Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕವೈವಿಧ್ಯ

ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

By ANU News
September 22, 2026 2 Min Read
0

ಬೆಂಗಳೂರು: ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸಾ ಪರಿಹಾರ , ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕ ಶಿಕ್ಷಣ ಮತ್ತು ಜಾಗೃತಿ ಕ್ಷೇತ್ರದಲ್ಲಿ ದಶಕಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ ಕೌನ್ಸಿಲ್ ಆಫ್ ಸೆಕ್ಸ್ ಎಜುಕೇಷನ್ ಆ್ಯಂಡ್ ಪೇರೆಂಟ್‌ಹುಡ್ ಇಂಟರ್‌ನ್ಯಾಷನಲ್ (CSEPI), ಹಿರಿಯ ಲೈಂಗಿಕ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಅವರಿಗೆ ‘ಎಮೆರಿಟಸ್’ ಗೌರವ ನೀಡಿದೆ.

ಎಂಬಿಬಿಎಸ್‌, ಎಂಡಿ (ಪ್ರಸೂತಿ ಮತ್ತು ಸ್ತ್ರೀರೋಗ), F-CSEPI ಮತ್ತು DABS ಪದವಿಗಳನ್ನು ಹೊಂದಿರುವ ಡಾ. ಪದ್ಮಿನಿ ಪ್ರಸಾದ್, ಸೆಕ್ಸಾಲಜಿ ಕ್ಷೇತ್ರದಲ್ಲಿ ಕರ್ನಾಟಕದ ಮೊದಲ ಮಹಿಳಾ ಲೈಂಗಿಕ ತಜ್ಞೆ ಎಂದು ಗುರುತಿಸಲ್ಪಟ್ಟಿದ್ದಾರೆ. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿರುವ ಅವರು, ಲೈಂಗಿಕ ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು CSEPI ಸೇವೆ

CSEPIಯೊಂದಿಗೆ ಮೂರು ದಶಕಗಳಿಗೂ ಹೆಚ್ಚು ಕಾಲದ ನಂಟು ಹೊಂದಿರುವ ಡಾ. ಪದ್ಮಿನಿ ಪ್ರಸಾದ್, ಸಂಸ್ಥೆಯಲ್ಲಿ ಸದಸ್ಯೆ, ಫೆಲೋ, ಖಜಾಂಚಿ, ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷೆ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಉಪನ್ಯಾಸ, ಕಾರ್ಯಾಗಾರ, ಪ್ಯಾನಲ್ ಚರ್ಚೆ ಹಾಗೂ ತರಬೇತಿ ಕಾರ್ಯಕ್ರಮಗಳ ಮೂಲಕ ಲೈಂಗಿಕ ವೈದ್ಯಕೀಯ ಮತ್ತು ಲೈಂಗಿಕ ಶಿಕ್ಷಣದ ಕುರಿತು ಜಾಗೃತಿ ಮೂಡಿಸಿದ್ದಾರೆ.

ವಿಶೇಷವಾಗಿ ಮಹಿಳೆಯರ ಲೈಂಗಿಕ ಆರೋಗ್ಯ ಕ್ಷೇತ್ರದಲ್ಲಿ ಅವರ ಸೇವೆಗೆ ಮನ್ನಣೆ ದೊರೆತಿದೆ. ಶಿಕ್ಷಣ, ಸಮಾಲೋಚನೆ ಮತ್ತು ಸೆಕ್ಸ್ ಥೆರಪಿ ಮೂಲಕ ವೈಜ್ಞಾನಿಕ ಹಾಗೂ ಮುಕ್ತ ಸಂವಾದಕ್ಕೆ ಡಾ.ಪದ್ಮಿನಿ ಪ್ರಸಾದ್ ಅವರು ಒತ್ತು ನೀಡಿದ್ದಾರೆ.

ರಾಷ್ಟ್ರೀಯ–ಅಂತಾರಾಷ್ಟ್ರೀಯ ಸಂಘಟನೆಗಳಲ್ಲಿ ಸೇವೆ

ಡಾ. ಪದ್ಮಿನಿ ಪ್ರಸಾದ್ ಅವರು SASSMನ ಖಜಾಂಚಿಯಾಗಿ, International Society for Sexual Medicine (ISSM)ನ ಸಮಿತಿ ಸದಸ್ಯೆ ಹಾಗೂ JSM ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. World Association for Sexual Health (WAS)ನಲ್ಲಿಯೂ ಸದಸ್ಯೆಯಾಗಿದ್ದಾರೆ. ಅವರು ಬೆಂಗಳೂರು OBG ಸೊಸೈಟಿ, Family Planning Association of India ಅಧ್ಯಕ್ಷರಾಗಿಯೂ ಹಾಗೂ KSOGAಯ Sexual Health Committee ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

11 ಪುಸ್ತಕಗಳ ಲೇಖಕಿ

ಸಾರ್ವಜನಿಕ ಉಪನ್ಯಾಸ, ಮಾಧ್ಯಮ, ದೂರದರ್ಶನ ಹಾಗೂ ರೇಡಿಯೊ ಕಾರ್ಯಕ್ರಮಗಳ ಮೂಲಕ ಲೈಂಗಿಕ ಆರೋಗ್ಯದ ಕುರಿತು ವೈಜ್ಞಾನಿಕ ಅರಿವು ಮೂಡಿಸುವ ಕಾರ್ಯದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ 11 ಪುಸ್ತಕಗಳನ್ನು ರಚಿಸಿದ್ದಾರೆ.

