Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

₹1,000 ಕೋಟಿ ಕ್ಲಬ್ ಹೊಸ್ತಿಲಲ್ಲಿ ‘ರಾಮಾಯಣ’; ಹಿಂದಿ ಭಾಷೆಯಲ್ಲೇ ಹೆಚ್ಚು ಕಲೆಕ್ಷನ್

By ANU News
November 12, 2026 1 Min Read
Comments Off on ₹1,000 ಕೋಟಿ ಕ್ಲಬ್ ಹೊಸ್ತಿಲಲ್ಲಿ ‘ರಾಮಾಯಣ’; ಹಿಂದಿ ಭಾಷೆಯಲ್ಲೇ ಹೆಚ್ಚು ಕಲೆಕ್ಷನ್

ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆಯುತ್ತಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವಾದ್ಯಂತ ₹934.55 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ. ದೀಪಾವಳಿ ಹಬ್ಬ ಮುಗಿದರೂ ಚಿತ್ರಮಂದಿರಗಳಲ್ಲಿ ಚಿತ್ರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.

ಭಾರತದಲ್ಲಿ ಮೊದಲ ವಾರದಲ್ಲೇ ಸಿನಿಮಾ ₹511.10 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು ₹611.05 ಕೋಟಿ ಗ್ರಾಸ್ ಗಳಿಸಿದೆ. ನವೆಂಬರ್ 11ರಂದು ಒಂದೇ ದಿನ ₹70.65 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ತನ್ನ ನಾಗಾಲೋಟ ಮುಂದುವರಿಸಿದೆ. ಏಳನೇ ದಿನ ದೇಶಾದ್ಯಂತ 24,239 ಪ್ರದರ್ಶನಗಳು ನಡೆದಿವೆ.

ಭಾಷಾವಾರು ಗಳಿಕೆಯಲ್ಲೂ ‘ರಾಮಾಯಣ’ ಅಬ್ಬರ ಮುಂದುವರಿದಿದೆ. ಹಿಂದಿ ಭಾಷೆಯಲ್ಲೇ ಒಂದೇ ದಿನ ₹58 ಕೋಟಿ ಗಳಿಸಿದ್ದರೆ, ಕನ್ನಡದಿಂದ ₹4.50 ಕೋಟಿ, ತೆಲುಗು ಮತ್ತು ಮಲಯಾಳಂ ಭಾಷೆಗಳಿಂದ ತಲಾ ₹2.75 ಕೋಟಿ ಹಾಗೂ ತಮಿಳಿನಿಂದ ₹2.65 ಕೋಟಿ ಆದಾಯ ಬಂದಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಏಳನೇ ದಿನ ವಿದೇಶದಲ್ಲಿ ₹25 ಕೋಟಿ ಗಳಿಸಿದ್ದು, ಮೊದಲ ವಾರದ ಅಂತ್ಯಕ್ಕೆ ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ₹323.50 ಕೋಟಿಗೆ ತಲುಪಿದೆ.

ಇದುವರೆಗೆ 1.97 ಕೋಟಿಗೂ ಅಧಿಕ ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ ವಿಶ್ವಾದ್ಯಂತ ₹934.55 ಕೋಟಿ ಗಳಿಸಿರುವ ಸಿನಿಮಾ, ₹1,000 ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿದೆ. ಈ ಮೈಲಿಗಲ್ಲು ತಲುಪಲು ಇನ್ನೂ ₹65.45 ಕೋಟಿ ಬಾಕಿಯಿದ್ದು, ಎಂಟನೇ ದಿನವೇ ಸಾವಿರ ಕೋಟಿ ಗಡಿ ದಾಟುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ

Author

ANU News

Follow Me
Other Articles
Previous

ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ

Next

‘Ramayana’ Nears ₹1,000 Crore Mark; Hindi Version Drives Box Office Surge

Recent Posts

  • Bengaluru Metro Naming Row Ends as Centre Approves Three Proposed Changes
  • ನಮ್ಮ ಮೆಟ್ರೋ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಅಸ್ತು!
  • ‘Ramayana’ Nears ₹1,000 Crore Mark; Hindi Version Drives Box Office Surge
  • ₹1,000 ಕೋಟಿ ಕ್ಲಬ್ ಹೊಸ್ತಿಲಲ್ಲಿ ‘ರಾಮಾಯಣ’; ಹಿಂದಿ ಭಾಷೆಯಲ್ಲೇ ಹೆಚ್ಚು ಕಲೆಕ್ಷನ್
  • ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ
Copyright 2026 — ANU News. All rights reserved. Blogsy WordPress Theme