Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶಪ್ರಾದೇಶಿಕ

ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳ ವಜಾ

By ANU News
May 18, 2026 1 Min Read
0

ನವದೆಹಲಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ (KPYCC) 15 ಪದಾಧಿಕಾರಿಗಳನ್ನು ಏಕಾಏಕಿ ವಜಾಗೊಳಿಸಲಾಗಿದೆ. ಕರ್ತವ್ಯ ಲೋಪ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದ ಆರೋಪದ ಹಿನ್ನೆಲೆ ಭಾರತೀಯ ಯುವ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.

ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ (Deepika Reddy) ಸೇರಿದಂತೆ ಹಲವು ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿಗಳಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ.

ಈ ಕುರಿತು ಯುವ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ವಜಾಗೊಂಡವರ ಪಟ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ (Deepika Reddy), ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್. ಫ್ರಾನ್ಸಿಸ್ ಬೆನಿಟೊ (C.S. Francis Benito), ಬಿಂದು ಗೌಡ (Bindu Gowda), ಸುಮನ್ ಸೋಮಶೇಖರ್ (Suman Somashekhar), ಅಫ್ನಾನ್ ಖಾನಂ (Afnan Khanam), ಲಕ್ಷ್ಮಿ ಕೆ (Lakshmi K), ವಾಣಿ ಕಾಂಬ್ಳೆ (Vani Kamble), ದಕ್ಷಿಣಮೂರ್ತಿ ಎಸ್ (Dakshinamurthy S) ಸೇರಿದ್ದಾರೆ.

ಇನ್ನೂ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ರವೂಫ್ ಬಿ.ಎಂ. (Abdul Ravoof B.M.), ಸೈಯದ್ ಹುಸೇನ್ ಖಾದ್ರಿ (Syed Hussain Khadri), ಮೊಹಮ್ಮದ್ ಆಸಿಫ್ ಹುಸೇನ್ (Mohammed Asif Hussain), ಎಸ್.ಆರ್.ಎಸ್. ಚಂದ್ ಬಾಷಾ (S.R.S. Chand Basha), ಗೋವರ್ಧನ್ ಜಿ.ಸಿ. (Govardhan G.C.), ಪವನ್ ಸಾಲಿಯಾನ್ (Pavan Saliyan) ಹಾಗೂ ನವೀನ್ ಕುಮಾರ್ ಎಸ್ (Naveen Kumar S) ಅವರ ಮೇಲೂ ಕ್ರಮ ಜರುಗಿಸಲಾಗಿದೆ.

Author

ANU News

Follow Me
Other Articles
Previous

ಪಂಜಾಬ್ ಕಿಂಗ್ಸನ್ನು ಮಣಿಸಿ ಪ್ಲೇಆಫ್‌ಗೆ ಲಗ್ಗೆ ಹಾಕಿದ ಮೊದಲ ತಂಡ ಆರ್‌ಸಿಬಿ

Next

ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೀರಾವರಿ ಯೋಜನೆಗಳ ಕಾಮಗಾರಿ ವಿಳಂಬ ಸಹಿಸುವುದಿಲ್ಲ: ಚಲುವರಾಯಸ್ವಾಮಿ
    • Bengaluru gets its first ‘Circular Textile Lab’ to turn textile waste into useful products
    • ಬೆಂಗಳೂರಿನ ಮೊದಲ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಲೋಕಾರ್ಪಣೆ
    • Horror, humour and a mysterious bus: Shine Shetty’s ‘Shankarabharana’ teaser unveiled
    • ಶೈನ್ ಶೆಟ್ಟಿಗೆ ಬಸ್ ಡ್ರೈವರ್ ಅವತಾರ; ‘ಶಂಕರಾಭರಣ’ ಟೀಸರ್ ರಿಲೀಸ್
    Copyright 2026 — ANU News. All rights reserved. Blogsy WordPress Theme