Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

15ರ ಹರೆಯದ ವೈಭವ್ ಸೂರ್ಯವಂಶಿ ಸ್ಫೋಟಕ ಶತಕ: ಐಪಿಎಲ್ ಇತಿಹಾಸದಲ್ಲಿ ದಾಖಲೆಗಳ ಸುರಿಮಳೆ

By ANU News
April 26, 2026 1 Min Read
0

ಹೈದರಾಬಾದ್: ವೈಭವ್ ಸೂರ್ಯವಂಶಿ (Vaibhav Suryavanshi) ಕೇವಲ 15ನೇ ವಯಸ್ಸಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಬೌಲಿಂಗ್ ದಾಳಿಯನ್ನು ಧ್ವಂಸ ಮಾಡಿದ ಯುವ ದಾಂಡಿಗ ಹಲವು ದಾಖಲೆಗಳನ್ನು ಬರೆಯುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಪಂದ್ಯದ ಮೊದಲ ಓವರ್‌ನಲ್ಲೇ ಪ್ರಫುಲ್ ಹಿಂಗೆ (Prafull Hinge) ಬೌಲಿಂಗ್‌ನಲ್ಲಿ ನಾಲ್ಕು ಭರ್ಜರಿ ಸಿಕ್ಸರ್ ಸಿಡಿಸಿ ವೈಭವ್ ಆರ್ಭಟ ಆರಂಭಿಸಿದರು. ಒಟ್ಟು 12 ಸಿಕ್ಸರ್ ಬಾರಿಸುವ ಮೂಲಕ, ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಹೊಸ ದಾಖಲೆ ತಮ್ಮದಾಗಿಸಿಕೊಂಡರು.

ಇದಷ್ಟೇ ಅಲ್ಲ, ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದ ವೈಭವ್, ಐಪಿಎಲ್ ಇತಿಹಾಸದಲ್ಲಿ ಮೂರನೇ ಅತಿ ವೇಗದ ಶತಕ ದಾಖಲಿಸಿದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (Chris Gayle) 30 ಎಸೆತಗಳ ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ 36 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ವೈಭವ್ ಹೆಸರಿಗೆ ಸೇರಿದೆ. ಕಳೆದ ಸೀಸನ್‌ನಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಅವರು, ಇದೀಗ ಮತ್ತೊಮ್ಮೆ ಅದೇ ಸಾಧನೆ ಮರುಕಳಿಸಿದ್ದಾರೆ.

ಟಿ20 ಕ್ರಿಕೆಟ್ ಇತಿಹಾಸದಲ್ಲೂ ವೈಭವ್ ಹೊಸ ಅಧ್ಯಾಯ ಬರೆದಿದ್ದಾರೆ. ಕೇವಲ 15 ವರ್ಷ 29 ದಿನಗಳಲ್ಲಿ 1000 ರನ್ ಪೂರೈಸಿದ ಮೊದಲ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ 4 ಟಿ20 ಶತಕ ಸಿಡಿಸಿದ ದಾಖಲೆಯನ್ನು ಕೂಡ ಮುರಿದಿದ್ದಾರೆ. ಉಸ್ಮಾನ್ ಖಾನ್ (Usman Khan) ಹೊಂದಿದ್ದ 33 ಇನಿಂಗ್ಸ್ ದಾಖಲೆವನ್ನು ಕೇವಲ 26 ಇನಿಂಗ್ಸ್‌ಗಳಲ್ಲಿ ಮೀರಿ ಸಾಧನೆ ಮಾಡಿದ್ದಾರೆ.

ಇನ್ನೊಂದು ಮೈಲುಗಲ್ಲು ಎಂದರೆ, ಕೇವಲ 15 ಇನಿಂಗ್ಸ್‌ಗಳಲ್ಲಿ 50 ಐಪಿಎಲ್ ಸಿಕ್ಸರ್ ಪೂರೈಸಿ ಕ್ರಿಸ್ ಗೇಲ್ (Chris Gayle) ಅವರ 21 ಇನಿಂಗ್ಸ್ ದಾಖಲೆ ಮುರಿದಿದ್ದಾರೆ.

ಈ ಪಂದ್ಯದಲ್ಲಿ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ಈ ಸೀಸನ್‌ನ ವೇಗದ ಅರ್ಧಶತಕ ದಾಖಲೆಯನ್ನು ಅಭಿಷೇಕ್ ಶರ್ಮಾ (Abhishek Sharma) ಜೊತೆ ಹಂಚಿಕೊಂಡಿದ್ದಾರೆ.

ಇನ್ನೂ, ಕೇವಲ 473 ಎಸೆತಗಳಲ್ಲಿ 1000 ಟಿ20 ರನ್ ಪೂರೈಸಿ ಮಿಚೆಲ್ ಓವನ್ (Mitchell Owen) ಅವರ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ.

Author

ANU News

Follow Me
Other Articles
Previous

ಶಿರೂರು ಶಾಲೆಯ SSLC ಚಮತ್ಕಾರ: 35% ರಿಂದ 94%ಕ್ಕೆ ಜಿಗಿತ, ಗುರುವಿನ ಪಾದಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ

Next

ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ಭೂಗತ ವಿದ್ಯುತ್ ಕೇಬಲ್ ಯೋಜನೆಗೆ ಮಂಜೂರಾತಿ, ಸ್ಪೀಕರ್’ಗೆ ಪದ್ಮರಾಜ್ ಅಭಿನಂದನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • India’s carbon footprint below global average, says PM Modi
    • ಜಾಗತಿಕ ಸರಾಸರಿಗಿಂತ ಭಾರತದ ಇಂಗಾಲ ಹೊರಸೂಸುವಿಕೆ ಕಡಿಮೆ: ಪ್ರಧಾನಿ ಮೋದಿ
    • Anant Nag on quitting films: ‘Today’s cinema is too focused on box-office numbers
    • ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬೆನ್ನಲ್ಲೇ ಅನಂತ್ ನಾಗ್ ಮಹತ್ವದ ನಿರ್ಧಾರ!
    • ಕತ್ರಿನಾ ಕೈಫ್‌ ಬಾಡಿ ಶೇಮಿಂಗ್‌ಗೆ ರಮ್ಯಾ ಗರಂ
    Copyright 2026 — ANU News. All rights reserved. Blogsy WordPress Theme