Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಏಷ್ಯನ್ ಗೇಮ್ಸ್: MMAಯಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಸುಚಿಕಾ ತರಿಯಾಲ್‌ಗೆ ಕಂಚು

By ANU News
September 22, 2026 1 Min Read
0

ಐಚಿ-ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಎರಡನೇ ದಿನವಾದ ಸೋಮವಾರ ಭಾರತ ಪದಕ ಬೇಟೆ ಮುಂದುವರಿಸಿದ್ದು, ಮಿಶ್ರ ಸಮರ ಕಲೆ (MMA) ವಿಭಾಗದಲ್ಲಿ ಇತಿಹಾಸ ನಿರ್ಮಿಸಿದೆ. ಭಾರತದ ಸುಚಿಕಾ ತರಿಯಾಲ್‌ ಅವರು ಏಷ್ಯನ್ ಗೇಮ್ಸ್‌ನಲ್ಲಿ MMA ವಿಭಾಗದಲ್ಲಿ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ.

ಸಿಂಗಾಪುರದ ಹುಯಿ ಹೂನ್ ಟಿಯೊ ವಿರುದ್ಧದ ಸ್ಪರ್ಧೆಯಲ್ಲಿ ಸುಚಿಕಾ 0–2 ಅಂತರದಿಂದ ಸೋಲನುಭವಿಸಿದರೂ, ಕಂಚಿನ ಪದಕಕ್ಕೆ ಪಾತ್ರರಾದರು. ವೈದ್ಯಕೀಯ ಕಾರಣದಿಂದ ಸಹ ಸ್ಪರ್ಧಿ ವರುಣ್ ಸನ್ಯಾಲ್ ಅವರ MMA ಅಭಿಯಾನ ಆರಂಭಕ್ಕೂ ಮುನ್ನವೇ ಅಂತ್ಯಗೊಂಡಿತ್ತು.

ಹರಿಯಾಣದ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದ ಸುಚಿಕಾ ತರಿಯಾಲ್ ಅವರು 2024ರ ಜಿಯು-ಜಿಟ್ಸು ವಿಶ್ವ ಚಾಂಪಿಯನ್ ಆಗಿದ್ದಾರೆ. ಈ ಹಿಂದೆ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜೂಡೋ ಹಾಗೂ 2022ರ ಏಷ್ಯನ್ ಗೇಮ್ಸ್‌ನಲ್ಲಿ ಕುರಾಶ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

MMA ವಿಭಾಗಕ್ಕೆ ಈ ಬಾರಿ ಪದಾರ್ಪಣೆ ಮಾಡಿರುವ ಅವರು, ಏಷ್ಯನ್ ಗೇಮ್ಸ್‌ನಂತಹ ಪ್ರಮುಖ ವೇದಿಕೆಯಲ್ಲಿ ಪದಕ ಗೆದ್ದು ಭಾರತದ MMA ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

ಶೋಭಾ ಕರಂದ್ಲಾಜೆ ಅಭಿನಂದನೆ

ಸುಚಿಕಾ ತರಿಯಾಲ್ ಅವರ ಸಾಧನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ. ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ಏಷ್ಯನ್ ಗೇಮ್ಸ್‌ನ MMA ವಿಭಾಗದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿರುವುದು ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.

ವಿಶ್ವ ವೇದಿಕೆಯಲ್ಲಿ ಸುಚಿಕಾ ಅವರ ಸಾಧನೆ ಮತ್ತಷ್ಟು ಎತ್ತರಕ್ಕೇರಲಿ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳು ಅವರ ಪಾಲಾಗಲಿ ಎಂದು ಶೋಭಾ ಕರಂದ್ಲಾಜೆ ಶುಭ ಹಾರೈಸಿದ್ದಾರೆ.

Author

ANU News

Follow Me
Other Articles
Previous

ಏಷ್ಯನ್ ಗೇಮ್ಸ್: ಹಿಮಾಂಶು, ರುದ್ರಾಂಕ್ಷ್‌ಗೆ ವೈಯಕ್ತಿಕ ಪದಕ; ತಂಡ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ

Next

‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ‘ಕಾಮನ್ ಮ್ಯಾನ್’; ಟ್ರೇಲರ್ ಬಿಡುಗಡೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Dr Padmini Prasad named ‘Emeritus’ by CSEPI for decades of work in sexual health
    • ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ
    • Asian Games: Suchika Tariyal wins India’s first-ever MMA medal
    • ‘ಕೆರೆಬೇಟೆ’ ಖ್ಯಾತಿಯ ಗೌರಿಶಂಕರ್ ‘ಕಾಮನ್ ಮ್ಯಾನ್’; ಟ್ರೇಲರ್ ಬಿಡುಗಡೆ
    • ಏಷ್ಯನ್ ಗೇಮ್ಸ್: MMAಯಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಸುಚಿಕಾ ತರಿಯಾಲ್‌ಗೆ ಕಂಚು
    Copyright 2026 — ANU News. All rights reserved. Blogsy WordPress Theme