Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹೈಜಾಕ್ ಬೆದರಿಕೆ ಪತ್ರ: ಲಕ್ನೋಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ತುರ್ತು ವಾಪಸ್

By ANU News
November 8, 2026 1 Min Read
Comments Off on ಹೈಜಾಕ್ ಬೆದರಿಕೆ ಪತ್ರ: ಲಕ್ನೋಗೆ ಹೊರಟಿದ್ದ ವಿಮಾನ ಬೆಂಗಳೂರಿಗೆ ತುರ್ತು ವಾಪಸ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಪತ್ರವೊಂದು ಪತ್ತೆಯಾಗಿ ಆತಂಕ ಸೃಷ್ಟಿಯಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹರಿದಾಡುತ್ತಿದ್ದು, ಪತ್ರ ಸಿಕ್ಕ ಬೆನ್ನಲ್ಲೇ ವಿಮಾನವನ್ನು ತುರ್ತಾಗಿ ಏರ್​​ಪೋರ್ಟ್​​ ಲ್ಯಾಂಡ್​ ಮಾಡಲಾಗಿದೆ ಎನ್ನಲಾಗಿದೆ. ಪ್ರಯಾಣಿಕರು ಬಾತ್ ರೂಮ್​​ಗೆ ಹೋದಾಗ ಪತ್ರ ಪತ್ತೆ ಆಗಿದೆ ಎನ್ನಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ ಶನಿವಾರ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಬೆಂಗಳೂರಿಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಮಾಧ್ಯಮದ X ನಲ್ಲಿ ಸಾರ್ವಜನಿಕರು ಪೋಸ್ಟ್ ಹಾಕಿದ್ದಾರೆ.

ಟರ್ಮಿನಲ್-1ರಿಂದ ಟೇಕ್‌ಆಫ್ ಆದ ವಿಮಾನದ ಶೌಚಾಲಯದಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಕೈಬರಹದ ಪತ್ರವೊಂದು ಪತ್ತೆಯಾಗಿದೆ. ‘ಸಂಜೆ 6.30ಕ್ಕೆ ಈ ವಿಮಾನ ಹೈಜಾಕ್ ಆಗಲಿದೆ. ನಿರ್ಲಕ್ಷಿಸಿ, ಪರಿಣಾಮ ಎದುರಿಸಿ’ ಎಂಬ ಸಂದೇಶ ಅದರಲ್ಲಿ ಇತ್ತು ಎನ್ನಲಾಗಿದೆ.

ತಕ್ಷಣ ಪೈಲಟ್‌ಗೆ ಮಾಹಿತಿ ನೀಡಿದ ಸಿಬ್ಬಂದಿ, ವಾಯು ಸಂಚಾರ ನಿಯಂತ್ರಣ ವಿಭಾಗಕ್ಕೆ (ಎಟಿಸಿ) ವಿಷಯ ತಿಳಿಸಿದರು. ಬಳಿಕ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ, ವಿಮಾನಕ್ಕೆ ಆದ್ಯತೆಯ ಲ್ಯಾಂಡಿಂಗ್ ವ್ಯವಸ್ಥೆ ಮಾಡಲಾಯಿತು.

ವಿಮಾನ ಸುರಕ್ಷಿತವಾಗಿ ಬೆಂಗಳೂರಿನಲ್ಲಿ ಇಳಿದ ಬಳಿಕ ಅದನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಸಿಐಎಸ್‌ಎಫ್, ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ವಿಮಾನ ಮತ್ತು ಪ್ರಯಾಣಿಕರ ಸಾಮಾನುಗಳನ್ನು ಪರಿಶೀಲಿಸುತ್ತಿವೆ.

ಬೆದರಿಕೆ ಪತ್ರ ಬರೆದವರು ಯಾರು ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Author

ANU News

Follow Me
Other Articles
Previous

Panchamasali Community to Stage Hunger Strike in Belagavi on December 10

Next

Security Alert on Bengaluru–Lucknow Flight After Handwritten Hijack Threat

Recent Posts

  • LK Advani Enters 100th Year; PM Modi Hails Veteran BJP Leader’s Political Legacy
  • ಎಲ್.ಕೆ. ಅಡ್ವಾಣಿ 100ನೇ ವರ್ಷಕ್ಕೆ ಪಾದಾರ್ಪಣೆ; ರಾಜಕೀಯ ಗುರುವಿನ ರಾಜಕೀಯ ಕೊಡುಗೆ, ರಾಷ್ಟ್ರಸೇವೆ ಮತ್ತು ಸೈದ್ಧಾಂತಿಕ ಬದ್ಧತೆ ಸ್ಮರಿಸಿದ ಪ್ರಧಾನಿ
  • ‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ
  • ‘Rashi’ Trailer Out; Aditya Shashikumar, Samikshaa Headline Kannada Film
  • Nithiin Reveals Young Krishna Look in ‘Alias Rukmini’
Copyright 2026 — ANU News. All rights reserved. Blogsy WordPress Theme