Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಏಷ್ಯನ್ ಪ್ಯಾರಾ ಗೇಮ್ಸ್: ಹೊಸ ದಾಖಲೆ ಜೊತೆಗೆ ಎರಡನೇ ಚಿನ್ನನಿಶಾದ್ ಕುಮಾರ್‌

By ANU News
October 21, 2026 1 Min Read
0

ಐಚಿ-ನಗೋಯಾ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ನಿಶಾದ್ ಕುಮಾರ್ ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಪುರುಷರ ಹೈಜಂಪ್‌ T47 ವಿಭಾಗದ ಫೈನಲ್‌ನಲ್ಲಿ 2.04 ಮೀಟರ್ ಎತ್ತರಕ್ಕೆ ಜಿಗಿದು ಗೇಮ್ಸ್ ದಾಖಲೆ ನಿರ್ಮಿಸಿದ ಅವರು, ತಮ್ಮ ಎರಡನೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಿಂದಿನ ದಿನ ತಮ್ಮ ಚೊಚ್ಚಲ ಸ್ಪರ್ಧೆಯಾದ ಪುರುಷರ ಲಾಂಗ್‌ಜಂಪ್‌ನಲ್ಲಿ ಚಿನ್ನ ಗೆದ್ದಿದ್ದ ನಿಶಾದ್, ಇದೀಗ ತಮ್ಮ ಪ್ರಮುಖ ಸ್ಪರ್ಧೆಯಾದ ಹೈಜಂಪ್‌ನಲ್ಲೂ ಮಿಂಚಿದ್ದಾರೆ. ಈ ಮೂಲಕ ಭಾರತದ ಪದಕ ಗಳಿಕೆಗೆ ಮತ್ತೊಂದು ಸ್ವರ್ಣ ಪದಕವನ್ನು ಸೇರ್ಪಡೆಗೊಳಿಸಿದ್ದಾರೆ.

ಸ್ಪರ್ಧೆಯಲ್ಲಿ ನಿಶಾದ್ 1.88 ಮೀಟರ್ ಮತ್ತು 1.98 ಮೀಟರ್ ಎತ್ತರಗಳನ್ನು ಯಶಸ್ವಿಯಾಗಿ ದಾಟಿದರು. ಉಜ್ಬೇಕಿಸ್ತಾನದ ಮುಹಮ್ಮದ್‌ಅಬ್ದುಲ್ಲೋ ತುರ್ಸುಂಜೊನೊವ್ 1.94 ಮೀಟರ್ ಎತ್ತರ ಜಿಗಿದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ದಾಖಲಿಸಿದರು. ಆದರೆ, 1.96 ಮೀಟರ್ ಎತ್ತರವನ್ನು ದಾಟಲು ವಿಫಲರಾದರು.

ಬಳಿಕ ಬಾರ್ ಅನ್ನು 2.04 ಮೀಟರ್ ಎತ್ತರಕ್ಕೆ ಏರಿಸಿದ ನಿಶಾದ್, ಅದನ್ನು ಯಶಸ್ವಿಯಾಗಿ ದಾಟುವ ಮೂಲಕ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಒಂದೇ ಕೂಟದಲ್ಲಿ ಲಾಂಗ್‌ಜಂಪ್ ಮತ್ತು ಹೈಜಂಪ್ ಎರಡರಲ್ಲೂ ಚಿನ್ನ ಗೆದ್ದಿರುವ ಅವರ ಸಾಧನೆ ಭಾರತದ ಪ್ಯಾರಾ ಅಥ್ಲೆಟಿಕ್ಸ್‌ಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದೆ.

Author

ANU News

Follow Me
Other Articles
Previous

Asian Para Games: Nishad Kumar Wins Second Gold With Games Record

Next

WWF-India Launches Green Diwali Campaign, Urges Citizens to Avoid Firecrackers

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Iran War to End Soon, Oil Prices to Fall Sharply: Trump
    • ಇರಾನ್ ಯುದ್ಧ ಶೀಘ್ರದಲ್ಲೇ ಅಂತ್ಯವಾಗಲಿದೆ: ಡೊನಾಲ್ಡ್ ಟ್ರಂಪ್
    • ‘ವಾಸ್ತವಾಂಶಗಳನ್ನು ಸರಿಯಾಗಿ ತಿಳಿದುಕೊಳ್ಳಿ’: ರಾಹುಲ್ ಗಾಂಧಿಗೆ ಮಹಾ ಬಿಜೆಪಿ ಶಾಸಕ ತಿರುಗೇಟು
    • ‘Get Your Facts Straight’: BJP MLA Hits Out at Rahul Gandhi Over RSS Remarks
    • ‘ಕಳ್ಳನ ಮನಸ್ಸು ಹುಳ್ಳುಳ್ಳಗೆ’: ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ
    Copyright 2026 — ANU News. All rights reserved. Blogsy WordPress Theme