Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ನ.20ರಿಂದ ಗೋವಾದಲ್ಲಿ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ಗಡಿಗಳಿಲ್ಲದ ಕಥೆಗಳು’ ಈ ಬಾರಿಯ ಥೀಮ್

By ANU News
November 13, 2026 1 Min Read
Comments Off on ನ.20ರಿಂದ ಗೋವಾದಲ್ಲಿ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ಗಡಿಗಳಿಲ್ಲದ ಕಥೆಗಳು’ ಈ ಬಾರಿಯ ಥೀಮ್

ಪಣಜಿ: ಭಾರತದ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI) ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯಲಿದೆ. ‘ಗಡಿಗಳಿಲ್ಲದ ಕಥೆಗಳು’ (Stories Without Borders) ಎಂಬ ಧ್ಯೇಯವಾಕ್ಯದಡಿ ನಡೆಯುವ ಉತ್ಸವದಲ್ಲಿ ಜಗತ್ತಿನ ವಿವಿಧ ದೇಶಗಳ ಚಲನಚಿತ್ರ ನಿರ್ಮಾಪಕರು, ಕಲಾವಿದರು ಹಾಗೂ ಸಿನಿಮಾ ಪ್ರೇಮಿಗಳು ಭಾಗವಹಿಸಲಿದ್ದಾರೆ.

ಉತ್ಸವದ ಪ್ರಮುಖ ಆಕರ್ಷಣೆಗಳು, ಕಾರ್ಯಕ್ರಮಗಳು ಮತ್ತು ವಿಶೇಷ ವಿಭಾಗಗಳ ವಿವರಗಳನ್ನು ನವೆಂಬರ್ 13ರಂದು ತಾಜ್ ಸಿಡೇಡ್ ಡಿ ಗೋವಾ ಹರೈಸನ್‌ನಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾದ ಉಪಾಧ್ಯಕ್ಷೆ ಡೆಲಿಲಾ ಲೋಬೊ ಸೇರಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (NFDC) ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

NFDC ಅಧ್ಯಕ್ಷ ಜಿ. ಕೃಷ್ಣಕುಮಾರ್, ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್, ಉತ್ಸವ ನಿರ್ದೇಶಕ ಆಶುತೋಷ್ ಗೋವಾರಿಕರ್ ಹಾಗೂ ತೀರ್ಪುಗಾರರ ಅಧ್ಯಕ್ಷರೂ ಉಪಸ್ಥಿತರಿರಲಿದ್ದಾರೆ.

ಈ ಬಾರಿಯ ಉತ್ಸವದಲ್ಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಸಿನಿಮಾಗಳ ವಿಶಾಲ ಆಯ್ಕೆ ಪ್ರದರ್ಶನಗೊಳ್ಳಲಿದೆ. ಚಲನಚಿತ್ರ ನಿರ್ಮಾಪಕರು ಹಾಗೂ ಪ್ರೇಕ್ಷಕರ ನಡುವೆ ಸೃಜನಶೀಲ ಸಂವಾದ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ ಕಲ್ಪಿಸುವುದು ಉತ್ಸವದ ಉದ್ದೇಶವಾಗಿದೆ.

ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ಮೀರಿ ಮಾನವೀಯ ಅನುಭವಗಳನ್ನು ಸಿನಿಮಾ ಮೂಲಕ ಬೆಸೆಯುವ ಆಶಯವನ್ನು ‘ಗಡಿಗಳಿಲ್ಲದ ಕಥೆಗಳು’ ಎಂಬ ಧ್ಯೇಯವಾಕ್ಯ ಪ್ರತಿಬಿಂಬಿಸುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

Author

ANU News

Follow Me
Other Articles
Previous

57th IFFI to Showcase Global Cinema in Goa from November 20 to 28

Next

Centre Proposes Major Rent-a-Cab Reforms, Minimum Fleet Requirement Cut to Five

Recent Posts

  • Centre Proposes Major Rent-a-Cab Reforms, Minimum Fleet Requirement Cut to Five
  • ನ.20ರಿಂದ ಗೋವಾದಲ್ಲಿ 57ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ‘ಗಡಿಗಳಿಲ್ಲದ ಕಥೆಗಳು’ ಈ ಬಾರಿಯ ಥೀಮ್
  • 57th IFFI to Showcase Global Cinema in Goa from November 20 to 28
  • ಭಾರತದಲ್ಲಿ ಕ್ಷಯರೋಗ ಸಾವು ಪ್ರಮಾಣ ಶೇ.38ರಷ್ಟು ಇಳಿಕೆ: WHO ವರದಿ
  • TB Deaths in India Fall 38% in a Decade; Treatment Success Rate Hits 94%
Copyright 2026 — ANU News. All rights reserved. Blogsy WordPress Theme