Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಬಹುರಾಷ್ಟ್ರೀಯ ವಾಯುಸೇನಾ ಸಮರಾಭ್ಯಾಸ ‘ತರಂಗ್ ಶಕ್ತಿ–2026’ರ ಎರಡನೇ ಆವೃತ್ತಿ; ಬಾಣಗಳದಲ್ಲಿ ಭರ್ಜರಿ ತಾಲೀಮು

By ANU News
October 11, 2026 1 Min Read
0

ಜೋಧಪುರ: ರಕ್ಷಣಾ ಉತ್ಪಾದನೆ, ತಾಂತ್ರಿಕ ಆವಿಷ್ಕಾರ ಹಾಗೂ ಅಂತಾರಾಷ್ಟ್ರೀಯ ಸಹಕಾರದಲ್ಲಿ ಸ್ವಾವಲಂಬನೆ ಸಾಧಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ಶನಿವಾರ ನಡೆದ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ ‘ತರಂಗ್ ಶಕ್ತಿ–2026’ರ ಎರಡನೇ ಆವೃತ್ತಿಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತೀಯ ವಾಯುಪಡೆ ಆಯೋಜಿಸಿರುವ ಈ ಸಮರಾಭ್ಯಾಸ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 12ರವರೆಗೆ ನಡೆಯುತ್ತಿದೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಫ್ರಾನ್ಸ್, ಜರ್ಮನಿ, ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಮೆರಿಕದ ವಾಯುಪಡೆಗಳು ಭಾಗವಹಿಸಿದ್ದು, 32 ದೇಶಗಳ ಪ್ರತಿನಿಧಿಗಳು ವೀಕ್ಷಕರಾಗಿ ಪಾಲ್ಗೊಂಡಿದ್ದಾರೆ.

ಆಧುನಿಕ ಯುದ್ಧತಂತ್ರಗಳು ಭೂಮಿ, ಸಮುದ್ರ ಮತ್ತು ವಾಯುಪ್ರದೇಶಕ್ಕೆ ಸೀಮಿತವಾಗಿಲ್ಲ. ಬಾಹ್ಯಾಕಾಶ, ಸೈಬರ್‌ ವಲಯ ಹಾಗೂ ಮಾಹಿತಿ ಕಾರ್ಯಾಚರಣೆಗಳಿಗೂ ವಿಸ್ತರಿಸಿವೆ. ಡ್ರೋನ್‌ಗಳು, ಕೃತಕ ಬುದ್ಧಿಮತ್ತೆ, ಮಾನವರಹಿತ ವ್ಯವಸ್ಥೆಗಳು ಮತ್ತು ದೂರಗಾಮಿ ನಿಖರ ದಾಳಿಯ ಶಸ್ತ್ರಾಸ್ತ್ರಗಳ ಪಾತ್ರ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಭವಿಷ್ಯದ ಮಿಲಿಟರಿ ಸಾಮರ್ಥ್ಯವನ್ನು ಶಸ್ತ್ರಾಸ್ತ್ರಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗದು. ಪರಿಸ್ಥಿತಿಯನ್ನು ಗ್ರಹಿಸಿ, ನಿರ್ಧಾರ ಕೈಗೊಂಡು ಕಾರ್ಯಾಚರಣೆ ನಡೆಸುವ ವೇಗವೂ ನಿರ್ಣಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸ್ವಾವಲಂಬನೆ ಎಂದರೆ ಪ್ರತ್ಯೇಕವಾಗಿರುವುದಲ್ಲ. ನಿರ್ಣಾಯಕ ರಕ್ಷಣಾ ತಂತ್ರಜ್ಞಾನಗಳನ್ನು ದೇಶದಲ್ಲೇ ಅಭಿವೃದ್ಧಿಪಡಿಸಿ, ಉತ್ಪಾದಿಸಿ, ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವುದಾಗಿದೆ ಎಂದು ಹೇಳಿದರು.

ತೇಜಸ್ ಯುದ್ಧವಿಮಾನ, ಧ್ರುವ ಮತ್ತು ಪ್ರಚಂಡ ಹೆಲಿಕಾಪ್ಟರ್‌ಗಳು, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಹಾಗೂ ಸುಧಾರಿತ ರಾಡಾರ್‌ಗಳಂತಹ ಸ್ವದೇಶಿ ತಂತ್ರಜ್ಞಾನಗಳನ್ನು ಉಲ್ಲೇಖಿಸಿದ ಅವರು, ಸ್ಥಳೀಯ ವಿಮಾನ ಎಂಜಿನ್ ಅಭಿವೃದ್ಧಿಯ ಮಹತ್ವವನ್ನೂ ತಿಳಿಸಿದರು.

ಸಂಶೋಧನೆ, ಜಂಟಿ ಉತ್ಪಾದನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಇತರ ರಾಷ್ಟ್ರಗಳೊಂದಿಗೆ ಸಹಕಾರ ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದರು.

‘ವಿಭಿನ್ನ ರಾಷ್ಟ್ರಗಳು, ವಿಭಿನ್ನ ಯುದ್ಧವಿಮಾನಗಳು, ವಿಭಿನ್ನ ಅನುಭವಗಳು; ಆದರೆ ಆಕಾಶ ಒಂದೇ. ಇದೇ ತರಂಗ್ ಶಕ್ತಿಯ ಸಂದೇಶ’ ಎಂದು ಹೇಳಿದರು.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ, ವಾಯುಪಡೆ ಮುಖ್ಯಸ್ಥ ಎ.ಪಿ. ಸಿಂಗ್, ನೌಕಾಪಡೆ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಮತ್ತಿತರರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Delhi’s Peace Won’t Be Compromised for Political Gains: Rekha Gupta

Next

ದೆಹಲಿಯನ್ನು ಒತ್ತೆಯಾಳಾಗಲು ಬಿಡುವುದಿಲ್ಲ: ರೇಖಾ ಗುಪ್ತಾ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ರಂಗ ದಸರಾ ನಾಟಕೋತ್ಸವದಲ್ಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ಪ್ರತಿಭೆ: ಕುರುಕ್ಷೇತ್ರ ಸನ್ನಿವೇಶಕ್ಕೆ ಜನ ಫಿದಾ 
    • Karnataka DyCM G.Parameshwara showcases singing talent at Tumakuru Ranga Dasara
    • CM inaugurates Mysuru Dasara cultural programmes, honours singer Nagamani Srinath
    • ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಚಾಲನೆ: ಗಾಯಕಿ ಮೈಸೂರು ನಾಗಮಣಿ ಶ್ರೀನಾಥ್‌ಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ
    • K’taka BJP chalks out strategy to strengthen organisation, prepare for Council polls: Vijayendra
    Copyright 2026 — ANU News. All rights reserved. Blogsy WordPress Theme