಡೆಯಲಿವೆ.

ಇಥಿಯೋಪಿಯಾ ತನ್ನ ಸಾಂಪ್ರದಾಯಿಕ ಕುಸ್ತಿ ಮತ್ತು ಆಟಗಳನ್ನು ಪರಿಚಯಿಸಿದರೆ, ಕಝಾಕಿಸ್ತಾನ ಅಸಿಕ್ ಅಟು, ಟೋಗಿಜ್ಕುಮಲಕ್ ಹಾಗೂ ಕಜಾಕ್ ಕುರೇಸಿ ಕ್ರೀಡೆಗಳನ್ನು ಪ್ರದರ್ಶಿಸಲಿದೆ. ಬೆಲಾರಸ್ ಮತ್ತು ರಷ್ಯಾ ಗೊರೊಡ್ಕಿ ಆಟವನ್ನು ಪ್ರದರ್ಶಿಸಲಿದ್ದು, ರಷ್ಯಾ ಸ್ಯಾಂಬೊ ಕ್ರೀಡೆಯನ್ನೂ ಪರಿಚಯಿಸಲಿದೆ.

ಬೊಲಿವಿಯಾ ಲುಚಾ ಡಿ ಚೋಲಿಟಾಸ್, ಟಿಂಕು ಮತ್ತು ರಾಯುಯೆಲಾ ಸೇರಿದಂತೆ ತನ್ನ ಸಾಂಪ್ರದಾಯಿಕ ಚಟುವಟಿಕೆಗಳನ್ನು ಪ್ರದರ್ಶಿಸಲಿದೆ. ಇರಾನ್, ದಕ್ಷಿಣ ಆಫ್ರಿಕಾ ಹಾಗೂ ಸಂಯುಕ್ತ ಅರಬ್ ಎಮಿರೇಟ್ಸ್ ಕೂಡ ತಮ್ಮ ದೇಶಗಳ ಸಾಂಪ್ರದಾಯಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಅನಾವರಣಗೊಳಿಸಲಿವೆ.

ಕ್ರೀಡಾಕೂಟದ ಹಿನ್ನೆಲೆಯಲ್ಲಿ ಭಾಗವಹಿಸುವ ರಾಷ್ಟ್ರಗಳ ನಿಯೋಗಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನೂ ಆಯೋಜಿಸಲು ಯೋಜಿಸಲಾಗಿದೆ. ಬ್ರಿಕ್ಸ್ ಚೌಕಟ್ಟಿನಲ್ಲಿ ಕ್ರೀಡಾ ಸಹಕಾರ ಬಲಪಡಿಸುವುದು ಹಾಗೂ ಸಾಂಪ್ರದಾಯಿಕ ಮತ್ತು ಸ್ಥಳೀಯ ಕ್ರೀಡೆಗಳ ಉತ್ತೇಜನಕ್ಕೆ ಹೊಸ ಅವಕಾಶಗಳನ್ನು ಕಂಡುಕೊಳ್ಳುವುದು ಸಭೆಗಳ ಉದ್ದೇಶವಾಗಿದೆ.

ವಿವಿಧ ದೇಶಗಳ ಕ್ರೀಡಾ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮವು ಸಾಂಸ್ಕೃತಿಕ ವಿನಿಮಯ, ಪರಸ್ಪರ ತಿಳುವಳಿಕೆ ಮತ್ತು ಜನರ ನಡುವಿನ ಬಾಂಧವ್ಯ ವೃದ್ಧಿಗೆ ನೆರವಾಗುವ ನಿರೀಕ್ಷೆಯಿದೆ.

Author

ANU News

Follow Me
Other Articles
Previous

BRICS nations to showcase traditional sports and cultural heritage in Ahmedabad

Next

Khader Raises Karnataka Haj Pilgrims’ Concerns with Kiren Rijiju

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka government fulfils long-standing demand with 63 Tahsildar promotions
    • ಬಹುಕಾಲದಿಂದ ಬಾಕಿ ಉಳಿದಿದ್ದ ಬಡ್ತಿ ಪ್ರಕ್ರಿಯೆಗೆ ವೇಗ; 63 ತಹಶೀಲ್ದಾರ್‌ಗಳಿಗೆ ಪದೋನ್ನತಿ
    • MLC Ravi Urges Karnataka CM to Implement Minimum Wages for Gram Panchayat Staff
    • ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿ: ಸಿಎಂಗೆ ಡಾ. ರವಿ ಸಿ.ಟಿ. ಪತ್ರ
    • Andhra CM Resolves 50-Year Land Dispute, Benefits 1,301 Farmers
    Copyright 2026 — ANU News. All rights reserved. Blogsy WordPress Theme