Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಏಳು ತಿಂಗಳ ಹೋರಾಟದ ಬಳಿಕ, ಜುಲೈ 23ಕ್ಕೆ ‘ಜನ ನಾಯಗನ್’ ರಿಲೀಸ್

By ANU News
July 15, 2026 1 Min Read
0

ಚೆನ್ನೈ: ಕಾಲಿವುಡ್ ಸ್ಟಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಬಹುನಿರೀಕ್ಷಿತ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಕಳೆದ ಏಳು ತಿಂಗಳಿಂದ ಸೆನ್ಸಾರ್ ಹಾಗೂ ಕಾನೂನು ಪ್ರಕ್ರಿಯೆಗಳಿಂದ ವಿಳಂಬವಾಗಿದ್ದ ಚಿತ್ರಕ್ಕೆ ಇದೀಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ದೊರೆತಿದೆ.

ನಟ ವಿಜಯ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡು ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ನಿರ್ಮಾಣ ಸಂಸ್ಥೆಯೂ “ಹೋರಾಟ ಎಷ್ಟು ಕಠಿಣವೋ, ಗೆಲುವು ಅಷ್ಟೇ ಭರ್ಜರಿ” ಎಂದು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

Tested by fire.
Forged by time.
Built for history.
The tougher the battle,
The louder the victory.#JanaNayaganFromJuly23#JanaNayakuduFromJuly23#JanNetaFromJuly23

The Hon’ble Chief Minister @actorvijay @KvnProductions #HVinoth @hegdepooja @anirudhofficial @thedeol… pic.twitter.com/21xjixgUBM

— KVN Productions (@KvnProductions) July 15, 2026

ಮೂಲತಃ ಈ ಸಿನಿಮಾ ಸಂಕ್ರಾಂತಿ ಪ್ರಯುಕ್ತ ಜನವರಿ 9ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ವಿವಾದ, ನ್ಯಾಯಾಲಯದ ಪ್ರಕ್ರಿಯೆ ಹಾಗೂ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದರಿಂದ ಬಿಡುಗಡೆ ಮುಂದೂಡಲಾಗಿತ್ತು.

ರಾಜಕೀಯ ಪ್ರವೇಶಿಸಿ ತಮಿಳುನಾಡಿನ ಮುಖ್ಯಮಂತ್ರಿ ಆದ ಬಳಿಕ ವಿಜಯ್ ಅಭಿನಯಿಸಿರುವ ಮೊದಲ ಹಾಗೂ ಕೊನೆಯ ಚಿತ್ರವಾಗಿರುವುದರಿಂದ ‘ಜನ ನಾಯಗನ್’ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

ಎಚ್. ವಿನೋದ್ ನಿರ್ದೇಶಿಸಿರುವ ಈ ರಾಜಕೀಯ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಮಮಿತಾ ಬೈಜು ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

Author

ANU News

Follow Me
Other Articles
Previous

ಬಡವರ ಹೆಸರಲ್ಲಿ ನಕಲಿ ಖಾತೆ ತೆರೆದು ಅಕ್ರಮ ವ್ಯವಹಾರ; ಸಿಬಿಐ, ಇ.ಡಿ ತನಿಖೆಗೆ ಸಿ.ಟಿ.ರವಿ ಆಗ್ರಹ

Next

Vijay’s final film ‘Jana Nayagan’ to hit theatres on July 23 after months of delay

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಹುತ್ವ, ಸಂವಿಧಾನದ ಆಶಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಬಿ.ಕೆ. ಹರಿಪ್ರಸಾದ್
    • ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ: ಕೇಂದ್ರಕ್ಕೆ ಲಡಾಖ್ ಸಂಘಟನೆಗಳ ಎಚ್ಚರಿಕೆ
    • Ladakh body warns of intensified agitation if Centre fails to make ‘clear progress
    • Civic apathy won’t be tolerated, says Krishna Byre Gowda during surprise Bengaluru inspectio
    • ನಾಗರಿಕ ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಕ್ರಮ: ಕೃಷ್ಣ ಬೈರೇಗೌಡ
    Copyright 2026 — ANU News. All rights reserved. Blogsy WordPress Theme