Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

‘ಟಾಸ್’: ಕರಾವಳಿಯ ಹಾಸ್ಯ ಪಯಣ! ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್‌ಗಳ ‘ಫ್ಯಾಮಿಲಿ ಪ್ಯಾಕೇಜ್’

By ANU News
September 13, 2026 1 Min Read
Comments Off on ‘ಟಾಸ್’: ಕರಾವಳಿಯ ಹಾಸ್ಯ ಪಯಣ! ಕಾಮಿಡಿ, ಸೆಂಟಿಮೆಂಟ್, ಆ್ಯಕ್ಷನ್, ಥ್ರಿಲ್ಲರ್‌ಗಳ ‘ಫ್ಯಾಮಿಲಿ ಪ್ಯಾಕೇಜ್’

ಮಂಗಳೂರು: ಅವಿಕಾ ಪ್ರೊಡಕ್ಷನ್ ಹಾಗೂ ಬಿಆರ್‌ಬಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ಟಾಸ್’ ತುಳು ಸಿನಿಮಾ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಅರ್ಜುನ್ ದೇವ್ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಚಿತ್ರದ ಕುರಿತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಎರಡು ಹಂತಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದಲ್ಲಿ ಡಾ. ದೇವದಾಸ್ ಕಾಪಿಕಾಡ್, ಅರ್ಜುನ್ ದೇವ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರ್, ಸುತೇಜ್ ಶೆಟ್ಟಿ, ಸಂಗೀತಾ ಶೆಟ್ಟಿ, ಶೋಭರಾಜ್ ಪಾವೂರ್, ಚೈತ್ರಾ ಶೆಟ್ಟಿ ಹಾಗೂ ಕೃತಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

‘ಟಾಸ್’ ಚಿತ್ರವನ್ನು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಿಸಲಾಗಿದ್ದು, ಎರಡೂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಮಣಿಕಾಂತ್ ಕದ್ರಿ ಸಂಗೀತ, ಜೋಯೆಲ್ ಶಮನ್ ಡಿ’ಸೋಜಾ ಛಾಯಾಗ್ರಹಣ ಹಾಗೂ ಯಶ್ವಿನ್ ಕೆ. ಶೆಟ್ಟಿಗಾರ್ ಸಂಕಲನ ನಿರ್ವಹಿಸಿದ್ದಾರೆ. ಸಾಗರ್ ಪೂಜಾರಿ ನಿರ್ಮಾಪಕರಾಗಿದ್ದು, ಸಂದೀಪ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನಟ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸಿನಿಮಾಕ್ಕೆ ಬೆಂಬಲ ನೀಡಿದ್ದಾರೆ.

ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ಸೇರಿದಂತೆ ಕರಾವಳಿಯ ವಿವಿಧೆಡೆ ಚಿತ್ರ ಬಿಡುಗಡೆಯಾಗಲಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲೂ ಸಿನಿಮಾ ತೆರೆಕಾಣಲಿದೆ.

ಕಾಮಿಡಿಗೆ ಹೆಚ್ಚಿನ ಆದ್ಯತೆ ನೀಡಿರುವ ‘ಟಾಸ್’ನಲ್ಲಿ ಸೆಂಟಿಮೆಂಟ್, ಆ್ಯಕ್ಷನ್ ಮತ್ತು ಥ್ರಿಲ್ಲರ್ ಅಂಶಗಳನ್ನೂ ಒಳಗೊಂಡಿದ್ದು, ಎಲ್ಲ ವಯೋಮಾನದ ಪ್ರೇಕ್ಷಕರಿಗೆ ಇಷ್ಟವಾಗುವ ಫ್ಯಾಮಿಲಿ ಪ್ಯಾಕೇಜ್ ರೂಪಿಸಲಾಗಿದೆ ಎಂದು ನಿರ್ದೇಶಕ ಅರ್ಜುನ್ ದೇವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶರ್ಮಿಳಾ ಕಾಪಿಕಾಡ್, ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರ್ ಹಾಗೂ ನವೀನ್ ಡಿ. ಪಡೀಲ್ ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ವಿಶ್ವಸಂಸ್ಥೆ ಸುಧಾರಣೆ, ಬಲವಾದ ಆರ್ಥಿಕ ಸಹಕಾರಕ್ಕೆ ಬ್ರಿಕ್ಸ್ ಒತ್ತು; ತಂತ್ರಜ್ಞಾನ, ಆರೋಗ್ಯ, ಹವಾಮಾನಕ್ಕೂ ಆದ್ಯತೆ

Next

Tulu film ‘Toss’ promises a family-packed mix of comedy, action and thrills

Recent Posts

  • ‘Will never forget your support’: Naidu thanks Karnataka for helping Andhra amid Cyclone Murasu
  • ಮುರಸು ಚಂಡಮಾರುತದ ಸಂಕಷ್ಟದಲ್ಲಿ ನೆರವಿಗೆ ಧಾವಿಸಿದ ಕರ್ನಾಟಕ; ಡಿಕೆಶಿಗೆ ಚಂದ್ರಬಾಬು ನಾಯ್ಡು ಧನ್ಯವಾದ
  • NCP Factional Tensions Surface After Amit Shah Meeting; Sunetra Pawar Calls Key MLA Meet
  • ಎನ್‌ಸಿಪಿಯಲ್ಲಿ ಭಿನ್ನಮತ ಸ್ಫೋಟ? ಅಮಿತ್ ಶಾ ಭೇಟಿಯ ಬೆನ್ನಲ್ಲೇ ಸುನೇತ್ರಾ ಪವಾರ್ ತುರ್ತು ಸಭೆ
  • Netanyahu Pushes Trump For Fresh Iran Strikes As Diplomatic Talks Continue
Copyright 2026 — ANU News. All rights reserved. Blogsy WordPress Theme