Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ

By ANU News
May 24, 2026 1 Min Read
0

ಕಾರವಾರ: ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 14 ಮಂದಿ ನೀರಿನ ಸುಳಿಗೆ ಸಿಲುಕಿದ ಪರಿಣಾಮ ಎಂಟು ಮಂದಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ನಾಲ್ವರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬೆಳಗ್ಗೆ ತಟ್ಟೆಹಕ್ಕಲು ನದಿಗೆ ತೆರಳಿದ್ದ ಕುಟುಂಬದ ಸದಸ್ಯರು ಕಪ್ಪೆಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ ಎನ್ನಲಾಗಿದೆ. ನೀರಿನ ರಭಸಕ್ಕೆ ಹಲವು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ.

ಮೃತರೆಲ್ಲರೂ ಭಟ್ಕಳದ ಶಿರಾಲಿ ಭಾಗದ ಪಡುಶಿರಾಲಿ ಶಾರದಹೊಳೆ ನಿವಾಸಿಗಳಾಗಿದ್ದು, ಮೃತಪಟ್ಟವರಲ್ಲಿ ಒಬ್ಬ ಪುರುಷ ಹಾಗೂ ಏಳು ಮಹಿಳೆಯರು ಸೇರಿದ್ದಾರೆ.

ಮೃತರನ್ನು ಲಕ್ಷ್ಮೀ ಅಣ್ಣಪ್ಪ ನಾಯ್ಕ (44), ಮಾಸ್ತಮ್ಮ ಮಂಜುನಾಥ ನಾಯ್ಕ (43), ಲಕ್ಷ್ಮೀ ಶಿವರಾಮ ನಾಯ್ಕ (39), ಉಮೇಶ್ ಮಂಜುನಾಥ ನಾಯ್ಕ (42), ಲಕ್ಷ್ಮೀ ಮಾದೇವ ನಾಯ್ಕ (38), ಮಾಲತಿ ಜಟ್ಟಪ್ಪ ನಾಯ್ಕ (38), ಲಕ್ಷ್ಮೀ ನಾಯ್ಕ ಹಾಗೂ ಜ್ಯೋತಿ ನಾಯ್ಕ (37) ಎಂದು ಗುರುತಿಸಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Author

ANU News

Follow Me
Other Articles
Previous

ಅಕ್ರಮ ರಸಗೊಬ್ಬರ ದಾಸ್ತಾನು ಪತ್ತೆ: 600 ಬ್ಯಾಗ್ ಯೂರಿಯಾ ಜಪ್ತಿ

Next

ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಸಾಫ್ಟ್‌ವೇರ್ ಮೇಲ್ದರ್ಜೆ: ಪರಮೇಶ್ವರ್
    • Karnataka to upgrade software to clear pending Bagair Hukum land cases
    • Illegal sand mining: Shivamogga contractors face ₹68 crore penalty notices
    • ಶಿವಮೊಗ್ಗದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಬಿಗ್ ಶಾಕ್; 28 ಗುತ್ತಿಗೆದಾರರಿಗೆ ₹68 ಕೋಟಿ ದಂಡ
    • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಂದುವರಿದ ಕ್ರೌರ್ಯ; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
    Copyright 2026 — ANU News. All rights reserved. Blogsy WordPress Theme