CSEPIಯ ‘Golden Lamp Award’ ಹಾಗೂ ‘Excellence in Healthcare in Sexology Award’ ಸೇರಿದಂತೆ ಹಲವು ಗೌರವಗಳಿಗೆ ಡಾ.ಪದ್ಮಿನಿ ಪ್ರಸಾದ್ ಭಾಜನರಾಗಿದ್ದಾರೆ.

‘Reaching the Unreached, Speaking the Unspoken’ ಎಂಬ ಧ್ಯೇಯದೊಂದಿಗೆ ಭರವಸೆ ಚಾರಿಟೇಬಲ್ ಫೌಂಡೇಶನ್ (Bharavase Charitable Foundation) ಸ್ಥಾಪಿಸಿರುವ ಡಾ. ಪದ್ಮಿನಿ ಪ್ರಸಾದ್, ಲೈಂಗಿಕ ಆರೋಗ್ಯದ ಕುರಿತ ಮುಕ್ತ ಮತ್ತು ವೈಜ್ಞಾನಿಕ ಸಂವಾದವನ್ನು ಉತ್ತೇಜಿಸುವ ಕೆಲಸ ಮುಂದುವರಿಸಿದ್ದಾರೆ.

ಈ ನಡುವೆ, ಕೇಂದ್ರ ಸರ್ಕಾರವು ಗರ್ಭಕಂಠ ಕ್ಯಾನ್ಸರ್ ತಡೆ ಸಂಬಂಧ HPV ಲಸಿಕಾ ಕಾರ್ಯಕ್ರಮ ಆರಂಭಿಸುವ ಮುನ್ನವೇ ಇವರು ಕರ್ನಾಟಕದಲ್ಲಿ ಲಕ್ಷಾಂತರ ಮಹಿಳೆಯರಿಗೆ ಈ HPV ಲಸಿಕೆಯನ್ನು ಉಚಿತವಾಗಿ ಕೊಡಿಸಿದ್ದಾರೆ. ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ವಿಶೇಷ ಶಿಭಿರವನ್ನು ಆಯೋಜಿಸುತ್ತಾ ಸ್ತ್ರೀರೋಗ ಸಂಬಂಧ ಜಾಗೃತಿ ಮೂಡಿಸುತ್ತಾ ಬಂದಿರುವ ಇವರ ಸೇವೆಗೆ ಈ ಪುರಸ್ಕಾರ ಸೂಕ್ತವೆನಿಸಿದೆ ಎಂದು ವೈದ್ಯಲೋಕದ ಗಣ್ಯರು ಕೊಂಡಾಡಿದ್ದಾರೆ.

‘ಎಮೆರಿಟಸ್’ ಗೌರವಕ್ಕೆ ಪಾತ್ರರಾದ ಡಾ. ಪದ್ಮಿನಿ ಪ್ರಸಾದ್ ಅವರನ್ನು CSEPI ಅಧ್ಯಕ್ಷ ಡಾ. ಎಂ.ಎನ್. ಥರೇಜಾ ಹಾಗೂ SEXCON 2026ರ ಸಂಘಟನಾ ಕಾರ್ಯದರ್ಶಿ ಡಾ. ಜಾಲಿ ಅರೋರಾ ಅಭಿನಂದಿಸಿದ್ದಾರೆ.

Author

ANU News

Follow Me
Other Articles
Previous

Asian Games: Suchika Tariyal wins India’s first-ever MMA medal

Next

Dr Padmini Prasad named ‘Emeritus’ by CSEPI for decades of work in sexual health

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಅಲ್ಲು ಅರ್ಜುನ್‌ ‘ರಾಕಾ’ಗೆ ಗಿನ್ನೆಸ್ ದಾಖಲೆ: 37 ಕಲಾವಿದರ ಮೋಷನ್‌ ಕ್ಯಾಪ್ಚರ್!
    • Allu Arjun-Atlee’s ‘Raaka’ enters Guinness World Records
    • Trump TV launched amid White House-media standoff; CNN, MS NOW, Politico sue Trump administration
    • ಮಾಧ್ಯಮಗಳೊಂದಿಗೆ ಸಂಘರ್ಷದ ನಡುವೆ ‘ಟ್ರಂಪ್ ಟಿವಿ’ ಆರಂಭಿಸಿದ ಶ್ವೇತಭವನ
    • Dr Padmini Prasad named ‘Emeritus’ by CSEPI for decades of work in sexual health
    Copyright 2026 — ANU News. All rights reserved. Blogsy WordPress Theme