Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ದಸರಾ ಮೆರವಣಿಗೆ ವೇಳೆ ಪೊಲೀಸ್ ಲಾಠಿ ಏಟು; ಗಾಯಾಳು ಬಾಲಕನಿಗೆ ₹5 ಲಕ್ಷ ಪರಿಹಾರ ಘೋಷಣೆ

By ANU News
October 23, 2026 1 Min Read
0

ಮೈಸೂರು: ದಸರಾ ಜಂಬೂಸವಾರಿ ವೀಕ್ಷಿಸಲು ಆಗಮಿಸಿದ್ದ ಬನ್ನಿಮಂಟಪದ ನಾಗರಾಜು ಮತ್ತು ಸೌಮ್ಯ ದಂಪತಿಯ ಪುತ್ರ ಶಿಶಿರ್ ಪೊಲೀಸ್ ಸಿಬ್ಬಂದಿಯ ಲಾಠಿ ಏಟಿನಿಂದ ಗಂಭೀರವಾಗಿ ಗಾಯಗೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಬಾಲಕನ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಗುವಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವುದರ ಜತೆಗೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ₹5 ಲಕ್ಷ ಆರ್ಥಿಕ ನೆರವು ಕೊಡಿಸುವ ಭರವಸೆ ನೀಡಿದರು. ವೈಯಕ್ತಿಕವಾಗಿಯೂ ಕುಟುಂಬಕ್ಕೆ ನೆರವು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮತ್ತು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾರ್ವಜನಿಕರ ಸುರಕ್ಷತೆ ಮತ್ತು ರಕ್ಷಣೆ ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Author

ANU News

Follow Me
Other Articles
Previous

Kashi Tamil Sangamam 5.0 to Be Held from November 28

Next

India Post Crosses ₹4,000 Crore Quarterly Revenue Mark for Two Consecutive Quarters

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • India Post Crosses ₹4,000 Crore Quarterly Revenue Mark for Two Consecutive Quarters
    • ದಸರಾ ಮೆರವಣಿಗೆ ವೇಳೆ ಪೊಲೀಸ್ ಲಾಠಿ ಏಟು; ಗಾಯಾಳು ಬಾಲಕನಿಗೆ ₹5 ಲಕ್ಷ ಪರಿಹಾರ ಘೋಷಣೆ
    • Kashi Tamil Sangamam 5.0 to Be Held from November 28
    • ಮಣ್ಣಿನ ಆರೋಗ್ಯ ರಕ್ಷಣೆಗೆ ‘ಖೇತ್ ಬಚಾವೋ ಅಭಿಯಾನ’ಕ್ಕೆ ಚಾಲನೆ
    • ಶರಾವತಿ, ಮೇಕೆದಾಟು ಯೋಜನೆಗಳಿಗೆ ಕೇಂದ್ರದ ಅನುಮೋದನೆ ಕೋರಿದ ಡಿ.ಕೆ. ಶಿವಕುಮಾರ್
    Copyright 2026 — ANU News. All rights reserved. Blogsy WordPress Theme