Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೀರೊಳಗಿನ ಡ್ರೋನ್ ವಶಕ್ಕೆ; ಇರಾನ್ ಹೇಳಿಕೆ

By ANU News
September 9, 2026 1 Min Read
0

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬುಧವಾರ ಹೇಳಿಕೊಂಡಿದೆ. ಇದೇ ವೇಳೆ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮಾನವರಹಿತ ನೀರೊಳಗಿನ ಡ್ರೋನ್‌ವೊಂದನ್ನು ವಶಪಡಿಸಿಕೊಂಡಿರುವುದಾಗಿಯೂ IRGC ತಿಳಿಸಿದೆ.

ಇರಾನಿನ ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೆಹ್ರಾನ್ ಹೇಳಿದೆ.

ಜೋರ್ಡಾನ್‌ನ ಅಲ್-ಅಜ್ರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡ ದಾಳಿಯಿಂದ ವಿಮಾನ ನಿರ್ವಹಣಾ ಸೌಲಭ್ಯಗಳು, ಸೇನಾ ಸ್ಥಾಪನೆಗಳು ಹಾಗೂ ಯುದ್ಧವಿಮಾನಗಳ ಆಶ್ರಯಗಳಿಗೆ ಹಾನಿಯಾಗಿದೆ ಎಂದು IRGC ಹೇಳಿದೆ.

ಆದರೆ, ಜೋರ್ಡಾನ್ ಸೇನೆ ದೇಶದತ್ತ ಹಾರಿಸಲಾದ 18 ಇರಾನಿನ ಕ್ಷಿಪಣಿಗಳನ್ನು ತಡೆದು ನಾಶಪಡಿಸಿರುವುದಾಗಿ ತಿಳಿಸಿದೆ.

ಇರಾನ್‌ನ ತೈಲ ಟ್ಯಾಂಕರ್‌ಗಳ ಮೇಲಿನ ದಾಳಿ ಮುಂದುವರಿದರೆ, ಅಮೆರಿಕದ ಮಿತ್ರ ರಾಷ್ಟ್ರಗಳಾದ ಕುವೈತ್ ಮತ್ತು ಬಹ್ರೇನ್ ಸಮೀಪ ಕಾರ್ಯನಿರ್ವಹಿಸುತ್ತಿರುವ ತೈಲ ಟ್ಯಾಂಕರ್‌ಗಳನ್ನೂ ಗುರಿಯಾಗಿಸಬಹುದು ಎಂದು ಟೆಹ್ರಾನ್ ಎಚ್ಚರಿಸಿದೆ. ಈ ಪ್ರದೇಶದಲ್ಲಿರುವ ಟ್ಯಾಂಕರ್‌ಗಳ ಸಿಬ್ಬಂದಿ ಹಡಗುಗಳನ್ನು ತೊರೆಯುವಂತೆ IRGC ಸೂಚಿಸಿದೆ ಎಂದು ವರದಿಯಾಗಿದೆ.

ಈ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಅತ್ಯಾಧುನಿಕ ಮಾನವರಹಿತ ನೀರೊಳಗಿನ ಡ್ರೋನ್‌ ವಶಪಡಿಸಿಕೊಂಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಆದರೆ, ಡ್ರೋನ್ ತಾಂತ್ರಿಕ ದೋಷಕ್ಕೊಳಗಾಗಿದ್ದ ಹಳೆಯ ಮಾದರಿಯಾಗಿದ್ದು, ಸೂಕ್ಷ್ಮ ಮಾಹಿತಿ ಹೊಂದಿರಲಿಲ್ಲ ಎಂದು ಅಮೆರಿಕ ಸೇನೆ ಈ ಹೇಳಿಕೆಯನ್ನು ತಳ್ಳಿಹಾಕಿದೆ.

Author

ANU News

Follow Me
Other Articles
Previous

Tehran claims missile strike on US base in Jordan, captures US underwater drone

Next

India will stand firmly with Sri Lanka in crisis, says Rajnath Singh

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘People’s trust is bigger than power’: DK Shivakumar marks 100 days as CM
    • ಅಧಿಕಾರಕ್ಕಿಂತ ಜನರ ನಂಬಿಕೆ ದೊಡ್ಡದು: ಸಿಎಂ ಆಗಿ 100 ದಿನ ಪೂರೈಸಿದ ಡಿಕೆಶಿ
    • Raanbali teaser: Vijay Deverakonda, Rashmika Mandanna film takes on British-era oppression
    • ಬ್ರಿಟಿಷರ ದೌರ್ಜನ್ಯ ವಿರುದ್ಧದ ಹೋರಾಟದ ಕಥೆ; ವಿಜಯ್-ರಶ್ಮಿಕಾ ಜೋಡಿಯ ‘ರಣಬಾಲಿ’ ಟೀಸರ್ ಬಿಡುಗಡೆ;
    • ಜಾಗತಿಕ 6G ನಾಯಕತ್ವದತ್ತ ಭಾರತ; 20ಕ್ಕೂ ಹೆಚ್ಚು ರಾಷ್ಟ್ರಗಳ ‘ಕಾಲ್‌ ಟು ಆಕ್ಷನ್‌’ಗೆ ಬೆಂಬಲ
    Copyright 2026 — ANU News. All rights reserved. Blogsy WordPress Theme