Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕ

ಮುದ್ದೇನಹಳ್ಳಿಯ ಸತ್ಯ ಸಾಯಿ ನವರಾತ್ರಿ ಉತ್ಸವದಲ್ಲಿ ಮೇಧಾ ದಕ್ಷಿಣಾಮೂರ್ತಿ ಯಾಗ, ಸರಸ್ವತಿ ಪೂಜೆ

By ANU News
October 16, 2026 1 Min Read
0

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವ ಭಕ್ತಿ ವೈಭವಕ್ಕೆ ಸಾಕ್ಷಿಯಾಗುತ್ತಿದೆ. ಶುಕ್ರವಾರ ಉತ್ಸವದ ಅಂಗವಾಗಿ ಶೃಂಗೇರಿಯ ಋತ್ವಿಕರ ತಂಡದಿಂದ ಮೇಧಾ ದಕ್ಷಿಣಾಮೂರ್ತಿ ಯಾಗ ಹಾಗೂ ಸರಸ್ವತಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಋತ್ವಿಜ ವಿದ್ವಾನ್ ವಿಕ್ರಮ್ ಭಟ್, ವಿವೇಚನಾಶಕ್ತಿಯನ್ನು ಕಳೆದುಕೊಂಡರೆ ಮಾನವ ಜನ್ಮದ ಸಾರ್ಥಕತೆ ಕುಂದುತ್ತದೆ. ಮನುಷ್ಯನಲ್ಲಿನ ಜಡತ್ವವನ್ನು ದೂರಮಾಡಿ, ವಿವೇಕವನ್ನು ಜಾಗೃತಗೊಳಿಸಲು ಸರಸ್ವತಿ ಮಾತೆಯ ಅನುಗ್ರಹ ಅಗತ್ಯ ಎಂದು ಹೇಳಿದರು.

ಚಿತ್ತಕೋಶದಲ್ಲಿ ವ್ಯಾಪಕವಾಗಿ ನೆಲೆಸಿರುವ ಕಾತ್ಯಾಯನಿ ಮಾತೆಯ ಆರಾಧನೆಯ ಮಹತ್ವವನ್ನು ವಿವರಿಸಿದ ಅವರು, ಜ್ಞಾನ ಮತ್ತು ಅನ್ವೇಷಣೆಯ ಹಾದಿಯಲ್ಲಿ ಶಕ್ತಿ ನೀಡುವ ಮೇಧಾ ದಕ್ಷಿಣಾಮೂರ್ತಿ ಯಾಗದ ಮಹತ್ವವನ್ನೂ ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಶಿಕ್ಷಣದಲ್ಲಿ ಲೌಕಿಕ ಜ್ಞಾನದ ಜೊತೆಗೆ ಆಧ್ಯಾತ್ಮಿಕ ಹಾಗೂ ಮೌಲ್ಯಾಧಾರಿತ ಪರಾ ವಿದ್ಯೆಗೂ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.

ವಿದ್ಯಾದಾನ ಕೇವಲ ಸರ್ಕಾರದ ಹೊಣೆಗಾರಿಕೆಯಲ್ಲ. ಧಾರ್ಮಿಕ ಸಂಸ್ಥೆಗಳು, ಮಠಗಳು ಹಾಗೂ ವಿವಿಧ ಸಂಘಟನೆಗಳೂ ಶಿಕ್ಷಣದ ವಿಸ್ತರಣೆಗೆ ಕೈಜೋಡಿಸಬೇಕು. ಶಿಕ್ಷಣವು ಕೇವಲ ಲೌಕಿಕ ಜ್ಞಾನಕ್ಕೆ ಸೀಮಿತವಾಗದೆ, ಭಾರತೀಯ ಮೌಲ್ಯಗಳು, ಆಧ್ಯಾತ್ಮಿಕತೆ ಮತ್ತು ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಿರಬೇಕು ಎಂದರು.

ಹಿಂದಿನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಜೀವನ ಮೌಲ್ಯಗಳ ಬೋಧನೆಗೆ ಹೆಚ್ಚಿನ ಮಹತ್ವವಿತ್ತು. ತಮ್ಮ ಸಂಸ್ಥೆಯಲ್ಲಿಯೂ ಲೌಕಿಕ ಜ್ಞಾನ ನೀಡುವ ಅಪರಾ ವಿದ್ಯೆಯ ಜೊತೆಗೆ ಆಧ್ಯಾತ್ಮಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಒಳಗೊಂಡ ಪರಾ ವಿದ್ಯೆಯನ್ನು ಬೋಧಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಸದ್ಗುರು, ಭಾರತೀಯ ನೃತ್ಯ, ಸಂಗೀತ ಮತ್ತು ಚಿತ್ರಕಲೆಗಳ ಹಿಂದಿರುವ ಆಧ್ಯಾತ್ಮಿಕ ತತ್ವಗಳನ್ನು ಗುರುತಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Muddenahalli Navaratri celebrations; Bridge Economic, Educational Inequalities, Dr. Mohan Alva Urges

Next

Sadguru Madhusudan Sai Calls for Spiritual, Value-Based Education at Navaratri Festival

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಕುಸಿತ: ಭಗವಂತ್ ಮಾನ್ ಸರ್ಕಾರದ ವಿರುದ್ಧ ಅಮಿತ್ ಶಾ ವಾಗ್ದಾಳಿ
    • Amit Shah Targets Bhagwant Mann Government Over Punjab’s Law and Order
    • ದೇಶದಲ್ಲಿ ‘ಆಡಳಿತ ಬದಲಾವಣೆ’ ಪಿತೂರಿ ನಡೆಯುತ್ತಿದೆ: ರಾಜನಾಥ್ ಸಿಂಗ್ ಆರೋಪ
    • Rajnath Singh Alleges ‘Regime Change’ Conspiracy, Warns Against Attempts to Incite Unrest
    • Dr Sudha Yadav Sworn In as Karnataka’s 20th Governor
    Copyright 2026 — ANU News. All rights reserved. Blogsy WordPress Theme