Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ

By ANU News
November 12, 2026 1 Min Read
Comments Off on ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ

ಹಾಸನ: ವಿಶ್ವವಿಖ್ಯಾತ ಹಾಸನಾಂಬೆ ದರ್ಶನೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ 12 ದಿನಗಳ ಉತ್ಸವದಲ್ಲಿ ಬರೋಬ್ಬರಿ 30.07 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಾಸನಾಂಬೆ ಉತ್ಸವವನ್ನು ನಾಡಹಬ್ಬವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದು, ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವವನ್ನು ಆಯೋಜಿಸಲು ಸಿದ್ಧತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಉತ್ಸವದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದಾರೆ.

ಈ ಬಾರಿ ದೇವಾಲಯಕ್ಕೆ ಒಟ್ಟು ₹25.60 ಕೋಟಿ ಆದಾಯ ಸಂಗ್ರಹವಾಗಿದೆ. ₹300 ಟಿಕೆಟ್ ಮಾರಾಟದಿಂದ ₹6.04 ಕೋಟಿ, ₹1 ಟಿಕೆಟ್ ಮೂಲಕ ₹13.18 ಕೋಟಿ ಹಾಗೂ ಆನ್‌ಲೈನ್ ಟಿಕೆಟ್ ಮಾರಾಟದಿಂದ ₹5.80 ಕೋಟಿ ಆದಾಯ ಬಂದಿದೆ. ಲಡ್ಡು ಪ್ರಸಾದ ಮಾರಾಟದಿಂದ ₹1.29 ಕೋಟಿ ಸಂಗ್ರಹವಾಗಿದೆ. ಹುಂಡಿ ಎಣಿಕೆಗೂ ಮುನ್ನವೇ ಈ ಆದಾಯ ದಾಖಲಾಗಿದೆ.

ಉತ್ಸವದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ. ದರ್ಶನೋತ್ಸವದ ವೇಳೆ ಸಣ್ಣಪುಟ್ಟ ಲೋಪದೋಷಗಳು ಸಂಭವಿಸಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದ ಅವರು, ಪವಿತ್ರ ಧಾರ್ಮಿಕ ಉತ್ಸವದಲ್ಲಿ ರಾಜಕೀಯ ಬೆರೆಸದಂತೆ ರಾಜಕೀಯ ನಾಯಕರಿಗೆ ಮನವಿ ಮಾಡಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಉತ್ತಮ ಮಳೆ ಹಾಗೂ ರೈತರ ಸಂಕಷ್ಟಗಳು ದೂರವಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.

Author

ANU News

Follow Me
Other Articles
Previous

ಬೆಂಗಳೂರಿನಲ್ಲಿ ನ.16ರಿಂದ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್

Recent Posts

  • ಹಾಸನಾಂಬೆ ಉತ್ಸವ; ಮುಂದಿನ ವರ್ಷದಿಂದ ಮೈಸೂರು ದಸರಾ ಮಾದರಿಯಲ್ಲಿ ಉತ್ಸವ ಆಯೋಜನೆಗೆ ನಿರ್ಧಾರ
  • ಬೆಂಗಳೂರಿನಲ್ಲಿ ನ.16ರಿಂದ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್
  • World Kannada Literature Conference to Be Held in 2027, Announces CM Shivakumar
  • K’taka Congress Begins Bypoll Preparations in Hiriyur; CM Holds Strategy Talks with Minister
  • Bengaluru to Host 27th All India Police Lawn Tennis Championship from November 16
Copyright 2026 — ANU News. All rights reserved. Blogsy WordPress Theme