Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; 110ಕ್ಕೂ ಹೆಚ್ಚು ಮಂದಿ ಸಾವು

By ANU News
August 11, 2026 1 Min Read
0

ಬೊಗೋಟಾ: ಕೊಲಂಬಿಯಾದ ಪಶ್ಚಿಮ ಭಾಗದಲ್ಲಿ ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 110ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಹಾನಿಗೊಳಗಾಗಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಭೂಕಂಪದ ತೀವ್ರತೆ ನೆರೆಯ ಈಕ್ವೆಡಾರ್ ಮತ್ತು ಪನಾಮ ದೇಶಗಳಲ್ಲೂ ಅನುಭವವಾಗಿದೆ. ಪೆರೇರಾ, ಕ್ವಿಬ್ಡೊ, ಕಾಲಿ ಹಾಗೂ ಮನಿಜಾಲೆಸ್ ಸೇರಿದಂತೆ ಪಶ್ಚಿಮ ಭಾಗದ ಹಲವು ನಗರಗಳಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದೆ.

ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡಿರುವವರು ಆತಂಕದಲ್ಲಿ ರಕ್ಷಣಾ ಕಾರ್ಯಾಚರಣೆಯ ಸ್ಥಳಗಳಲ್ಲಿ ಬೀಡುಬಿಟ್ಟಿದ್ದಾರೆ.

ರಿಸಾರಾಲ್ಡಾ ಪ್ರದೇಶದಲ್ಲಿ ಕನಿಷ್ಠ 40 ಮಂದಿ, ವ್ಯಾಲೆ ಡೆಲ್ ಕೌಕಾದಲ್ಲಿ 27 ಮಂದಿ, ಚೋಕೋದಲ್ಲಿ 9 ಮಂದಿ ಹಾಗೂ ಕಾಲ್ಡಾಸ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಆಂಟಿಯೋಕಿಯಾ ಪ್ರದೇಶದಲ್ಲಿ 73 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಭೂಕಂಪದ ಕೇಂದ್ರಬಿಂದು ಕೊಲಂಬಿಯಾದ ಪೆಸಿಫಿಕ್ ಕರಾವಳಿ ಪ್ರದೇಶದಲ್ಲಿದ್ದು, ಇದು ಪೆಸಿಫಿಕ್ ಸಾಗರವನ್ನು ಸುತ್ತುವರಿದಿರುವ ಭೂಕಂಪನ ದೋಷರೇಖೆಗಳ ವಲಯವಾದ ‘ರಿಂಗ್ ಆಫ್ ಫೈರ್’ ಪ್ರದೇಶದಲ್ಲಿದೆ.

ಭೂಕಂಪದಿಂದ ಉಂಟಾದ ಹಾನಿ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು ಒದಗಿಸಲು ಕೊಲಂಬಿಯಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ ಪರಿಹಾರ ಕಾರ್ಯಗಳಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದೆ.

Author

ANU News

Follow Me
Other Articles
Previous

ಜಾರ್ಖಂಡ್ ನೇಮಕಾತಿ ಅಕ್ರಮ ಆರೋಪ: ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ಖಂಡಿಸಿದ ರಾಹುಲ್ ಗಾಂಧಿ

Next

Colombia earthquake: 7.4-magnitude quake kills over 110, hundreds of buildings damaged

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Five women among six killed after tanker hits auto near Zaheerabad
    • ತೆಲಂಗಾಣದಲ್ಲಿ ಭೀಕರ ಅಪಘಾತ; ಆಟೋಗೆ ಟ್ಯಾಂಕರ್ ಡಿಕ್ಕಿ, 6 ಮಂದಿ ಸಾವು
    • Over 33,000 trained under SAMARTH centres as govt expands advanced manufacturing skills
    • ಇ-ಮೊಬಿಲಿಟಿಗೆ ಸರ್ಕಾರದ ಉತ್ತೇಜನ; 16.72 ಲಕ್ಷ EVಗಳಿಗೆ FAME-II ನೆರವು
    • FAME-II backs 16.72 lakh EV sales, 9,583 charging stations across India
    Copyright 2026 — ANU News. All rights reserved. Blogsy WordPress Theme