Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಹಿನ್ನೆಲೆ; ಪಾಕ್ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ

By ANU News
September 1, 2026 1 Min Read
0

ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಸೋಲು ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಕಳಪೆ ಪ್ರದರ್ಶನ ನೀಡಿದ ಏಳು ಆಟಗಾರರನ್ನು ಸರಣಿಯ ಮಧ್ಯದಲ್ಲೇ ತಂಡದಿಂದ ಕೈಬಿಡಲಾಗಿದ್ದು, ಇಡೀ ಕೋಚಿಂಗ್ ಸಿಬ್ಬಂದಿಯನ್ನೂ ವಜಾಗೊಳಿಸಲಾಗಿದೆ.

ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 103 ರನ್‌ಗಳ ಸೋಲು ಹಾಗೂ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳ ಭಾರಿ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಈ ಕಠಿಣ ನಿರ್ಧಾರ ಕೈಗೊಂಡಿದೆ.

ಮೊಹಮ್ಮದ್ ರಿಝ್ವಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಅಲಿ ಉಸ್ಮಾನ್, ಅಮೀರ್ ಜಮಾಲ್, ಹಮ್ಮದ್ ಅವೈಸ್ ಜಫರ್ ಹಾಗೂ ಖುರ್ರಮ್ ಶಹಜಾದ್ ಅವರನ್ನು ಪ್ರವಾಸದಿಂದ ತಕ್ಷಣವೇ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ.

ಹೊಸ ಕೋಚ್‌ಗಳ ನೇಮಕ; ಮೂರನೇ ಟೆಸ್ಟ್‌ಗೆ ಹೊಸ ತಂಡ

ತಂಡದ ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಹಾಗೂ ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನೂ ಹುದ್ದೆಯಿಂದ ವಜಾಗೊಳಿಸಲಾಗಿದೆ. ಸೆಪ್ಟೆಂಬರ್ 9ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್‌ಗೂ ಮುನ್ನ ತಂಡದ ನಿರ್ವಹಣೆಯಲ್ಲಿ ಸಂಪೂರ್ಣ ಬದಲಾವಣೆ ತರಲಾಗಿದೆ.

ವೈಟ್-ಬಾಲ್ ತಂಡದ ಕೋಚ್ ಮೈಕ್ ಹೆಸನ್ ಅವರಿಗೆ ಟೆಸ್ಟ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನೂ ವಹಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ವೇಗಿ ಆಶ್ಲೇ ನಾಫ್ಕೆ ಅವರನ್ನು ನೂತನ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಸರಣಿಯಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಪಾಕಿಸ್ತಾನ, ಮೂರನೇ ಟೆಸ್ಟ್‌ನಲ್ಲಿ ಹೊಸ ಆಟಗಾರರು ಹಾಗೂ ಹೊಸ ಕೋಚಿಂಗ್ ವ್ಯವಸ್ಥೆಯೊಂದಿಗೆ ಕಣಕ್ಕಿಳಿಯಲಿದೆ.

🚨 INSIDE NEWS – DECISIONS SO FAR BY PCB 🇵🇰

Six players have been released from Pakistan’s Test squad ahead of the 3rd Test against England in Birmingham.

1️⃣ Imam-ul-Haq – Already departed for Pakistan
2️⃣ Mohammad Rizwan – Already departed for Pakistan
3️⃣ Salman Ali Agha -… pic.twitter.com/wjHSBfOjaj

— Mian Ahmad (@aHmADmIaN150) August 31, 2026

Author

ANU News

Follow Me
Other Articles
Previous

‘Unity abroad, division at home?’: B.K. Hariprasad questions Bhagwat’s remarks, RSS-BJP stance

Next

Pakistan cricket team faces major overhaul after England Test series humiliation

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Commercial LPG cylinder price hiked by ₹9.50; domestic users get relief
    • ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ; ಗೃಹಬಳಕೆ ಸಿಲಿಂಡರ್‌ಗೆ ರಿಲೀಫ್
    • Pakistan cricket team faces major overhaul after England Test series humiliation
    • ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಹಿನ್ನೆಲೆ; ಪಾಕ್ ಕ್ರಿಕೆಟ್ ತಂಡಕ್ಕೆ ಮೇಜರ್ ಸರ್ಜರಿ
    • ‘Unity abroad, division at home?’: B.K. Hariprasad questions Bhagwat’s remarks, RSS-BJP stance
    Copyright 2026 — ANU News. All rights reserved. Blogsy WordPress Theme