ಖ್ಯಾತ ಗಾಯಕಿ ಎಸ್. ಜಾನಕಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆ ಭಾರತೀಯ ಸಂಗೀತ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸಂದೇಶ ಹಂಚಿಕೊಂಡ ಪ್ರಧಾನಿ, ಎಸ್. ಜಾನಕಿ ಅವರ ಧ್ವನಿಯು ಹಲವು ಭಾರತೀಯ ಭಾಷೆಗಳ ಮೂಲಕ ತಲೆಮಾರುಗಳ ಮನಸ್ಸುಗಳನ್ನು ಗೆದ್ದಿದ್ದು, ಪ್ರತಿಯೊಂದು ಭಾವನೆಯನ್ನು ಅಪರೂಪದ ಮಧುರತೆ ಮತ್ತು ಬಹುಮುಖತೆಯಿಂದ ಜೀವಂತಗೊಳಿಸಿತ್ತು ಎಂದು ಸ್ಮರಿಸಿದ್ದಾರೆ.

“ವಿಶಿಷ್ಟ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರ ನಿಧನ ಸಂಗೀತ ಮತ್ತು ಸಂಸ್ಕೃತಿ ಲೋಕಕ್ಕೆ ಅಪಾರ ನಷ್ಟ. ವಿವಿಧ ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳು ತಲೆಮಾರುಗಳವರೆಗೆ ಜನಪ್ರಿಯವಾಗಿವೆ. ಅವರ ಸುಮಧುರ ಗಾಯನ ಮುಂದಿನ ಪೀಳಿಗೆಯವರನ್ನೂ ಸದಾ ಆಕರ್ಷಿಸುತ್ತಿರುತ್ತದೆ” ಎಂದು ಪ್ರಧಾನಿ ತಿಳಿಸಿದ್ದಾರೆ.
ಜಾನಕಿ ಅವರ ಕುಟುಂಬದ ಸದಸ್ಯರು, ಅಸಂಖ್ಯಾತ ಅಭಿಮಾನಿಗಳು ಹಾಗೂ ಸಂಗೀತ ಲೋಕದ ಎಲ್ಲರಿಗೂ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
The passing of the distinguished playback singer S. Janaki Amma is an irreparable loss to the world of music and culture. Her songs in various languages were popular across generations. They gave voice to every emotion with unparalleled grace as well as versatility. Her melodies…
— Narendra Modi (@narendramodi) July 12, 2026