Skip to content
ANU News
ANU News
  • Home
  • Home
ANU News
ANU News
  • Home
  • Home
ವಿದೇಶ

ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ಉಲ್ಬಣ; ವೈಮಾನಿಕ ದಾಳಿ ಜೊತೆ ಇರಾನ್ ಗೆ ಟ್ರಂಪ್ ಕಠಿಣ ಎಚ್ಚರಿಕೆ

By ANU News
July 22, 2026 1 Min Read
0

ವಾಷಿಂಗ್ಟನ್:: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಅಮೆರಿಕ ಸೇನೆ ಸತತ 11ನೇ ರಾತ್ರಿ ಇರಾನ್‌ನ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ವಿಮಾನ ಹ್ಯಾಂಗರ್‌ಗಳು, ಡ್ರೋನ್ ಸಂಗ್ರಹಣಾ ಕೇಂದ್ರಗಳು, ಕ್ಷಿಪಣಿ ಉಡಾವಣಾ ತಾಣಗಳು, ಸೇನಾ ಕಮಾಂಡ್ ಕೇಂದ್ರಗಳು ಹಾಗೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಲಾಗಿದೆ ಎಂದು CENTCOM ಹೇಳಿದೆ.

ಈ ಬೆಳವಣಿಗೆಯ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅರ್ಥಪೂರ್ಣ ಮಾತುಕತೆಗೆ ಸಿದ್ಧವಾಗುವವರೆಗೆ ಯಾವುದೇ ಸಂವಾದಕ್ಕೆ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಶ್ವೇತಭವನದಲ್ಲಿ ಮಾತನಾಡಿದ ಅವರು, ಇರಾನ್ ಪರೋಕ್ಷ ಮಾರ್ಗಗಳ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರೆ, ಸೇನಾ ಕಾರ್ಯಾಚರಣೆ ಇನ್ನೂ ಅಂತ್ಯಗೊಂಡಿಲ್ಲ ಎಂದೂ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಇರಾನ್‌ನ ನತಾಂಜ್ ಅಣು ಕೇಂದ್ರದ ಸಮೀಪದ ಭೂಗತ ‘ಪಿಕ್‌ಆಕ್ಸ್ ಮೌಂಟನ್’ ತಾಣವನ್ನೂ ಅಮೆರಿಕ ಗುರಿಯಾಗಿಸಬಹುದೆಂಬ ಸೂಚನೆಯನ್ನು ಟ್ರಂಪ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಸೇನೆಯ ಖಾತಮ್ ಅಲ್-ಅಂಬಿಯಾ ಕಮಾಂಡ್, ಅಣು ತಾಣಗಳು ಅಥವಾ ಇತರೆ ಸೂಕ್ಷ್ಮ ಕೇಂದ್ರಗಳ ಮೇಲೆ ದಾಳಿ ನಡೆದರೆ ಅದನ್ನು ಯುದ್ಧದ ವಿಸ್ತರಣೆಯಾಗಿ ಪರಿಗಣಿಸಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳ ಹಿತಾಸಕ್ತಿಗಳ ಮೇಲೆ ಪ್ರತಿದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ತೈಲ ಟ್ಯಾಂಕರ್‌ಗಳ ಮೇಲಿನ ದಾಳಿ ಹಾಗೂ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಉಂಟಾಗಿರುವ ಅಡಚಣೆ ಜಾಗತಿಕ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರುವ ಆತಂಕ ಮೂಡಿಸಿದೆ. ಅಮೆರಿಕ ಭದ್ರತಾ ಕಾರಣಗಳಿಂದ ಕೆಲವು ವಾಣಿಜ್ಯ ಹಡಗುಗಳಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಿದೆ.

ಇದರ ನಡುವೆ, ಇರಾನ್ ಬೆಂಬಲಿತ ಯೆಮನ್‌ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಬಂದರುಗಳಿಗೆ ನೌಕಾ ದಿಗ್ಬಂಧನದ ಎಚ್ಚರಿಕೆ ನೀಡಿದ್ದು, ಟ್ರಂಪ್ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಈ ಬೆಳವಣಿಗೆಗಳನ್ನು ಸೌದಿ ಅರೇಬಿಯಾ ಖಂಡಿಸಿದೆ.

ಪ್ರಾದೇಶಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಹ್ರೇನ್, ಜೋರ್ಡನ್ ಮತ್ತು ಕುವೈತ್ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಇರಾನ್ ಉಡಾಯಿಸಿದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ತಡೆದಿರುವುದಾಗಿ ಪ್ರಕಟಿಸಿವೆ. ಸಂಘರ್ಷದ ಪರಿಣಾಮ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಒತ್ತಡ ಹೆಚ್ಚುತ್ತಿದೆ.

Author

ANU News

Follow Me
Other Articles
Previous

ಐದು ವರ್ಷಗಳಲ್ಲಿ ಒಳಚರಂಡಿ ಶುಚಿಗೊಳಿಸುವ ವೇಳೆ 332 ಕಾರ್ಮಿಕರ ಸಾವು; 193 ಎಫ್‌ಐಆರ್ ದಾಖಲು

Next

Trump warns Iran as US continues strikes; Hormuz tensions raise global oil concerns

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Trump warns Iran as US continues strikes; Hormuz tensions raise global oil concerns
    • ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ಉಲ್ಬಣ; ವೈಮಾನಿಕ ದಾಳಿ ಜೊತೆ ಇರಾನ್ ಗೆ ಟ್ರಂಪ್ ಕಠಿಣ ಎಚ್ಚರಿಕೆ
    • ಐದು ವರ್ಷಗಳಲ್ಲಿ ಒಳಚರಂಡಿ ಶುಚಿಗೊಳಿಸುವ ವೇಳೆ 332 ಕಾರ್ಮಿಕರ ಸಾವು; 193 ಎಫ್‌ಐಆರ್ ದಾಖಲು
    • Centre reports 332 sewer, septic tank cleaning deaths; 193 FIRs filed in five years
    • ಐಸಿಎಂಆರ್‌ನಿಂದ HPV ಚಿಕಿತ್ಸೆ, ಹೊಸ ತಲೆಮಾರಿನ ಲಸಿಕೆ ತಂತ್ರಜ್ಞಾನ ಭಾರತೀಯ ಕಂಪನಿಗಳಿಗೆ ಹಸ್ತಾಂತರ
    Copyright 2026 — ANU News. All rights reserved. Blogsy WordPress Theme