ಛಠ್ ಪೂಜೆಯಲ್ಲಿ ಪಾಲ್ಗೊಂಡ ನಟಿ ತಮನ್ನಾ ಭಾಟಿಯಾ:
ಮುಂಬೈ: ನಟಿ ತಮನ್ನಾ ಭಾಟಿಯಾ ಅವರು ಮುಂಬೈನ ಜುಹು ಬೀಚ್ನಲ್ಲಿ ನಡೆದ ಛಠ್ ಮಹಾಪರ್ವ ಆಚರಣೆಯಲ್ಲಿ ಪಾಲ್ಗೊಂಡು ಭಕ್ತರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದ ಸಲ್ಲಿಸಲು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಹೇಳಿದರು. ತಮ್ಮ ಭಕ್ತಿಗೀತೆ ‘ಛಠಿ ಮೈಯಾ’ಗೆ ಜನರಿಂದ ಅಪಾರ ಪ್ರೀತಿ ವ್ಯಕ್ತವಾಗಿರುವುದು ಸಂತಸ ತಂದಿದೆ. ಛಠ್ ಪೂಜೆಯನ್ನು ಹಾಡಿನ ಮೂಲಕ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ತಮ್ಮ ಅದೃಷ್ಟ ಎಂದರು.

ಹಾಡಿನ ಪ್ರಚಾರದ ವೇಳೆ ಪಾಟ್ನಾಗೆ ಭೇಟಿ ನೀಡಿದ್ದನ್ನು ಸ್ಮರಿಸಿದ ತಮನ್ನಾ, ಗಂಗಾ ಆರತಿ ನೆರವೇರಿಸಿದ ಬಳಿಕ ಛಠ್ ಪೂಜೆಯನ್ನು ಕಣ್ತುಂಬಿಕೊಳ್ಳುವ ಆಸೆ ಹೊಂದಿದ್ದಾಗಿ ತಿಳಿಸಿದರು.
ಇದೀಗ ತಮ್ಮದೇ ನಗರಿ ಮುಂಬೈನಲ್ಲಿ ಸಾವಿರಾರು ಭಕ್ತರೊಂದಿಗೆ ಛಠ್ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಛಠ್ ಹಬ್ಬದ ಮಹತ್ವ ಮತ್ತು ಈ ಆಚರಣೆಯಿಂದ ಕಲಿತ ವಿಚಾರಗಳು ಸದಾ ತಮ್ಮೊಂದಿಗೆ ಉಳಿಯಲಿವೆ. ಈ ಹಬ್ಬದೊಂದಿಗೆ ಬೆಸೆದುಕೊಂಡಿರುವ ಹೊಸ ಬಾಂಧವ್ಯ ಎಂದಿಗೂ ಮುಂದುವರಿಯಲಿದೆ ಎಂದು ತಮನ್ನಾ ಭಾವನೆ ಹಂಚಿಕೊಂಡರು.