Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಫೋಟೋ ತೆಗೆಯುವ ವೇಳೆ ಕಾವೇರಿ ಪಾಲಾದ ಒಂದೇ ಕುಟುಂಬದ ಐವರು

By ANU News
June 25, 2026 1 Min Read
0

ಮಂಡ್ಯ: ಫೋಟೋ ತೆಗೆಯುವ ವೇಳೆ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ಐವರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮುತ್ತತ್ತಿ ಸಮೀಪ ನಡೆದಿದೆ.

ಮಳವಳ್ಳಿ ತಾಲ್ಲೂಕಿನ ಮುತ್ತುರಾಯ ಸ್ವಾಮಿ ದೇವಾಲಯಕ್ಕೆ ಕುಟುಂಬ ಸದಸ್ಯರು ಭೇಟಿ ನೀಡಿದ್ದರು. ದೇವಾಲಯ ದರ್ಶನದ ಬಳಿಕ ಕಾವೇರಿ ನದಿ ತೀರದಲ್ಲಿ ನಿಂತು ಫೋಟೋ ತೆಗೆಯುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.

ಮೃತರನ್ನು ಚನ್ನಪಟ್ಟಣ ಮೂಲದ ವಿಜಯಮ್ಮ, ಚೈತ್ರ, ಶ್ವೇತಾ, ಪ್ರಿಯಾಂಕ ಹಾಗೂ ಮಹೇಶ್ ಎಂದು ಗುರುತಿಸಲಾಗಿದೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಸ್ಥಳೀಯ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಐವರ ಮೃತದೇಹಗಳನ್ನು ನದಿಯಿಂದ ಹೊರತೆಗೆದಿದ್ದಾರೆ.

ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮುತ್ತತ್ತಿ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

Author

ANU News

Follow Me
Other Articles
Previous

ಸೆಪ್ಟೆಂಬರ್ 18-19ರಂದು ರಾಜ್ಯ ಮಟ್ಟದ ಕಾಫಿ ಬೆಳೆಗಾರರ ಬೃಹತ್ ಸಮಾವೇಶ

Next

ಶತಮಾನ ಕಂಡರಿಯದ ಭೂಕಂಪ; ಸ್ಮಶಾನದಂತಾದ ವೆನೆಜುವೆಲಾ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Cars will fly’: Almora innovator Ravi Tamta tests flying car prototype
    • ಇನ್ನು ಕಾರುಗಳು ರಸ್ತೆಗಳಲ್ಲಿ ಮಾತ್ರವಲ್ಲ, ಆಕಾಶದಲ್ಲೂ ಹಾರಾಡಲಿವೆ !
    • ಗಾಯತ್ರಿ ಶಾಂತೇಗೌಡ ಹೆಸರು ಮುಂಚಿತವಾಗಿ ಪಟ್ಟಿಗೆ ಸೇರಿಸಿದ್ದು ತಪ್ಪು: ಯತೀಂದ್ರ
    • ‘ನಶಾ ಮುಕ್ತ ಭಾರತ’ ಸಂದೇಶದೊಂದಿಗೆ ಗಮನಸೆಳೆದ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’
    • Say yes to fitness, no to drugs: Mandaviya leads nationwide cycling drive
    Copyright 2026 — ANU News. All rights reserved. Blogsy WordPress Theme