Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್: ಜಪಾನ್‌ನ ಡೆನ್ಸೊ ಐರಿಸ್‌ಗೆ ಚಾಂಪಿಯನ್ ಪಟ್ಟ

By ANU News
October 23, 2026 1 Min Read
Comments Off on ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್: ಜಪಾನ್‌ನ ಡೆನ್ಸೊ ಐರಿಸ್‌ಗೆ ಚಾಂಪಿಯನ್ ಪಟ್ಟ

ಬೆಂಗಳೂರು: ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫಿಬಾ ಏಷ್ಯಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯ ಫೈನಲ್ ಪಂದ್ಯವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವೀಕ್ಷಿಸಿದರು.

ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜಪಾನ್‌ನ ಡೆನ್ಸೊ ಐರಿಸ್ ತಂಡಕ್ಕೆ ಹಾಗೂ ರನ್ನರ್ ಅಪ್ ಸ್ಥಾನ ಪಡೆದ ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡಕ್ಕೆ ಅವರು ಟ್ರೋಫಿ ವಿತರಿಸಿ ಅಭಿನಂದಿಸಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸುವುದು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಮತ್ತು ಕ್ರೀಡಾ ಸ್ಫೂರ್ತಿಯಿಂದ ಹೋರಾಡುವುದು ಅತ್ಯಂತ ಮುಖ್ಯ ಎಂದು ಪರಮೇಶ್ವರ್ ಹೇಳಿದರು. ಟೂರ್ನಿಯಲ್ಲಿ ಪಾಲ್ಗೊಂಡ ಎಲ್ಲ ತಂಡಗಳ ಕ್ರೀಡಾ ಬದ್ಧತೆ ಮತ್ತು ಪರಿಶ್ರಮ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿಯೂ ತಂಡಗಳು ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು, ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್, ತಮಿಳುನಾಡಿನ ಕ್ರೀಡಾ ಸಚಿವರು ಹಾಗೂ ಭಾರತೀಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಆಧವ್ ಅರ್ಜುನ್, ಕರ್ನಾಟಕ ಬಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ದಯಾನಂದ, ನಟಿ ರಮ್ಯಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Kashi Tamil Sangamam 5.0 to Be Held from November 28

Next

ದಸರಾ ಮೆರವಣಿಗೆ ವೇಳೆ ಪೊಲೀಸ್ ಲಾಠಿ ಏಟು; ಗಾಯಾಳು ಬಾಲಕನಿಗೆ ₹5 ಲಕ್ಷ ಪರಿಹಾರ ಘೋಷಣೆ

Recent Posts

  • 2027ರಲ್ಲಿ ಮೊದಲ ಬುಲೆಟ್ ರೈಲು ಸಂಚಾರದ ಗುರಿ; ಮುಂಬೈ–ಅಹಮದಾಬಾದ್ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿ
  • India’s first bullet train project on track; undersea tunnel, underground Mumbai station take shape
  • Kangana Ranaut hits back at Rahul Gandhi over economy remarks, calls him a ‘frustrated cat’
  • ಭಾರತದ ಆರ್ಥಿಕತೆ ಬಗ್ಗೆ ರಾಹುಲ್ ಹೇಳಿಕೆಗೆ ಕಂಗನಾ ತಿರುಗೇಟು; ‘ಹತಾಶೆಗೊಂಡ ಬೆಕ್ಕಿನಂತಾಗಿದ್ದಾರೆ’ ಎಂದು ವ್ಯಂಗ್ಯ
  • ‘Mother, give me alms’: Yogi Adityanath recalls emotional encounter with mother after becoming a monk
Copyright 2026 — ANU News. All rights reserved. Blogsy WordPress Theme