Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಬಿಜೆಪಿಯವರ ಎದೆ ಸೀಳಿದರೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ ಹಾಗೂ ಆತ್ಮಸಾಕ್ಷಿ ಕಾಣುವುದಿಲ್ಲ’ ; ಪ್ರಿಯಾಂಕ್ ಖರ್ಗೆ ಟೀಕೆ

By ANU News
July 27, 2026 1 Min Read
0

ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ನೈತಿಕತೆ, ಸತ್ಯ ಮತ್ತು ಬದ್ಧತೆಯ ವಿಚಾರದಲ್ಲಿ ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ ಎಂದಿದ್ದಾರೆ.

“ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುವ ಸಿ.ಟಿ. ರವಿ ಅವರಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ” ಎಂದು ಆರೋಪಿಸಿದ್ದಾರೆ.

“ಸಿ.ಟಿ. ರವಿ ಸೇರಿದಂತೆ ಬಿಜೆಪಿಯವರ ಎದೆ ಸೀಳಿದರೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ ಹಾಗೂ ಆತ್ಮಸಾಕ್ಷಿ ಕಾಣುವುದಿಲ್ಲ. ಕಳೆದ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿ ಅಸಹನೀಯವಾಗಿ ವರ್ತಿಸುತ್ತಿದೆ” ಎಂದು ಅವರು ಟೀಕಿಸಿದ್ದಾರೆ.

ನೀಟ್ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಧರ್ಮವನ್ನು ಎಳೆದು ತಂದು, ಸಂಬಂಧವೇ ಇಲ್ಲದ ವಿಡಿಯೊ ಪ್ರದರ್ಶಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಯಾವುದೇ ವಿಷಯಕ್ಕೂ ಪಾಕಿಸ್ತಾನ ಹಾಗೂ ಹಿಂದೂ-ಮುಸ್ಲಿಂ ವಿಚಾರವನ್ನು ಜೋಡಿಸುವುದು ಬಿಜೆಪಿಯ ರಾಜಕೀಯ ಶೈಲಿಯಾಗಿದೆ ಎಂದು ಕಿಡಿಕಾರಿದ್ದಾರೆ.

ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ.

ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ… pic.twitter.com/PSxawowYuX

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 27, 2026

ಸಿ.ಟಿ. ರವಿ ಅವರಿಗೆ ನೇರ ಸವಾಲು ಹಾಕಿರುವ ಪ್ರಿಯಾಂಕ್ ಖರ್ಗೆ, “ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ. ಆದರೆ ಸುಳ್ಳು ಹೇಳಲು ನೈತಿಕ ಮತ್ತು ಸಾಮಾಜಿಕ ಭಯ ಇರಬೇಕು. ಸದನದಲ್ಲಿ ಆಡಿದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಮಾದರಿ ನೀಡದಿರುವುದು ನಿಮ್ಮ ಅನೈತಿಕತೆ ಮತ್ತು ಪಲಾಯನವಾದವನ್ನು ತೋರಿಸುತ್ತದೆ. ಕಾನೂನಿಗೆ ಸವಾಲು ಹಾಕುವ ನಿಮ್ಮ ನಡೆ ನಡೆಯುವುದಿಲ್ಲ. ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ” ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

Author

ANU News

Follow Me
Other Articles
Previous

Police investigate petrol bomb attack on BJP office in Punjab

Next

Gujarat nod for ₹2,999 crore projects to boost manufacturing and employment

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Probe into Tripura DGP Anurag’s death gathers pace as SIT grows to 10 members
    • ತ್ರಿಪುರಾ ಡಿಜಿಪಿ ಅನುರಾಗ್ ನಿಗೂಢ ಸಾವು: ವಿಶೇಷ ತಂಡದಲ್ಲಿ ಸದಸ್ಯರ ಸಂಖ್ಯೆ 10ಕ್ಕೆ ಏರಿಕೆ
    • PM Modi celebrates Raja Muthupandi’s silver medal in men’s 65kg weightlifting
    • ಕಾಮನ್‌ವೆಲ್ತ್: ವೇಟ್‌ಲಿಫ್ಟಿಂಗ್‌ನಲ್ಲಿ ರಾಜಾ ಮುತ್ತುಪಾಂಡಿಗೆ ಬೆಳ್ಳಿ ಪದಕ
    • Bengal govt directs statewide participation in Har Ghar Tiranga drive
    Copyright 2026 — ANU News. All rights reserved. Blogsy WordPress Theme