ತಮಿಳುನಾಡಿನಲ್ಲಿ ಮುಂಜಾನೆ 6 ಗಂಟೆಯ ಸಿನಿಮಾ ಶೋಗಳಿಗೆ ಮತ್ತೆ ಅನುಮತಿ
ಚೆನ್ನೈ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಮುಂಜಾನೆಯ ಸಿನಿಮಾ ಪ್ರದರ್ಶನಗಳಿಗೆ ಮತ್ತೆ ಅನುಮತಿ ನೀಡಲಾಗಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರದ ನಿರ್ಧಾರದಿಂದ ಪ್ರದರ್ಶಕರು ಮತ್ತು ವಿತರಕರಿಗೆ ನಿರಾಳತೆ ಸಿಕ್ಕಿದೆ.
ಹೊಸ ತಮಿಳು ಸಿನಿಮಾಗಳ ಬಿಡುಗಡೆಯ ಮೊದಲ ವಾರ ಪ್ರತಿದಿನ ಆರು ಶೋಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 6ರಿಂದ ಮಧ್ಯರಾತ್ರಿ 2.30ರವರೆಗೆ ಪ್ರದರ್ಶನ ನಡೆಸಬಹುದು. ಸ್ಥಳೀಯ ಹಬ್ಬ, ಸಾರ್ವಜನಿಕ ರಜೆ ಹಾಗೂ ವಾರಾಂತ್ಯಗಳಿಗೂ ಈ ನಿಯಮ ಅನ್ವಯವಾಗಲಿದೆ.

2023ರಲ್ಲಿ ‘ತುನಿವು’ ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ಬಳಿಕ ಮುಂಜಾನೆಯ ಶೋಗಳನ್ನು ರದ್ದುಗೊಳಿಸಲಾಗಿತ್ತು. ಆರು ಪ್ರದರ್ಶನಗಳಿಗೆ ಅವಕಾಶ ನೀಡುವಂತೆ ಚಿತ್ರರಂಗದ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಅಕ್ಟೋಬರ್ 27ರಂದು ಸಚಿವ ರಾಜಮೋಹನ್ ಅವರಿಗೆ ಮನವಿ ನೀಡಿದ್ದಾಗಿ ನಿರ್ಮಾಪಕ ಜಿ. ಧನಂಜಯನ್ ತಿಳಿಸಿದ್ದಾರೆ. ಮನವಿಗೆ ತ್ವರಿತವಾಗಿ ಸ್ಪಂದಿಸಿದ ಸಿಎಂ ವಿಜಯ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನವೆಂಬರ್ 6ರಂದು ಬಿಡುಗಡೆಯಾಗಲಿರುವ ಸೂರ್ಯ ಅಭಿನಯದ ‘ಸೀನ್’ ಹಾಗೂ ‘ಮೂಕುತಿ ಅಮ್ಮನ್ 2’ ಚಿತ್ರಗಳಿಗೆ ಈ ನಿರ್ಧಾರ ಅನುಕೂಲವಾಗಲಿದೆ.