Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಚಂದ್ರಶೇಖರನ್ ಪಿಎಫ್ ಹಣ ಪಾವತಿಗೆ ವಿಳಂಬ: ಇಲಾಖೆ ಸ್ಪಷ್ಟನೆ

By ANU News
September 2, 2026 1 Min Read
0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ದಿವಂಗತ ಚಂದ್ರಶೇಖರನ್ ಅವರ ಕುಟುಂಬಕ್ಕೆ ನೀಡಬೇಕಾದ ಸೌಲಭ್ಯಗಳ ಪೈಕಿ ₹3.05 ಲಕ್ಷ ಪಿಎಫ್ ಮೊತ್ತ ಮಾತ್ರ ಬಾಕಿ ಇದ್ದು, ಉಳಿದ ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಮೈಸೂರಿನ ಪೇಪರ್ ಮಿಲ್ಸ್‌ನಿಂದ ಚಂದ್ರಶೇಖರನ್ ಅವರನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ವಿಲೀನಗೊಳಿಸಲಾಗಿತ್ತು. ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ನಿರ್ದೇಶನದಂತೆ ನಿಗಮದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ನಂತರ ನೌಕರರ ಶಾಸನಬದ್ಧ ಕಡಿತಗಳ ಮೊತ್ತವನ್ನು ಜಮಾ ಮಾಡಲು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲು ಅನುಮತಿ ನೀಡಲಾಗಿತ್ತು. ಅದರಂತೆ ಜುಲೈ 22, 2026ರಂದು ಬ್ಯಾಂಕ್ ಖಾತೆ ತೆರೆಯಲಾಗಿದೆ.
ಬಾಕಿ ಇರುವ ₹3.05 ಲಕ್ಷ ಪಿಎಫ್ ಮೊತ್ತವನ್ನು ಶೀಘ್ರದಲ್ಲೇ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Author

ANU News

Follow Me
Other Articles
Previous

Railways approves ₹170 crore Kavach 4.0 rollout on 712 route km in Moradabad division

Next

Valmiki Corporation row: Govt clarifies delay in PF payment to late employee Chandrashekaran

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Purification’ row: Padmaraj Poojary backs Kharge, Rahul Gandhi
    • ‘ಶುದ್ಧೀಕರಣ’ದ ನಡೆ ಸರಿಯಲ್ಲ: ಖರ್ಗೆ, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತ ವಕೀಲ ಪದ್ಮರಾಜ್ ಪೂಜಾರಿ 
    • FIR against Rahul Gandhi an attack on democracy, says minister Raghumurthy
    • ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್ ಪ್ರಜಾಪ್ರಭುತ್ವದ ಮೇಲಿನ ದಾಳಿ: ರಘುಮೂರ್ತಿ
    • Valmiki Corporation row: Govt clarifies delay in PF payment to late employee Chandrashekaran
    Copyright 2026 — ANU News. All rights reserved. Blogsy WordPress Theme